ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ: ಇಬ್ಬರ ಬಂಧನ

ಕೋಲಾರ: ವಂದೇ ಭಾರತ್ ರೈಲಿಗೆ ಕಲ್ಲು ಹೊಡೆದ ಘಟನೆ ಇಂದು ಮಧ್ಯಾಹ್ನ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ನಡೆದಿದ್ದು, ಇಬ್ಬರು ಬಾಲಕರನ್ನು ಆರ್‌ಪಿಎಫ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
15 ಮಂದಿ ಮುಸ್ಲಿಂ ಹುಡುಗರ ಗುಂಪು ಈ ಕೃತ್ಯ ಮಾಡಿದ್ದು, 13 ಹುಡುಗರು ಓಡಿ ಹೋಗಿದ್ದು, ಇಬ್ಬರು ಮಾತ್ರ ಸಿಕ್ಕಿಬಿದ್ದಿದ್ದಾರೆ. ಬಂಧಿತರನ್ನು ವಿಚಾರಣೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.
ಇಬ್ಬರೂ ಬಾಲಕರು ಅಪ್ರಾಪ್ತರಾಗಿರುವ ಕಾರಣ ಅವರ ಪೋಷಕರಿಂದ ಮುಚ್ಚಳಿಕೆ ಬರೆಯಿಸಿಕೊಂಡು ಬಿಡುಗಡೆ ಮಾಡಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.