ಬೀದರ್: ಬೆಂಗಳೂರಿನ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪಶು ವೈದ್ಯಕೀಯ ವಿಜ್ಞಾನ ಮತ್ತು ಪಶು ಸಂಗೋಪನೆ(ಬಿವಿಎಸ್‌ಸಿ ಮತ್ತು ಎಎಚ್) ಪದವಿ ಕೋರ್ಸಿನ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದ ಕೆ.ಎಸ್. ರವೀನಾ 15 ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾಳೆ.
ಇಲ್ಲಿಯ ಹೊರ ವಲಯ ನಂದಿನಗರದಲ್ಲಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮಾ. ೨೫ರಂದು ಹಮ್ಮಿಕೊಳ್ಳಲಾಗುವ ಘಟಿಕೋತ್ಸವದ ಸಂದರ್ಭದಲ್ಲಿ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ.
ರವೀನಾ ಅಪ್ಪಟ ಗ್ರಾಮೀಣ ಪ್ರತಿಭೆ. ಹೊಸದುರ್ಗದಲ್ಲಿ ಆಂಗ್ಲ ಮಾಧ್ಯಮದಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ಇವರು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. ೯೭.೬ ಅಂಕಗಳನ್ನು ಹಾಗೂ ದ್ವಿತೀಯ ಪಿಯು ವಾರ್ಷಿಕ ಪಕ್ಷೆಯಲ್ಲಿ ಕೂಡ ೯೭ ಪ್ರತಿಶತ ಅಂಕಗಳನ್ನು ಪಡೆದರು. ನನಗೆ ಬಂಗಾರದ ೧೫ ಪದಕಗಳು ಬರುತ್ತವೆ ಎಂದು ನಾನು ನಿರೀಕ್ಷಿಸಿರಲಿಲ್ಲ. ೧೫ ಪದಕಗಳು ಬಂದಿರುವುದರ ಶ್ರೇಯ ನನಗೆ ಶೈಕ್ಷಣಿಕವಾಗಿ ನನ್ನ ಬೆಂಗಾವಲಿಗೆ ನಿಂತ ನನ್ನ ತಂದೆ, ಈ ನಿಟ್ಟಿನಲ್ಲಿ ನನಗೆ ಪ್ರೋತ್ಸಾಹಿಸಿದ ನನ್ನ ನೆಂಟರಿಗೆ ಮತ್ತು ನನಗೆ ಪಾಠ ಮಾಡಿ ಮಾರ್ಗದರ್ಶನ ತೋರಿದ ಉಪನ್ಯಾಸಕರಿಗೆ ಸಲ್ಲುತ್ತದೆ ಎಂದು ಹೇಳಿದರು.
ಭಾಗ್ಯಶ್ರೀಗೆ 4 ಚಿನ್ನದ ಪದಕ
ಶೈಕ್ಷಣವಾಗಿ
ಹಿಂದುಳಿದಿರುವ’ ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯ ನಾರಾಯಣಪೂರ ಗ್ರಾಮದ ಹಾಗೂ ಪಶು ವೈದ್ಯಕೀಯ ವಿಜ್ಞಾನ ಹಾಗೂ ಪಶು ಸಂಗೋಪನೆ ಪದವಿ ಕೋರ್ಸಿನ ವಿದ್ಯಾರ್ಥಿನಿ ಭಾಗ್ಯಶ್ರೀ ಚಿನ್ನದ ಒಟ್ಟು 4 ಪದಕಗಳನ್ನು ಬಾಚಿಕೊಳ್ಳುವುದರ ಮೂಲಕ ಡಿಗ್ರಿ ಕೋರ್ಸ್‌ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಭೇಷ್ ಎನಿಸಿಕೊಂಡಿದ್ದಾರೆ.