ರಾಜ್ಯಪಾಲರು ಸರ್ಕಾರದ ನಡುವೆ ಯಾವ ಸಂಘರ್ಷ ಇಲ್ಲ

ತುಮಕೂರು: ರಾಜ್ಯಪಾಲರು ಸರ್ಕಾರದ ನಡುವೆ ಯಾವ ಸಂಘರ್ಷ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ಸಂಘರ್ಷ ವಿಚಾರ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ರಾಜ್ಯಪಾಲರು ಸ್ಪಷ್ಟೀಕರಣ ಕೇಳುವುದು ಸಹಜ. ನಾವು ಕಳಿಸಿದೆಲ್ಲಾ ಸರಿ ಇದೆ ಎಂದು ಅವರಿಗೆ ಅನಿಸುವುದಿಲ್ಲ.‌ ಅನೇಕ ಬಿಲ್ ಗಳಲ್ಲಿ‌ ನಾವು ಕಳಿಸೋದನ್ನು ಅವರು ಪ್ರಶ್ನೆ ಮಾಡುವುದಿಲ್ಲ ಹಾಗೆ ಸಹಿ ಹಾಕಿ ಕಳಿಸಿದ್ದಾರೆ. ಕೆಲವು ಸಂದರ್ಭದಲ್ಲಿ ಸ್ಪಷ್ಟೀಕರಣ ಕೇಳುತ್ತಾರೆ. ಆಗ ನಾವು ಸ್ಪಷ್ಟೀಕರಣ ಕೊಡುತ್ತೇವೆ ಎಂದರು.‌
ಮೈಕ್ರೋ ಫೈನಾನ್ಸ್ ಬಿಲ್ ನಲ್ಲೂ ಅವರಿಗೆ ಡೌಟ್ ಇತ್ತು. ನಾವು ಸ್ಪಷ್ಟೀಕರಣ ಕೊಟ್ಟ ನಂತರ ಅವರು ಅಂಕಿತ ಹಾಕಿದರು ಹಾಗಾಗಿ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಯಾವುದೇ ಸಂಘರ್ಷ ಇಲ್ಲ ಎಂದರು.‌ ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಮರಾಠಿ ಪುಂಡರಿಂದ ಹಲ್ಲೆ ವಿಚಾರಕ್ಕೆ ಪ್ರತಿಕ್ರಯಿಸಿ
ಅವರ ವಿರುದ್ದ ಪೊಲೀಸರು ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದು ಕೊಂಡಿದ್ದಾರೆ. ಪೋಕ್ಸೋ ಕೇಸ್ ಹಾಕಿರುವ ವಿಚಾರ ನನಗೆ ಗೊತ್ತಿಲ್ಲ. ಪೊಲೀಸರಿಂದ ಏನಾದರೂ ನ್ಯೂನತೆ ಇದ್ದರೆ ಮೇಲಿನ ಅಧಿಕಾರಿಗಳು ನೋಡುತ್ತಾರೆ. ಪೋಕ್ಸೋ ಕೇಸ್ ಹಾಕಿರುವ ಮಾಹಿತಿ ಅಧಿಕಾರಿಗಳಿಂದ ಪಡೆದು ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ಮೈಕ್ರೋಫೈನಾನ್ಸ್ ಕಿರುಕುಳನಿಂದ ಆತ್ಮಹತ್ಯೆಗಳು ಆಗುತ್ತಿರುವ ವಿಚಾರಕ್ಕೆ ಉತ್ತರಿಸಿ ಹೊಸ ಕಾನೂನು ಪರಿಣಾಮಕಾರಿಯಾಗಲು ಸ್ವಲ್ಪ ದಿನ ಸಮಯ ಬೇಕು. ನಾವು ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದರು.