ಬೆಂಗಳೂರು: ಕರ್ನಾಟಕದ ಏಳು ಮಂದಿ ಸೇರಿದಂತೆ ದೇಶದ ೪೬೩ ಭದ್ರತಾ ಅಧಿಕಾರಿಗಳಿಗೆ ಕೇಂದ್ರೀಯ ಗೃಹ ಮಂತ್ರಿ ದಕ್ಷತಾ ಪದಕ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ದೇಶದ ವಿವಿಧ ಭದ್ರತಾ ಪಡೆಗಳಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿದ್ದು, ಕರ್ನಾಟಕದ ೬ ಪೊಲೀಸ್ ಅಧಿಕಾರಿಗಳು ಹಾಗೂ ಓರ್ವ ಎಫ್ಎಸ್ಎಲ್ ಅಧಿಕಾರಿ ಸೇರಿದ್ದಾರೆ.
ರಾಜ್ಯ ಆಂತರಿಕಾ ಭದ್ರತಾ ವಿಭಾಗದ ಡಿವೈಎಸ್ಪಿ ಬಸವರಾಜ್ ಕೆ., ಬೆಂಗಳೂರು ನಗರದ ಎಸಿಪಿ ವಿ.ಎಲ್. ರಮೇಶ್, ಇನ್ಸ್ಪೆಕ್ಟರ್ಗಳಾದ ಉಮೇಶ್ ಕಾಂಬ್ಳೆ, ನರೇಂದ್ರ ಬಾಬು, ವಸಂತ್ ಕೆ.ಎಂ, ರಮೇಶ್ ಎಚ್, ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್ಎಸ್ಎಲ್) ಸೇವೆ ಸಲ್ಲಿಸುತ್ತಿರುವ ಡೆಪ್ಯೂಟಿ ಡೈರೆಕ್ಟರ್ ಡಾ.ಪ್ರವೀಣ್ ಸಂಗನಾಳ್ ಮಠ ಅವರಿಗೆ ಪದಕ ದೊರೆತಿದೆ.