ಬಾಗಲಕೋಟೆ(ಕುಳಗೇರಿ ಕ್ರಾಸ್): ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಶನಿವಾರ ಬೆಳಿಗ್ಗೆ ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ದ್ವಿಚಕ್ರ ವಾಹನದಲ್ಲಿದ್ದ ತಂದೆ-ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಎಸ್.ಎನ್ ತಿಮ್ಮಾಪೂರ ಗ್ರಾಮದ ನಿವಾಸಿಯಾದ ಬಸವರಾಜ ತಂದೆ ವಿಠಲ್ ಬಂಡಿವಡ್ಡರ (26) ಹಾಗೂ ಮೃತ ವ್ಯಕ್ತಿಯ ಮೂರು ವರ್ಷದ ಮಗು ಹುಲಿಗೆಮ್ಮ (03) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಳಗೇರಿ ಗ್ರಾಮದ ಆಂಜನೆಯ ದರ್ಶನಕ್ಕೆ ಹೊರಟಿದ್ದಾರೆಂದು ತಿಳಿದು ಬಂದಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಸ್ಥಳಕ್ಕೆ ಧಾವಿಸಿದ ಬಾದಾಮಿ ಪಿಎಸ್ಐ ವಿಠಲ್ ನಾಯಕ್ ಪೊಲೀಸರು ಪರಿಶೀಲನೆ ನಡೆಸಿದ್ದು ಡಿಕ್ಕಿ ಹೊಡೆದ ವಾಹನಕ್ಕಾಗಿ ತನಿಖೆ ಕೈಗೊಂಡಿದ್ದಾರೆ.
ಸುದ್ದಿ ತಿಳಿದ 108 ವಾಹನ ಸ್ಥಳಕ್ಕೆ ಆಗಮಿಸಿ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ತಿಳಿದು ವಾಪಾಸಾದರು.