ರಸ್ತೆಯಲ್ಲಿ ಶ್ವಾನ ಅಡ್ಡಬಂದು ಅಪಘಾತ: ಮಗು ಸೇರಿ ಮೂವರ ಸಾವು

ಸಂ.ಕ.‌ಸಮಾಚಾರ ಕಲಬುರಗಿ: ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಉಂಟಾಗಿ ರಸ್ತೆ ಅಪಘಾತದಲ್ಲಿ ಶ್ವಾನ ಅಡ್ಡಬಂದ‌ ಪರಿಣಾಮವಾಗಿ ಮಗು ಸೇರಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿರುವ ದಾರುಣ ಘಟನೆ ಅಫಜಲಪುರ ತಾಲೂಕಿನ ಗೊಬ್ಬುರು ಗ್ರಾಮದ ಬಳಿ ಘಟನೆ ನಡೆದಿದೆ.
ರಸ್ತೆ ಮೇಲೆ ಅಡ್ಡ ಬಂದ ನಾಯಿಯನ್ನ ಉಳಿಸಲು ಹೋಗಿ ಅಪಘಾತ ಉಂಟಾಗಿದೆ. ಈ ವೇಳೆ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಲ್ಲಿನ ಕಂಬಗಳಿಗೆ ಡಿಕ್ಕಿ ಹೊಡೆದ ಟವೇರಾ ವಾಹನ ನೆಲಕ್ಕುರಳಿದೆ. ಆಯೇಷಾ(70), ಅಜ್ಮೇರಾ (30) ಜೈನಬ್ (2) ಮೃತ ದುದೈವಿಗಳಾಗಿದ್ದಾರೆ.

ಸಂಬಂಧಿಕರ ಮಗುವಿನ ಜಾವಳ ಕಾರ್ಯಕ್ರಮಕ್ಕೆ ನಗರದ‌ ಮಿಲ್ಲತ್‌ ನಗರದಿಂದ ಹೈದ್ರಾ ದರ್ಗಾಕ್ಕೆ ಹೋಗುತ್ತಿದ್ದ ವೇಳೆ ಕುಟುಂಬದವರು ದುರ್ಮರಣಕ್ಕಿಡಾಗಿದ್ದಾರೆ. ಕಲಬುರಗಿಯ ಮಹಾರಾಷ್ಟ್ರ ಗಡಿಯಲ್ಲಿರುವ ಹೈದ್ರಾ ದರ್ಗಾಕ್ಕೆ ಕಾರ್ ನಲ್ಲಿ ಹೋಗುತ್ತಿದ್ದರು. ಈ ಕುರಿತು
ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.