ಯುದ್ಧಕ್ಕೆ ಸಿದ್ಧ ಎಂದ ಜಮೀರ್‌ಗೆ ಸುಮ್ಮನಿದ್ದರೆ ಸಾಕು ಎಂದ ಜೋಶಿ

ವಿಜಯಪುರ: ಜಮೀರ್ ಅಹ್ಮದ್ ಖಾನ್ ಶಾಂತವಾಗಿದ್ದರೇ ಸಾಕು. ನೀವೇನು ಮಾಡೋದು ಬೇಡ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಮೋದಿ ಅವಕಾಶ ಕೊಟ್ರೆ ನಾನು ಪಾಕ್ ಮೇಲೆ ಯುದ್ದ ಮಾಡೋಕೆ ಸಿದ್ಧ ಪ್ರಧಾನಿ ಮೋದಿ ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸಲಿ ಎಂಬ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು ಜಮೀರ್ ಅವರಂತಹ ದೊಡ್ಡ ತ್ಯಾಗಮಯಿ ಯಾರು ಇಲ್ಲ. ಜಮೀರ್ ಅಹ್ಮದ್ ಖಾನ್ ಶಾಂತವಾಗಿದ್ದರೇ ಸಾಕು. ನೀವೇನು ಮಾಡೋದು ಬೇಡ ಮಿಲಿಟರಿಯನ್ನ ನಂಬಿ ಸುಮ್ಮನಿರಿ ಸಾಕು ನಿಮ್ಮ ಭಾಷಣ ಬೇಡ. ನೀವು ಗಡಿಗೆ ಹೋಗೋದು ಬೇಡ ದೇಶದ ಸೈನಿಕರು ಇಂಟೆಲಿಜೆನ್ಸ್ ಬಗ್ಗೆ ವಿಶ್ವಾಸವಿಡಿ. ಜಮೀರ್ ಶಾಂತವಾಗಿರುವುದೇ ದೇಶಕ್ಕೆ ದೊಡ್ಡ ಸೇವೆ. ಭಾರತೀಯ ಸೈನಿಕರನ್ನ ನಂಬಿ ಸುಮ್ಮನಿರಿ ಸಾಕು. ಜಮೀರ್, ಸಂತೋಷ್ ಲಾಡ್, ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಸುಮ್ಮನಿದ್ದರೇ ಸಾಕು ಎಂದರು.