ಯಾದಗಿರಿ ಜಿಲ್ಲೆ: ಹೊಂಡದಲ್ಲಿ ಮುಳುಗಿ ಮೂವರು ಬಾಲಕರ ಸಾವು


ಯಾದಗಿರಿ: ನೀರು ಕುಡಿಯಲು ಹೋಗಿದ್ದ ಮೂವರು ಬಾಲಕರು ನೀರಿನ ಹೊಂಡದಲ್ಲಿ ಮುಳುಗಿ ದುರ್ಮರಣ ಹೊಂದಿರುವ ಘಟನೆ ನಡೆದಿದೆ.
ಯಾದಗಿರಿ ತಾಲೂಕಿನ ಅಚ್ಚೊಲಾ ತಾಂಡಾದ ಕುರಿ ಕಾಯಲು ಹೋಗಿದ್ದ ಬಾಲಕರು ಬೇಸಿಗೆ ಹಿನ್ನಲೆ ನೀರಿನ ದಾಹ ತಣಿಸಿಕೊಳ್ಳಲು ನೀರು ಕುಡಿಯಲು ಹೋಗಿದ್ದರು ಎನ್ನಲಾಗಿದೆ.
ಈ ವೇಳೆ ಕಾಲು ಜಾರಿ ಬಿದ್ದು ನೀರು ಪಾಲು ಆಗಿರ ಬಹುದು ಎಂದು ಶಂಕಿಸಲಾಗಿದೆ. ಅಚ್ಚೊಲಾ ತಾಂಡಾದ ನಿವಾಸಿಗಳಾದ ಅಮರ್(12),ಜಯ(14),ಕೃಷ್ಣಾ (10) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಮಕ್ಕಳ ಸಾವಿನ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಯಾದಗಿರಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.