ಯತ್ನಾಳ್ ನಕಲಿ ಹಿಂದು

ಬೀದರ್: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಕಲಿ ಹಿಂದು. ಅವರು ಹಿಂದು ಹುಲಿ ಅಲ್ಲ, ಇಲಿ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತನ್ನನ್ನು ತಾನೂ ರಕ್ಷಣೆ ಮಾಡಿಕೊಳ್ಳಲು ಯತ್ನಾಳ್ ಡೊಂಬರಾಟ ಮಾಡುತ್ತಾರೆ. ಜೆಡಿಎಸ್‌ಗೆ ಹೋಗಿ ಚಿಕನ್ ಕಬಾಬ್ ತಿಂದು ಅಲ್ಪಸಂಖ್ಯಾತರ ಟೋಪಿ ಧರಿಸಿದರು. ಟಿಪ್ಪು ಖಡ್ಗ ಹಿಡಿದು ಇಪ್ತಿಯಾರ್ ಕೂಟ ಮಾಡಿದವರು ಯಾರು? ಒಂದ್ಸಾರಿ ಹಿಂದು ಹುಲಿ, ಮತ್ತೊಮ್ಮೆ ಉತ್ತರ ಕರ್ನಾಟಕ ಪಂಚಮಸಾಲಿ, ವೀರಶೈವ ಹುಲಿ ಅಂತಾರೆ. ಯತ್ನಾಳ್ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ನರೇಂದ್ರ ಮೋದಿ, ಅಮೀತ್ ಷಾ ಅನುಮತಿ ನೀಡಿದರೆ ಯುದ್ಧಕ್ಕೆ ಹೋಗುವೆ ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಯಿಸಿದ ರೇಣುಕಾಚಾರ್ಯ, ಡಿಜೆ ಹಳ್ಳಿ ಸೇರಿದಂತೆ ರಾಜ್ಯದಲ್ಲಿ ಕೋಮುಗಲಭೆ ಹರಡಲು ಸಚಿವ ಜಮೀರ್ ಕಾರಣ. ಪ್ರಚಾರಕ್ಕಾಗಿ ಡೊಂಬರಾಟ ಮಾಡುತ್ತಾರೆ ಎಂದು ಹೇಳಿದರು.