ಈ ಬಾರಿ ಯತ್ನಾಳ್‌ಗೆ ಫೈನಲ್ ಡೇ. ಅರೆಸ್ಟ್ ಆಗಬೇಕು ಇಲ್ಲ ತಲೆ ಕತ್ತರಿಸಬೇಕು. ಸರ್ ತನ್ ಸೇ ಜುದಾ.. ತಲೆ ತೆಗೀಬೇಕು. ಏಪ್ರಿಲ್ 15ನೇ ತಾರೀಕು ಯತ್ನಾಳ್‌ಗೆ ಫೈನಲ್ ಡೇ. ಅಂದು ಯತ್ನಾಳ್ ನೇರವಾಗಿ ಜನ್ನತ್‌ಗೆ ಹೋಗುತ್ತಾನೆ. ಯತ್ನಾಳ್ ದಿ ಎಂಡ್’ ಎಂದು ಹೇಳಲಾಗಿದೆ.
ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹತ್ಯೆಗೆ ಸಂಚು ನಡೆದಿತ್ತು ಎನ್ನುವ ಆರೋಪ ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಅನ್ಯಕೋಮಿನ ಯುವಕ ಮಾತನಾಡಿದ ಆಡಿಯೋ ಜಿಲ್ಲೆಯಲ್ಲಿ ವೈರಲ್ ಆಗಿದೆ.
ಕಳೆದ ಏ.7 ರಂದು ಹುಬ್ಬಳ್ಳಿಯ ಬಾಣಿ ಓಣಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ಯತ್ನಾಳ್ ಭಾಷಣ ಮಾಡುವ ವೇಳೆ, ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆ, ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಸಲು ಒಟ್ಟಾಗಿ ಎಂದು ಕರೆ ನೀಡಿರುವ ಮುಸ್ಲಿಂ ಯುವಕನ ಸ್ಫೋಟಕ ಆಡಿಯೋ ವೈರಲ್ ಆಗಿದೆ. ಆಡಿಯೋ ಸಂಭಾಷಣೆಯಲ್ಲಿ ಗೆಳೆಯರೇ.. ನಮಸ್ಕಾರ ಎಲ್ಲ ಸಹೋದರ, ಸಹೋದರಿಯರಿಗೆ ನಮಸ್ಕಾರ, ಏ.15 ರಂದು ವಿಜಯಪುರ ಬಂದ್ ಮಾಡಲು ನಿರ್ಧಾರ ಆಗಿದೆ. ಇನ್ನು ಯತ್ನಾಳ್‌ಗೆ ಅದು ಫೈನಲ್ ದಿನ. ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾನೆ ಯತ್ನಾಳ್. ಇದನ್ನ ವಿರೋಧಿಸಿ 1 ಲಕ್ಷ ಜನರು ಬ್ಯಾಲಿಯಲ್ಲಿ ಸೇರುತ್ತಿದ್ದಾರೆ. ಈ ಬಾರಿ ಎಲ್ಲರು ನಿರ್ಧರಿಸಿದ್ದಾರೆ ಅವನದ್ದು ಕೊನೆಯ ದಿನ ಅಂತಾ. ಅವನು ಅರೆಸ್ಟ್ ಆಗಬೇಕು, ಬ್ಯಾಲಿ ಅವನ ಮನೆಗೆ ತೆರಳಬೇಕು, ಡ್ಯಾಲಿ ಅಲ್ಲಿಂದ ಅವನ ಮನೆಗೆ ನೇರವಾಗಿ ಹೋಗುತ್ತೆ. ಆದ್ದರಿಂದ ಎಲ್ಲ ಸಹೋದರ, ಸಹೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ಡ್ಯಾಲಿಯಲ್ಲಿ ಪಾಲ್ಗೊಳ್ಳಬೇಕು. ಏ.15 ರಂದು ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿ ಸೇರಬೇಕು, ನಿಮ್ಮ ಅಕ್ಕ ಪಕ್ಕದ ಊರುಗಳಲ್ಲಿರುವ ಎಲ್ಲ ಸ್ನೇಹಿತರು, ಅಣ್ಣ-ತಮ್ಮಂದಿರಿಗೆ ವಿಷಯ ಹೇಳಿ. ಈ ಬಾರಿ ಅವನದ್ದು ಫೈನಲ್ ದಿನ ಇದೆ. ಇಲ್ಲಿವರೆಗೂ ಅವನ ವಿರುದ್ಧ ದೂರು ಕೊಡುತ್ತಿದ್ದೆವು. ಆದರೆ ಏನಾಗುತ್ತಿತ್ತು ಅವನು ಬೇಲ್ ಮೇಲೆ ಹೊರಗಡೆ ಬರ್ತಾ ಇದ್ದ. ಈ ಬಾರಿ ಆ ರೀತಿ ಆಗಲ್ಲ. ಈ ಬಾರಿ ಅವನು ಅರೆಸ್ಟ್ ಆಗಬೇಕು, ಇಲ್ಲ ಅವನ ರುಂಡ ದೇಹದಿಂದ ಇಬ್ಬಾಗ ಆಗಬೇಕು. ಮುಸ್ಲಿಂ ಸದಸ್ಯರು ಎಲ್ಲರೂ ಸಿದ್ಧರಾಗಿ ಕುಳಿತಿದ್ದಾರೆ. ಏ.15ರಂದು ಯಾವುದೇ ಕೆಲಸ ಇದ್ದರೂ ರಜೆ ಮಾಡಿ, ಅಂಬೇಡ್ಕರ್ ವೃತ್ತದಲ್ಲಿ ಜಮಾವಣೆ ಆಗಿ. ಇನ್ ಷಾ ಅಲ್ಲಾ.. ಎಲ್ಲರು ಅಲ್ಲೇ ಸಿಗೋಣ ಎಂದು ಆಡಿಯೋನಲ್ಲಿ ಹೇಳಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.