ಯಾದಗಿರಿ : ನಗರದಿಂದ ಹೈದ್ರಾಬಾದ ತೆರಳುವ ರಾಷ್ಟ್ರೀಯ ಹೆದ್ದಾರಿ ಮುಂಡರಗಿ ರಸ್ತೆ ಮೇಲೆ ಶನಿವಾರ ಸಂಜೆ ಎರಡು ವಾಹನಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.
ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ.
ಆಟೋರಿಕ್ಷಾ ಸವಾರ ಬಸವರಾಜ ಚಂದ್ರಪ್ಪ (55) ಹಾಗೂ ಬೈಕ್ ಸವಾರ ಅಂಜನಪ್ಪ (45) ಎಂಬುವವರೇ ಮೃತ ಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸಂಚಾರಿ ಪಿಎಸ್ ಐ ವೀರೇಶ ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿದ್ದಾರೆ.