ಭೂ ಹಂಚಿಕೆ ಹಗರಣ: ಲೋಕಾಯುಕ್ತ ತನಿಖೆ ಪ್ರಾರಂಭ

ದಾಂಡೇಲಿ: ದಾಂಡೇಲಿ ನಗರಸಭೆಯಲ್ಲಿ ನಡೆದಿರುವ 1600 ಕ್ಕೂ ಹೆಚ್ಚು ಆಶ್ರಯ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರದ ತನಿಖೆಯನ್ನು ಲೋಕಾಯುಕ್ತ ಪ್ರಾರಂಭಿಸಿದೆ. ಬೆಂಗಳೂರು ಲೋಕಾಯುಕ್ತ ಕಛೇರಿಯಿಂದ ದಾಂಡೇಲಿ ನಗರಸಭೆಗೆ ಕೆಲವು ದಿವಸಗಳ ಹಿಂದೆ ನೋಟಿಸು ನೀಡಿ 1600 ನಿವೇಶನಗಳ ವಿವರವಾದ ಮಾಹಿತಿ ಕಾಲಮಿತಿಯೊಳಗೆ ವರದಿ ದಾಖಲೆ ಸಮೇತ ನೀಡುವಂತೆ ತಿಳಿಸಲಾಗಿತ್ತು. ಆದರೆ ನಗರಸಭೆಯಿಂದ ಲೋಕಾಯುಕ್ತಕ್ಕೆ ಮಾಹಿತಿ ಕಳಿಸಿಲ್ಲ. ನಗರಸಭೆಯಿಂದ ಕಾಲಾವಕಾಶ ಕೋರಿ ಪತ್ರ ಬರೆಯಲಾಗಿತ್ತು. ತನಿಖೆ ಮುಂದೂಡುವ ಹಾಗೂ ಕಾಲಹರಣ ಮಾಡುವ ಉದ್ದೇಶ ಇದರ ಹಿಂದಿದೆ ಎಂದು  ಅರಿತು ಲೋಕಾಯುಕ್ತ ತನಿಖಾಧಿಕಾರಿಗಳು ಜುಲೈ 16 ರಂದು ದಾಂಡೇಲಿ ನಗರಸಭೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಹಿಂದಿನ ಪೌರಾಯುಕ್ತ ಆರ್.ವಿ . ಜತ್ತಣ್ಣ ಅವರ ಅವಧಿಯಲ್ಲಿ ಕಡು ಬಡವರಿಗೆ ನೀಡಬೇಕಾದ ಆಶ್ರಯ ನಿವೇಶನಗಳನ್ನು ಸಿರಿವಂತರಿಗೆ, ಪತ್ರಕರ್ತರಿಗೆ, ಉದ್ಯಮಿಗಳಿಗೆ ಬೆಲೆ ಬಾಳುವ ವಾಣಿಜ್ಯ ನಿವೇಶನಗಳನ್ನು ಹಂಚಿರುವ ಕುರಿತು ಲೋಕಾಯುಕ್ತ ತನಿಖಾಧಿಕಾರಿ ಪರಿಶೀಲನೆ ನಡೆಸಲಿದ್ದಾರೆ. ಸ್ಥಳೀಯ ಉದ್ಯಮಿ ವಾಸುದೇವ ಪ್ರಭು ನೀಡಿದ ದೂರಿನನ್ವಯ ಹಾಗೂ ಹಿಂದಿನ ಪೌರಾಯುಕ್ತ ಗಣಪತಿ ಶಾಸ್ತ್ರಿ ಸರಕಾರಕ್ಕೆ ಆಶ್ರಯ ನಿವೇಶನ ಹಂಚಿಕೆಯಲ್ಲಿ ಭಾರೀ ಪ್ರಮಾಣದ ಭೃದ್ಧಾಚಾರ ನಡೆದಿರುವ ಕುರಿತು ಹಾಗೂ ನಗರಸಭಾ ಸಿಬ್ಬಂಧಿಗಳ ಶಾಮೀಲಾತಿಯ ಬಗ್ಗೆ ವಿವರಿಸಿ ಸರ್ಕಾರದಿಂದ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಬೇಕೆಂದು ವರದಿ ನೀಡಿದ್ದರು.