ಭಾರತ ವಿರೋಧಿ ಪೋಸ್ಟ್: ದೂರು ದಾಖಲು

ಕೋಲಾರ: ಮೇ 7ರಂದು ನಗರದ ಕುಂಬಾರಪೇಟೆಯ ಮುನೀರ್ ಖಾನ್ ಖುರೇಷಿ (43) ಎಂಬಾತ ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ, ಈ ದಾಳಿಯು ಕೇಂದ್ರ ಸರ್ಕಾರದ ಪೂರ್ವ ನಿಯೋಜಿತ ದಾಳಿಯಾಗಿದ್ದು ಹಾಲಿ ಬಿಹಾರದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಹಿಂದೂ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವ ಉದ್ದೇಶದಿಂದ ಇಂತಹ ಕೃತ್ಯ ಮಾಡಿಸಿದ್ದಾರೆ ಎಂದು ಆಧಾರ ರಹಿತವಾಗಿ ಸುಳ್ಳುಸುದ್ದಿ ಹಬ್ಬಿಸಿ ಸಾರ್ವಜನಿಕರಲ್ಲಿ ಅಶಾಂತಿ ಮತ್ತು ಕೋಮು ಸಹಿಷ್ಣುತೆಗೆ ದಕ್ಕೆ ಉಂಟು ಮಾಡಿದ್ದಾರೆ. ಆದ್ದರಿಂದ ಸದರಿ ವ್ಯಕ್ತಿಯ ವಿರುದ್ಧ ಗಲ್ ಪೇಟೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.