ವಾಹನಗಳ ಉತ್ಪಾದನೆ ಶೇಕಡ 15ರಷ್ಟು ಏರಿಕೆಯಾಗಿದೆ
ನವದೆಹಲಿ:ಭಾರತ ಇಂದು ಐದನೇ ಪ್ರಬಲ ಆರ್ಥಿಕ ರಾಷ್ಟ್ರವಾಗಿದ್ದು, ವಾಹನಗಳ ಉತ್ಪಾದನೆಯಲ್ಲಿ ಮೂರನೇ ಸ್ಧಾನದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಗರದಲ್ಲಿ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ- 2025ಕ್ಕೆ ಉದ್ಘಾಟಿಸಿ ಮಾತನಾಡಿ ಕಳೆದ ವರ್ಷ ವಾಹನಗಳ ಉತ್ಪಾದನೆಗೆ ಹೊಲಿಕೆ ಮಾಡಿದರೆ ಶೇಕಡ 15ರಷ್ಟು ಏರಿಕೆಯಾಗಿದೆ. ಮೇಕ್ ಇನ್ ಇಂಡಿಯಾ ಯಶಸ್ಸಿನಿಂದ ವಾಹನಗಳ ರಫ್ತು ಸಹ ಹೆಚ್ಚಾಗಿದ್ದು. ಪ್ರತಿ ವರ್ಷ ಕೋಟ್ಯಂತರ ವಾಹನಗಳು ಉತ್ಪಾದನೆಯಾಗುತ್ತಿವೆ. ಭಾರತ ಇಂದು ಐದನೇ ಪ್ರಬಲ ಆರ್ಥಿಕ ರಾಷ್ಟ್ರವಾಗಿದ್ದು, ವಾಹನಗಳ ಉತ್ಪಾದನೆಯಲ್ಲಿ ಮೂರನೇ ಸ್ಧಾನದಲ್ಲಿದೆ. ಮೂರನೇ ಪ್ರಬಲ ಆರ್ಥಿಕ ರಾಷ್ಟ್ರವಾದರೆ ವಾಹನ ಉತ್ಪಾದನೆಯಲ್ಲೂ ವಿಶ್ವದಲ್ಲಿ ಮುಂಚೂಣಿಗೆ ಬರಲಿದೆ. ವಿಕಸಿತ ಭಾರತ ಪಯಣದಲ್ಲಿ ವಾಹನೋದ್ಯಮವು ಮಹತ್ವದ ಪಾತ್ರವಹಿಸಿದೆ, ವಾಹನೋದ್ಯಮದ ಪ್ರಗತಿ ಹೆಚ್ಚಾಗಿದೆ. ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಗಳಿಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ ಎಂದರು.