ಸಿಂಧನೂರು: ರಫೇಲ್ ಯುದ್ಧ ವಿಮಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಹಾರಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡಿದ್ದ ಯುವಕನನ್ನು ತುರ್ವಿಹಾಳ ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕಿನ ಕೆ.ಹೊಸಳ್ಳಿ ಗ್ರಾಮದ ಅಜ್ಮೀರ್ (37) ಯುವಕ ಬಂಧಿತ ಯುವಕ. ಈತ ಗುರುವಾರ ಬೆಳಗ್ಗೆ ತನ್ನ ಫೇಸ್ಬುಕ್ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ರಫೇಲ್ ಯುದ್ಧ ವಿಮಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಹಾರಿಸಿದಂತೆ ಪೋಸ್ಟ್ನ್ನು ಹಂಚಿಕೆ ಮಾಡಿದ ಹಿನ್ನಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ತುರ್ವಿಹಾಳ ಪೊಲೀಸ್ ಠಾಣೆ ಪಿಎಸ್ಐ ಸುಜಾತಾ ಮಾಹಿತಿ ನೀಡಿದ್ದಾರೆ.