ಸಂ.ಕ. ಸಮಾಚಾರ ಮೈಸೂರು: ವ್ಯಕ್ತಿಯೊಬ್ಬ ನಗರದ ಹೃದಯ ಭಾಗದ ಕೆ.ಆರ್. ವೃತ್ತದಲ್ಲಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭುಜದ ಮೇಲೆ ಕುಳಿತು ರಂಪಾಟ ಮಾಡಿದ ಘಟನೆ ಸಂಜೆ ನಡೆದಿದೆ.
ಸಂಜೆ ೫.೩೦ ರ ವೇಳೆ ದಿಢೀರನೆ ವೃತ್ತ ಪ್ರವೇಶಿಸಿದ ವ್ಯಕ್ತಿ ಬಳಿಕ ಪ್ರತಿಮೆಯ ಪಾದದ ಬಳಿ ಬೀಡಿ ಇರಿಸಿದ್ದಾನೆ. ಬಳಿಕ ಪ್ರತಿಮೆಯ ಬಾಯಿಗೂ ಬೀಡಿ ಸಿಕ್ಕಿಸಲು ಯತ್ನಿಸಿ, ನಂತರ ಸಾಧ್ಯವಾಗದಿದ್ದಾರೆ ಪ್ರತಿಮೆಯ ಭುಜ ಏರಿ ಕೆಲಕಾಲ ಕುಳಿತಿದ್ದಾನೆ. ದಾರಿಹೋಕರು, ಹಿರಿಯ ನಾಗರೀಕರು ಇದರಿಂದ ಅಸಮಾಧಾನಗೊಂಡು ಕೆಳಗೆ ಇಳಿಯವಂತೆ ಸೂಚಿಸಿದರೂ ಆತ ಬಹು ಹೊತ್ತಿನವರೆಗೆ ಇಳಿಯಲೇ ಇಲ್ಲ.
ಇದು ಹೆಚ್ಚು ವಾಹನ ಸಂಚಾರ, ಜನದಟ್ಟಣೆ ಇರುವ ಸ್ಥಳವಾಗಿದ್ದು, ಸಂಚಾರಿ ಪೊಲೀಸರು, ಹೋಂ ಗಾರ್ಡ್ಗಳು ಸಹಾ ಈ ವೃತ್ತದಲ್ಲಿ ನಿಯೋಜಿತರಾಗಿರುವುದು ಸಾಮಾನ್ಯ. ಹೀಗಿದ್ದರೂ ಈತನ ಈ ಹುಚ್ಚಾಟ ಕಂಡೂ ಕಾಣದಂತೆ ಇದ್ದುದು ಸಾರ್ವಜನಿಕರಿಗೆ ಬೇಸರ ತರಿಸಿದೆ. ಕೆಲಹೊತ್ತಿನ ನಂತರ ಆತ ಅಲ್ಲಿಂದ ಮರೆಯಾಗಿದ್ದು, ಮಾನಸಿಕ ಅಸ್ವಸ್ಥ, ಇಲ್ಲವೇ ಮದ್ಯ ಸೇವನೆಯ ಅಮಲಿನಲ್ಲಿ ಈ ರೀತಿ ಮಾಡಿರಬಹುದೆಂದು ಶಂಕಿಸಲಾಗಿದೆ.