ಇಳಕಲ್ : ಪೌರಸೇವಾ ನೌಕರರ ಬೇಡಿಕೆಗಳು ಈಡೇರಬೇಕಾದರೆ ಅವರು ಕೂಡಲೇ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕು ಎಂದು ದೀಪು ದೀಕ್ಷಾ ಸಾಂಸ್ಕೃತಿಕ ಸಂಸ್ಥೆಯ ಸದಸ್ಯ ಗಿರೀಶ್ ಅಚನೂರ ಕರೆಕೊಟ್ಟರು
ಇಲ್ಲಿನ ನಗರಸಭೆಯ ಕಾರ್ಯಾಲಯದ ಆವರಣದಲ್ಲಿ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟ ಮುಷ್ಕರ ಸ್ಥಳಕ್ಕೆ ದೀಪು ದೀಕ್ಷಾ ಸಾಂಸ್ಕೃತಿಕ ಸಂಸ್ಥೆ, ಯೂನಿಯನ್ ಸಂಸ್ಥೆ, ಬೀದಿ ಬದಿ ವ್ಯಾಪಾರಸ್ಥರ ಸಂಘದ ವತಿಯಿಂದ ಬೆಂಬಲ ಸೂಚಿಸುವ ಸಮಯದಲ್ಲಿ ಮಾತನಾಡಿದ ಅವರು ಸರಕಾರ ಕಣ್ಣು ಕಿವಿ ಮುಚ್ಚಿಕೊಂಡು ಕುಳಿತಿರುತ್ತದೆ ಅದರ ಕಣ್ಣು ತೆರೆಸಬೇಕಾದರೆ ಕಠಿಣ ಕ್ರಮ ಅಗತ್ಯ ಎಂದು ಹೇಳಿದರು,
ಸಂಸ್ಥೆಯ ಸಂಚಾಲಕಿ ಸವಿತಾ ಚಲುವಾದಿ ಮಾತನಾಡಿ ಊರಲ್ಲಿ ಎಷ್ಟೇ ಕಸ ಬಿದ್ದರೂ ತೆಗೆಯಬೇಡಿ ಹಂದಿ ನಾಯಿ ಬೆಕ್ಕು ಸತ್ತರೆ ಹಾಗೆ ಬಿಡಿ ಅವುಗಳ ದುರ್ನಾತ ಎಸಿ ರೂಮಿನಲ್ಲಿ ಕುಳಿತು ಆಡಳಿತ ನಡೆಸುವ ಅಧಿಕಾರಿಗಳಿಗೆ ಗೊತ್ತಾಗಬೇಕು ಎಂದು ಹೇಳಿದರು, ನಗರಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಿ ಸಿ ಚಂದ್ರಪಟ್ಟಣ ಮಾತನಾಡಿ ಪೌರಸೇವಾ ನೌಕರರು ಅನುಭವಿಸುವ ನೋವುಗಳು ಅಪಾರ ಪ್ರಮಾಣದಲ್ಲಿ ಇವೆ ಅವುಗಳ ಪರಿಹಾರ ಆಗುವವರೆಗೆ ಹೋರಾಟ ನಡೆಯಲಿ ಎಂದು ಹೇಳಿದರು, ಈ ಸಮಯದಲ್ಲಿ ಎಲ್ ಬಿ ಅರಸಿದ್ದಿ ಟಿ ಎಚ್ ಕುಲಕರ್ಣಿ, ಕಾಶೀಮ ಅಲಿ ಮಕಾನದಾರ ಬಸವರಾಜ ಮಠದ ಮಹಾಂತೇಶ ಗೊರಜಿನಾಳ ಬಿ ಬಾಬು ಮಲ್ಲಿಕಾರ್ಜುನ ಇಂದರಗಿ ಶಿರಸು ಪತ್ತಾರ ಮತ್ತಿತರರು ಉಪಸ್ಥಿತರಿದ್ದರು