ಗದಗ: ಅಜ್ಜಿಯ ಸಾವಿನ ದುಃಖದ ನಡುವೆಯೂ ಶಾಲಾ ವಿದ್ಯಾರ್ಥಿನಿಯೋರ್ವಳು ಹತ್ತನೇ ತರಗತಿ ಪರೀಕ್ಷೆ ಬರೆದಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ನಡೆದಿದೆ.
ಮುಂಡರಗಿ ತಾಲೂಕು ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಜಲಜಾಕ್ಷಿ ಪ್ರಕಾಶ ಕಿಲಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ.
ಘಟನೆ ವಿವರ : ಕಳೆದ ರಾತ್ರಿ ವಿದ್ಯಾರ್ಥಿನಿಯ ಅಜ್ಜಿ ಗಂಗಮ್ಮ ನಿಧನ ಹೊಂದಿದ್ದಾರೆ, ಈ ದುಃಖದಲ್ಲಿದ್ದ ವಿದ್ಯಾರ್ಥಿನಿ ಪರೀಕ್ಷೆಗೆ ಗೈರು ಆಗುವ ವಿಷಯ ತಿಳಿದು, ಭಯ ಬೀತಳಾಗಿದ್ದ ಹಾಗೂ ಮಾನಸಿಕವಾಗಿ ಗೊಂದಲದಲ್ಲಿದ್ದ ವಿದ್ಯಾರ್ಥಿನಿಗೆ ಮನೆಯ ಪಾಲಕರು,
ವಿದ್ಯಾರ್ಥಿನಿಯ ಬಳಿಗೆ ತೆರಳಿದ ಶಿಕ್ಷಕರು, ಮತ್ತು ಅವಳ ಸಹಪಾಠಿಗಳು ಶಾಲೆಗೆ ಕರೆದುಕೊಂಡು ಬಂದು ಧೈರ್ಯ ತುಂಬಿದ್ದಾರೆ ಪರೀಕ್ಷೆಗೆ ಬರುವಾಗ ತನ್ನ ಅಜ್ಜಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿ ಪುಷ್ಪ ಸಮರ್ಪಿಸಿ ಆಶೀರ್ವಾದ ಪಡೆದುಕೊಂಡು ಬಂದು ಪರೀಕ್ಷೆ ಬರೆದಿದ್ದಾಳೆ. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿಯರಾದ ಎ ಬಿ ಬೇವಿನಕಟ್ಟಿ, ಸಂಜುತ ಸಂಕಣ್ಣವರ್, ಎಸ್ಎಂ ಹಂಚಿನಾಳ, ಬುದಪ್ಪ ಅಂಗಡಿ ಎಸ್ ಎಸ್ ತಿಮ್ಮಾಪುರ್ ಎಂ ಎಂ ಗೌಳೆರ ಎಲ್ಲ ಶಿಕ್ಷಕರು ವಿದ್ಯಾರ್ಥಿನಿ ಪರೀಕ್ಷಾ ಕೊಠಡಿಗೆ ಹೋಗಿ ದೈರ್ಯ ತುಂಬಿದ್ದಾರೆ.