ಕಲಬುರಗಿ: ಹೊಟ್ಟೆ ನೋವಿನಿಂದ ಬೇಸತ್ತ ಕೆಇಬಿ ಇಲಾಖೆಯ ಜೆಇಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ತಾಲೂಕಿನ ನಂದಿಕೂರ ಗ್ರಾಮದಲ್ಲಿ ನಡೆದಿದೆ.
ಕಲಬುರಗಿ ತಾಲೂಕಿನ ನಂದಿಕೂರ ಗ್ರಾಮದ ನಿವಾಸಿಯಾಗಿರುವ ಮಲ್ಲಿಕಾರ್ಜುನ ಎಂಬಾತರೆ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮಲ್ಲಿಕಾರ್ಜುನ್ ಅವರು ಕೆಇಬಿ ನರೋಣಾ ಶಾಖೆಯಲ್ಲಿ ಜೆಇ ಆಗಿ 9 ತಿಂಗಳಿಂದ ಸೇವೆ ಸಲ್ಲಿಸುತ್ತಿದ್ದರು. ಅವರು ಆಗಾಗ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು, ಹಾಗಾಗಿ ಅವರು ಅನೇಕ ಆಸ್ಪತ್ರೆಗಳಿಗೆ ತೋರಿಸಿದ್ದಾರೆ. ಹೊಟ್ಟೆ ನೋವು ಕಡಿಮೆ ಆಗದೆ ಇದ್ದರೂ ಅವರು ಕೆಲಸದಲ್ಲಿ ನಿರತರಾಗಿದ್ದರು ಎನ್ನಲಾಗಿದೆ.
ಸೋಮವಾರ ಬೆಳಗ್ಗೆ 9ಗಂಟೆಗೆ ತಮ್ಮ ಹೊಲಕ್ಕೆ ಹೋಗುವುದಾಗಿ ಹೇಳಿ ಹೋದ ಮಲ್ಲಿಕಾರ್ಜುನ ತಮಗಿದ್ದ ಹೊಟ್ಟೆ ನೋವು ತಾಳಲಾಗದೆ ಅವರು ಹೊಲದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.