ನೀರಿನ ಸಮಸ್ಯೆ: ಬಿಜೆಪಿ ಶಾಸಕರ ವಿರುದ್ಧವೇ ಜನಾಕ್ರೋಶ


ಮುದಗಲ್: ಪಟ್ಟಣ ಪಂಚಾಯಿತಿಯಲ್ಲಿ ಘನತ್ಯಾಜ್ಯ ವಿಲೇವಾರಿ ವಾಹನಗಳ ಉದ್ಘಾಟನೆಗೆ ಆಗಮಿಸಿದ್ದ ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಅವರ ವಿರುದ್ಧ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ
ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಹಾಗೂ ಪಟ್ಟಣದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಪಟ್ಟಣಕ್ಕೆ ವಾಹನಗಳ ಉದ್ಘಾಟನೆಗೆ ಆಗಮಿಸಿದ ಶಾಸಕ ಮಾನಪ್ಪ ವಜ್ಜಲ್ ಅವರೊಂದಿಗೆ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಶರಣಪ್ಪ ಕಟ್ಟಿಮನಿ ಬಸವರಾಜ್ ಬಂಕದ್ಮನಿ ಸೇರಿದಂತೆ ನಾಗರಿಕರು ವಾಗ್ವಾದ ನಡೆಸಿದರು. ಶಾಸಕರಾಗಿ ಎರಡು ವರ್ಷವಾದರೂ ಮುದುಗಲ್ ಪಟ್ಟಣದ ಅಭಿವೃದ್ಧಿಗೆ ಮತ್ತು ಸಮಸ್ಯೆಗೆ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಮಧ್ಯಪ್ರವೇಶಿಸಿದ
ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಅವರು
ವಾಹನಗಳ ಉದ್ಘಾಟನೆ ಬಳಿಕ ಚರ್ಚಿಸೋಣ ಎಂದು ತಿಳಿಗೊಳಿಸಿದರು.