ನಾವೀನ್ಯತೆಯಲ್ಲಿ ಹೊಸ ಅಲೆ

ಕಂಟೆಂಟ್ ರಚನೆಕಾರರಿಗಾಗಿ ಬ್ರಹ್ಮ ಅವರ ಎಐ-ಚಾಲಿತ ಉತ್ಪನ್ನ

ಕಂಟೆಂಟ್ ಸೃಷ್ಟಿಯ ಭವಿಷ್ಯಕ್ಕಾಗಿ ವಿನ್ಯಾಸಗೊಳಿಸಲಾದ ವೇದಿಕೆಯ ಮೂಲಕ ಬ್ರಹ್ಮ, ಕಥೆ ಹೇಳುವಿಕೆಯ ಕಲೆಗೆ ಹೊಸ ವ್ಯಾಖ್ಯಾನವನ್ನೆ ಬರೆಯಲಿದೆ

ಬೆಂಗಳೂರು: ಭಾರತದ ಪ್ರಮುಖ ಕಂಟೆಂಟ್ ಸೃಷ್ಟಿಕರ್ತ ಪ್ರೈಮ್ ಫೋಕಸ್, ಜೆನೆರೆಟಿವ್ ಎಐ ಪರಿಸರವನ್ನು ಪರಿವರ್ತಿಸುವಲ್ಲಿ ಮುಂಚೂಣಿಯಲ್ಲಿದೆ; ಭಾರತವನ್ನು ಜಾಗತಿಕ ವೇದಿಕೆಯಲ್ಲಿ ಇರಿಸಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ನಮಿತ್ ಮಲ್ಹೋತ್ರಾ ಅವರ ನೇತೃತ್ವದಲ್ಲಿ ಕಂಪನಿಯ ಮಹತ್ವದ ಸ್ವಾಧೀನಗಳು ಭಾರತೀಯ ಕಲಾವಿದರಿಗೆ ಉನ್ನತವಾದ ಜಾಗತಿಕ ವೇದಿಕೆಯಲ್ಲಿ ಸ್ಥಾನ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿವೆ. ಈ ಪ್ರಯತ್ನದ ಫಲವಾಗಿ ಡಿಎನ್ಇಜಿ ಗೆ ವಿಷುಯಲ್ ಇಫೆಕ್ಟ್ ವಿಭಾಗದಲ್ಲಿ ಏಳು ಅಕೆದಮಿ ಪ್ರಶಸ್ತಿಗಳು ಲಭಿಸಿವೆ, ಮತ್ತು ಹಲವಾರು ಇತರ ಪುರಸ್ಕಾರಗಳೂ ದೊರೆತಿವೆ. ಈಗ ಇದು, ನಾವೀನ್ಯತೆಯಲ್ಲಿ ಹೊಸ ಅಲೆಯನ್ನು ಎಬ್ಬಿಸುತ್ತಿದೆ. ಬ್ರ್ಯಾಂಡ್ ಡಿಎನ್ಇಜಿ ಯ ಬ್ರಹ್ಮ ಅಡಿಯಲ್ಲಿ ತನ್ನ ಇತ್ತೀಚಿನ ಸ್ವಾಧೀನದೊಂದಿಗೆ ಜೆನೆರೆಟಿವ್ ಎಐ ತಂತ್ರಜ್ಞಾನ ವೇದಿಕೆಗೆ ಹಾರುತ್ತಿದೆ.

ಡಿಎನ್ಇಜಿ ಸಮೂಹ ರಚಿಸಿದ ಜಾಗತಿಕ ಎಐ ಮತ್ತು ಕಂಟೆಂಟ್ ತಂತ್ರಜ್ಞಾನ ಕಂಪನಿಯಾದ ಬ್ರಹ್ಮ, ಎಐ ಕಂಟೆಂಟ್ ಸೃಷ್ಟಿ ತಂತ್ರಜ್ಞಾನಗಳ ಪ್ರಮುಖ ಡೆವಲಪರ್ ಮೆಟಾಫಿಸಿಕ್ ಅನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಇಂದು ಘೋಷಿಸಿದೆ. ವಿಲೀನದ ಮೂಲಕ ಜಾರಿಗೆ ತರಲಾದ ಈ ಸ್ವಾಧೀನ ಉದ್ಯಮಗಳು, ಐಪಿ ಹಕ್ಕುದಾರರು ಮತ್ತು ಕೈಗಾರಿಕೆಗಳಾದ್ಯಂತ ಕಂಟೆಂಟ್ ರಚನೆಕಾರರಿಗಾಗಿ ಬ್ರಹ್ಮ ಅವರ ಎಐ-ಚಾಲಿತ ಉತ್ಪನ್ನಗಳ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲಿದೆ. ಸ್ಕೇಲ್ ಗೆ ತಕ್ಕಂತೆ ಅತ್ಯುನ್ನತ ಗುಣಮಟ್ಟದ ಕಂಟೆಂಟನ್ನು ರಚಿಸಲು ಅವರನ್ನು ಸಮರ್ಥರನ್ನಾಗಿಸುತ್ತದೆ.

ಕಸ್ಟಮೈಸ್ ಮಾಡಿದ ಕಂಟೆಂಟ: ವೀಡಿಯೊ, ಚಿತ್ರ ಮತ್ತು ಆಡಿಯೊ ಸ್ವರೂಪಗಳಲ್ಲಿ ಬಳಕೆದಾರರಿಗಾಗಿ ಕಸ್ಟಮೈಸ್ ಮಾಡಿದ ಕಂಟೆಂಟನ್ನು ಉತ್ಪಾದಿಸಲು ವಿನ್ಯಾಸಗೊಳಿಸಲಾದ ಎಐ-ಸ್ಥಳೀಯ ಸಮಗ್ರ ಉತ್ಪನ್ನಗಳ ಭಾಗವಾಗಿ ಬ್ರಹ್ಮ ಎಐ, ಡೇಟ ಮತ್ತು ಕಂಟೆಂಟ್ ಕೆಲಸದ ಹರಿವಿನ ನಿರ್ವಹಣೆಗೆ ಮೂಲಭೂತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸಜ್ಜಾಗಿದೆ. ಈ ವಹಿವಾಟಿನ ನಂತರ, ಬ್ರಹ್ಮ ಅವರ ಜಾಗತಿಕ ತಂಡ 800+ ಎಂಜಿನಿಯರ್‌ಗಳು ಮತ್ತು ಸೃಜನಶೀಲ ತಂತ್ರಜ್ಞರನ್ನು ಒಳಗೊಳ್ಳುವಷ್ಟು ಬೆಳೆಯುತ್ತದೆ. ಈ ತಂಡವು ಡಿಎನ್ಇಜಿ ಸಮೂಹದ ಸೃಜನಶೀಲ ತಂತ್ರಜ್ಞಾನ ಪೋರ್ಟ್‌ಫೋಲಿಯೊದಲ್ಲಿರುವ ಪ್ರಶಸ್ತಿ ವಿಜೇತ ನಾವೀನ್ಯತೆಗಳನ್ನು ವಿಲೀನಗೊಳಿಸುತ್ತದೆ. ಇದರಲ್ಲಿ ಡಿಜಿಟಲ್ ಮಾನವರು ಮತ್ತು ಪಾತ್ರಗಳ ಸಿಮ್ಯುಲೇಶನ್‌ಗಳನ್ನು ಸೃಷ್ಟಿಸಲು ಮೆಟಾಫಿಸಿಕ್‌ನ ಪ್ರವರ್ತಕ ಎಐ ತಂತ್ರಜ್ಞಾನದೊಂದಿಗೆ ಝಿವಾದ ತಂತ್ರಜ್ಞಾನ ಸಹ ಸೇರಿರುತ್ತದೆ. ಮತ್ತೂ, ಅವರು ಕಂಟೆಂಟ್ ಅನ್ವೇಷಣೆ, ಸೃಷ್ಟಿ ಮತ್ತು ನಿರ್ವಹಣೆಯಲ್ಲಿ ಎಂಟು ವರ್ಷಗಳ ಸಂಶೋಧನೆ ಮತ್ತು ಅಭಿವೃದ್ಧಿ ಮೂಲಕ ನಿರ್ಮಿಸಲಾದ ಮಾರುಕಟ್ಟೆ-ಪ್ರಮುಖ ಎಐ ಪರಿಹಾರವಾದ CLEARⓇ ವೇದಿಕೆಯನ್ನು ಬಳಸಿಕೊಳ್ಳುತ್ತಾರೆ ಮತ್ತು ಜಾಗತಿಕ ಕ್ಲೈಂಟ್ ಬೇಸ್‌ನ ಬೆಂಬಲವಿರುತ್ತದೆ.

2025 ಸ್ಕೈಟೆಕ್ ಪ್ರಶಸ್ತಿ: ಝಿವಾ, ಅಕೆದಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸಸ್‌ ನಿಂದ 2025 ಸ್ಕೈಟೆಕ್ (2025 SciTech) ಪ್ರಶಸ್ತಿ ಗಳಿಸಿತು. ನಂತರ, ಮೆಟಾಫಿಸಿಕ್‌ನ ಎಐ ನ ನ್ಯೂರಲ್ ಕಾರ್ಯಕ್ಷಮತೆಯ ಪರಿಕರಗಳಿಗೆ ಪ್ರತಿಷ್ಠಿತ ವಿಷುಯಲ್ ಎಫೆಕ್ಟ್ಸ್ ಸೊಸೈಟಿ ಪ್ರಶಸ್ತಿಗಳಲ್ಲಿ ಉದಯೋನ್ಮುಖ ತಂತ್ರಜ್ಞಾನ ಪ್ರಶಸ್ತಿ ಲಭಿಸಿತು. ಈ ಪ್ರಶಸ್ತಿಗಳ ಬೆನ್ನಲ್ಲೆ ಈ ವಿಲೀನೀಕರಣದ ಘೋಷಣೆ ಆಗಿದೆ.

ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಬಲೀಕರಣ: “ಪ್ರೈಮ್ ಫೋಕಸ್‌ನಲ್ಲಿ, ನಮ್ಮ ದೃಷ್ಟಿಕೋನದ ಕೇಂದ್ರ ಬಿಂದು ಯಾವಾಗಲೂ ನಾವೀನ್ಯತೆಯೇ. ಭಾರತದ ಬಹುದೊಡ್ಡ ಪ್ರತಿಭಾನ್ವಿತ ಸಮೂಹವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಬಲೀಕರಣಗೊಳಿಸಿದರೆ ಅವರು ಕೈಗಾರಿಕೆಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಅನುವಾಗುತ್ತದೆ ಎಂದು ನಾವು ನಮ್ಬಿ ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ. ನಮ್ಮ ಇತ್ತೀಚಿನ ಸ್ವಾಧೀನ, ಒಂದು ದಿಟ್ಟ ಹೆಜ್ಜೆಯಾಗಿದೆ – ಇದು ಜಾಗತಿಕ ಮನರಂಜನಾ ಸನ್ನಿವೇಶವನ್ನು ಬದಲಿಸಲು ಸಿದ್ಧವಾಗಿದೆ. ಈ ಪ್ರಗತಿ, ಕಥೆ ಹೇಳುವಿಕೆಯಲ್ಲಿ ಹೊಸ ಆಯಾಮವೊಂದನ್ನು ಸೃಷ್ಟಿಸುತ್ತದೆ; ನಮ್ಮದೇ ಆದ ರಾಮಾಯಣವನ್ನು ಸಾಟಿಯಿಲ್ಲದ ವಸ್ತುನಿಷ್ಠವಾಗಿ ಮತ್ತು ಪರವಶಗೊಳಿಸುವ ಅನುಭವಗಳೊಂದಿಗೆ ಜೀವಂತಗೊಳಿಸುತ್ತದೆ. ಕಳೆದ ವರ್ಷ, ನಾವು ಝಿವಾವನ್ನು ಸ್ವಾಧೀನಪಡಿಸಿಕೊಂಡೆವು, ಮತ್ತು ಈಗ, ಬ್ರಹ್ಮ ಮೆಟಾಫಿಸಿಕ್ ಅನ್ನು ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ, ಕೈಗಾರಿಕೆಗಳಲ್ಲಿ ಭಾರತದ ಅತ್ಯಂತ ಐಕಾನಿಕ್ ವ್ಯಕ್ತಿಗಳ ಅಲ್ಟ್ರಾ-ರಿಯಲಿಸ್ಟಿಕ್ ಡಿಜಿಟಲ್ ಡಬಲ್‌ಗಳನ್ನು ರಚಿಸಲು ಬೇಕಾದ ಮಾರುಕಟ್ಟೆ-ಪ್ರಮುಖ 3D ಮತ್ತು 2D ಪರಿಕರಗಳನ್ನು ಹೊಂದಿದ್ದೇವೆ.

ನಮಿತ್ ಮಲ್ಹೋತ್ರಾ: ಪ್ರೈಮ್ ಫೋಕಸ್‌ನ ಸಂಸ್ಥಾಪಕ ಮತ್ತು ಡಿಎನ್ಇಜಿ ಯ ಗ್ಲೋಬಲ್ ಸಿಇಒ

ಉತ್ಪನ್ನಗಳ ಸಮೂಹವನ್ನು ಸೃಷ್ಟಿ: ಬ್ರಹ್ಮದೊಂದಿಗೆ, ನಾವು ಡಿಎನ್ಇಜಿ ಯ ಬಹು ಅಕೆದಮಿ ಪ್ರಶಸ್ತಿ ವಿಜೇತ ದೃಶ್ಯ ಪರಿಣಾಮಗಳು ಮತ್ತು ಅನಿಮೇಷನ್ ಟೂಲ್‌ಸೆಟ್‌ಗಳನ್ನು ತೆಗೆದುಕೊಂಡು ಅವುಗಳೊಂದಿಗೆ ಜೆನೆರೆಟಿವ್ ಎಐ ಯ ಅದ್ಭುತ ಶಕ್ತಿಯನ್ನು ಸಂಯೋಜಿಸಿ ಎಐ ಕಂಟೆಂಟ್ ಉತ್ಪನ್ನಗಳ ಸಮೂಹವನ್ನು ಸೃಷ್ಟಿಸಲಿದ್ದೇವೆ. ಇದರಲ್ಲಿ, ಉದ್ಯಮದಲ್ಲಿಯೇ ಪ್ರಮುಖ ಎಂದು ನಾವು ನಂಬಿರುವ ಫೋಟೋರಿಯಲಿಸ್ಟಿಕ್ ಎಐ ವೀಡಿಯೊ ಕ್ರಿಯೇಟರ್ ಕೂಡ ಇರುತ್ತದೆ. ಉನ್ನತ ಮಟ್ಟದ ಚಲನಚಿತ್ರ ಮತ್ತು ಟಿವಿ ನಿರ್ಮಾಣದ ಬಗ್ಗೆ ಗಮನವಿರುವ ರೂಢಿಗತ ಬಳಕೆದಾರ ನೆಲೆಯಿಂದ ವಿವಿಧ ಕೈಗಾರಿಕೆಗಳಲ್ಲಿ ಉದ್ಯಮಗಳು ಮತ್ತು ಕಂಟೆಂಟ್ ರಚನೆಕಾರರಿಗೆ ಸೇವೆ ಸಲ್ಲಿಸುವ ಮಟ್ಟಕ್ಕೆ ಬ್ರಹ್ಮವನ್ನು ಒಯ್ಯಲು ನಾನು ಉತ್ಸುಕನಾಗಿದ್ದೇನೆ. ನಿಮ್ಮಲ್ಲಿ ಅದ್ಭುತವಾದ ಕಥೆ ಇದ್ದರೆ ಮತ್ತು ಅದನ್ನು ಜೀವಂತಗೊಳಿಸುವ ಕಲ್ಪನೆಯನ್ನು ಹೊಂದಿದ್ದರೆ; ಅದನ್ನು ವೇಗವಾಗಿ, ಮಿತ ವ್ಯಯದಲ್ಲಿ ಮತ್ತು ಉತ್ತಮ ಗುಣಮಟ್ಟದೊಂದಿಗೆ ಸಿದ್ಧಪಡಿಸಲು ಸಹಾಯ ಮಾಡುವ ಸಾಧನಗಳು ನಮ್ಮಲ್ಲಿವೆ.

ಪ್ರಭು ನರಸಿಂಹನ್: ಬ್ರಹ್ಮದ ಕಾರ್ಯನಿರ್ವಾಹಕ ಅಧ್ಯಕ್ಷ