ಹುಳಿಯಾರು: ಐತಿಹಾಸಿಕ ಪ್ರಯಾಗ್ರಾಜ್ ಕುಂಭ ಮೇಳದಲ್ಲಿ ಹುಳಿಯಾರು ಸಮೀಪದ ಹೆಗ್ಗೆರೆಯ ಚೋಳರ ಕಾಲದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಮಹಾರುದ್ರ ಶಿವಾಲಯದ ಬಗ್ಗೆ ಪ್ರಸ್ತಾಪಿಸಿದ್ದ ನಾಗಾಸಾಧು ಧನಂಜಯ ಗುರೂಜಿ ಚಿಕ್ಕನಾಯಕನಹಳ್ಳಿ ತಾಲೂಕು ಹೆಗ್ಗೆರೆಗೆ ಆಗಮಿಸಿದರು. ಚಿತ್ರದುರ್ಗ, ಹೊಸದುರ್ಗ, ಹಿರಿಯೂರು,ಕಂಚೀಪುರ,ಯಳನಾಡು,ದಸೂಡಿ,ಹುಳಿಯಾರು,ಶ್ರೀರಾಂಪುರ ಮುಂತಾದ ಭಾಗದಿಂದ ಭಕ್ತ ಸಮೂಹ ಆಗಮಿಸಿ ನಾಗಾಸಾಧುವಿನ ದರ್ಶನ ಪಡೆದರು.