ನರೇಗಾ ಗೋಲ್‌ಮಾಲ್: ಗಂಡಸರಿಗೆ ಹೆಂಗಸರ ವೇಷ!

ಯಾದಗಿರಿ: ಗಂಡಸರಿಗೆ ಸೀರೆ ತೊಡಸಿ ನರೇಗಾ ಯೋಜನೆ ಅಡಿಯಲ್ಲಿ ಹಣ ಲಪಟಾಯಿಸಲು ಮುಂದಾಗಿರುವ ಫೋಟೋ ಆನ್‌ಲೈನ್ ಅಪ್ಲೋಡ್ ಮಾಡಲಾಗಿದೆ.
ಯಾದಗಿರಿ ತಾಲೂಕಿನ ಮಲ್ಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರೊಬ್ಬರ ಜಮೀನಿನಲ್ಲಿ ಸುಮಾರು ರೂ .೩ ಲಕ್ಷ ವೆಚ್ಚದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಹೂಳೆತ್ತುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಕೂಲಿ ಕಾರ್ಮಿಕರ ಕೆಲಸ ಮಾಡುವ ಸಂದರ್ಭದಲ್ಲಿ ಅವರ ಫೋಟೊಗಳನ್ನು ತೆಗೆದ ಎನ್‌ಎಂಎಂಎಲ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ. ಈ ವೇಳೆ ಕಾಮಗಾರಿ ಸ್ಥಳಕ್ಕೆ ಮಹಿಳೆಯರನ್ನು ಕರೆದಕೊಂಡು ಬಾರದ ಅಧಿಕಾರಿಗಳು ಪುರಷರಿಗೆ ಸೀರೆಯನ್ನು ತೊಡಸಿ ಅವರೇ ಮಹಿಳೆಯರು ಎನ್ನುವಂತೆ ಬಿಂಬಿಸಿ ಮಹಿಳೆಯರ ಹೆಸರಿನಲ್ಲಿ ಹಣ ಪಡೆಯಲು ಯೋಜನೆ ರೂಪಿಸಿದ್ದಾರೆ. ಇದಕ್ಕೆ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದ ಹೊರಗುತ್ತಿಗೆ ನೌಕರನೊಬ್ಬ ಸಾಥ್ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಕೂಲಿ ಕಾರ್ಮಿಕರ ವೇತನ ಪಾವತಿ ಮಾಡುವ ಸಂದರ್ಭದಲ್ಲಿ ಪಂಚಾಯಿತಿ ಮೇಲಾಧಿಕಾರಿಗಳಿಗೆ ಘಟನೆಯ ವಾಸ್ತವ ಅಂಶ ಗೊತ್ತಾಗಿದೆ.