ತುಮಕೂರು: ನಮಗೆ ಬೇಕಿರುವುದು ಪದವಿಗಳಲ್ಲ. ಅದರ ಬದಲಾಗಿ ಸಮಾನತೆ, ಬ್ರಾತೃತ್ವದಂತಹ ಮನಸ್ಥಿತಿ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.
ಬೆಳ್ಳಾವಿಯ ಕಾರದ ಮಠದಲ್ಲಿ ಕತೃ ಗದ್ದುಗೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಮಗೆ ವಿಶ್ವವಿದ್ಯಾಲಯ ಬೇಕಿಲ್ಲ. ಗುರು ಪರಂಪರೆ ಬೇಕಿದೆ. ವಿಶ್ವವಿದ್ಯಾಲಯ ಮುಚ್ಚಿರುವ ಈ ಸಂದರ್ಭದಲ್ಲಿ ಗುರು ಪರಂಪರೆ ಬೇಕಿದೆ. ಭಗವಾನ್ ಬುದ್ಧ, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ವಿಶ್ವ ಗುರು ಬಸವಣ್ಣನವರು ನಮಗೆ ಮಾರ್ಗದರ್ಶಕರಾಗಿದ್ದಾರೆ. ಎಂದರು.
ಬಸವಣ್ಣ ಮೂರ್ತಿಯನ್ನು ಲಂಡನ್‌ನ ಥೇಮ್ಸ್ ನದಿಯ ದಂಡೆಯಲ್ಲಿ ಕಟ್ಟಿದ್ದಾರೆ. ಅದಕ್ಕೆ ನಾನೂ ಮತ್ತು ಯಡಿಯೂರಪ್ಪ ಸಹಾಯ ಮಾಡಿದ್ದೇವೆ. ಬಸವಣ್ಣನ ತತ್ವಗಳನ್ನ ಸಾರಲು ನಾನೂ ಕೂಡ ಸಹಾಯ ಮಾಡಿದ್ದೇನೆ. ಅಣ್ಣ ಬಸವಣ್ಣನ ತತ್ವ ಲಂಡನ್‌ನಲ್ಲಿ ಪ್ರಚಾರ ಆಗುತ್ತಿದೆ ಎಂದರು.
ಬಸವಣ್ಣನವರು, ಸಮಾಜಕ್ಕೆ, ಮನುಕುಲಕ್ಕೆ ಸಮಾನತೆಯ ತತ್ವ ಸಾರಿದ್ದಾರೆ. ಆದರೆ ನಾವೆಲ್ಲ ನಮ್ಮ ಇತಿಹಾಸವನ್ನು ಮರೆಯುತ್ತಿದ್ದು ಈ ಬಗ್ಗೆ ಗಮನ ಹರಿಸಬೇಕಿದೆ ಎಂದರು.
ಬಸವಣ್ಣರು ಸಮಾಜಕ್ಕೆ ಸಾರಿದ ಸಮಾನತೆಯನ್ನು ಅಂಬೇಡ್ಕರ್ ಸಂವಿಧಾನದ ಮೊದಲ ಪುಟದಲ್ಲೇ ಬರೆದಿದ್ದಾರೆ. ನಮಗೆ ಬೇಕಿರುವುದು ಪದವಿಗಳಲ್ಲ. ಸಮಾನತೆ ಹಾಗೂ ಬ್ರಾತೃತ್ವದ ಮನಃಸ್ಥಿತಿ. ಈ ನಿಟ್ಟನಲ್ಲಿ ಎಲ್ಲರೂ ಎಚ್ಚರಗೊಳ್ಳಬೇಕಿದೆ ಎಂದರು.