ಧಗಧಗ ಹೊತ್ತಿ ಉರಿದ ಕಾರು: ಐವರು ಪಾರು

ಮಂಡ್ಯ ಲೋಕಾಯುಕ್ತ ಇನ್ಸ್‌ಪೆಕಟ್ಟರ್, ಮದ್ದೂರು ಪುರಸಭೆ ಸದಸ್ಯ, ಉದ್ಯಮಿ, ಎಸ್ಪಿ ಕಚೇರಿ ಸ್ಟೆನೋಗ್ರಾಫರ್ ಪಾರು

ದಾವಣಗೆರೆ: ಚಲಿಸುತ್ತಿದ್ದ ಕಾರೊಂದು ಇದ್ದಕ್ಕಿದಂತೆ ಧಗ.. ಧಗ.. ಹೊತ್ತಿ ಉರಿದು ಮಂಡ್ಯ ಲೋಕಾಯುಕ್ತ ಪಿಐ, ಮದ್ದೂರು ಪುರಸಭೆ ಸದಸ್ಯ ಸೇರಿ ಐವರು ಪ್ರಾಣಾಪಾಯದಿಂದ ಪಾರಾದ ಘಟನೆ ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ೨ ಗಂಟೆಗೆ ನಡೆದಿದೆ.
ಕಾರಿನಲ್ಲಿ ಮಂಡ್ಯ ಲೋಕಾಯುಕ್ತ ಇನ್ಸ್ಪೆಕ್ಟರ್ ಹನುಮಂತಪ್ಪ, ಮದ್ದೂರು ಪುರಸಭೆ ಸದಸ್ಯ ಸಿದ್ದರಾಜು, ಉದ್ಯಮಿ ಚೇತನ್‌ಕುಮಾರ್, ಮಂಡ್ಯ ಎಸ್ಪಿ ಕಚೇರಿ ಸ್ಟೆನೋಗ್ರಾಫರ್ ಪ್ರಮೋದ್, ಕೆಎಸ್‌ಆರ್‌ಟಿಸಿ ಬಸ್ ಚಾಲಕ ಕೃಷ್ಣಪ್ಪ, ಮಂಡ್ಯ ಜಿಲ್ಲೆಯ ಮದ್ದೂರಿನಿಂದ ಕಾರಿನಲ್ಲಿ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದ್ದರು.
ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ಕುಂದುವಾಡ ಗ್ರಾಮದ ಸಮೀಪ ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿರುವುದನ್ನು ಗಮನಿಸಿದ ಕಾರು ಚಾಲಕ ಕೂಡಲೇ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ. ಕಾರಿನಿಂದ ಐದು ಜನರು ಇಳಿದು ದೂರ ಹೋಗಿದ್ದಾರೆ.
ಕಾರು ಇಳಿದು ನೋಡು ನೋಡುತ್ತಿದ್ದಂತೆ ಬೆಂಕಿ, ಕಾರನ್ನು ಸಂಪೂರ್ಣ ಆವರಿಸಿದೆ. ಮಾರುತಿ ಬ್ರೆಝಾ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಕಾರಿನಿಂತ ತಕ್ಷಣವೇ ಇಳಿದಿದ್ದರಿಂದ ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಟ್ರಾಫಿಕ್ ಸಿಪಿಐ ನಲವಾಗಲು ಮಂಜುನಾಥ್, ಪಿಎಸ್‌ಐ ಶೈಲಜಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತು ದಕ್ಷಿಣ ಟ್ರಾಫಿಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.