ಕಲಾದಗಿ(ಬಾಗಲಕೋಟ): ಗ್ರಾಮದ ಬಾಲಾಜಿ ಮಂದಿರದ ಬಾಗಿಲ ಬಳಿ ಗೋವಿನದ್ದು ಎಂದು ಹೇಳಲಾಗುವ ತಲೆ ಹಾಗೂ ಬಾಯಿಯ ಅಂಗಗಳು ಕಾಣಿಸಿಕೊಂಡಿದ್ದು ಸ್ಥಳೀಯ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿರು ಘಟನೆ ಸೋಮುವಾರ ಮುಂಜಾನೆ ನಡೆದಿದೆ.
ಬಾಲಾಜಿ ಮಂದಿರ ಆರ್‌ಎಸ್ಎಸ್‌ನ ಪ್ರಮುಖ ಚಟುವಟಿಕೆಯ ಕೇಂದ್ರವಾಗಿರುವ ಹಿನ್ನಲೆಯಲ್ಲಿ ಇಂದು ಮುಂಜಾನೆ ಸಂಘಟನೆವರು ದೇವಸ್ಥಾನಕ್ಕೆ ಬರುತ್ತಿದ್ದಂತೆ ಇದು ಕಂಡು ಬಂದಿದ್ದು ಅವರೆಲ್ಲರ ಆಕ್ರೋಶಕ್ಕೆ ಕಾರಣವಾಯಿತು. ಸ್ಥಳಕ್ಕೆ ಪೊಲೀಸರು ಬಂದು ಪ್ರಾಣಿಯ ಅವಶೇಷಗಳನ್ನು ಪೊಲೀಸ್ ಸ್ಟೇಷನ್‌ಗೆ ತೆಗೆದುಕೊಂಡು ಹೋಗುತ್ತಿದ್ದಂತೆ ಅಲ್ಲಿಗೆ ಧಾವಿಸಿದ ಹಿಂದೂ ಪರ ಹಿರಿಯರು, ಕಾರ್ಯಕರ್ತರು ಈ ಕೃತ್ಯ ಮಾಡಿದವರ ಬಧನಕ್ಕೆ ಅಗ್ರಹಿಸಿದರು, ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಸ್ಟೇಷನ್ ಗೆ ಧಾವಿಸಿದ ಡಿವೈಎಸ್ಪಿ ಗಜಾನನ ಸುತರ ಹಿಂದೂ ಪರ ಹಿರಿಯರೊಂದಿಗೆ ಮಾತನಾಡಿ ಕೂಡಲೇ ಪ್ರಕರಣ ದಾಖಲೆ ಮಾಡಿಕೊಂಡು ಇದಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಲಾಗುವುದು ಎಂದು ಭರವಸೆ ನೀಡಿದರು. ತದನಂತರ ಸ್ಥಳ ಪರಿಶೀಲನೆ ಮಾಡಿದರು. ಸಿಪಿಐ ಎಚ್ ಆರ್ ಪಾಟೀಲ್ ಅವರೊಂದಿಗಿದ್ದರು