ಬೆಂಗಳೂರು: ಡಿಸಿಸಿ ಬ್ಯಾಂಕ್‌ನಲ್ಲಿನ ನಕಲಿ ಚಿನ್ನ ಅಡಮಾನ ಹಗರಣಕ್ಕೆ ಸಂಬಧಿಸಿದಂತೆ ಡಿಸಿಸಿ ಬ್ಯಾಂಕ್ ಆರ್.ಎಂ. ಮಂಜುನಾಥ್‌ಗೌಡರನ್ನು ಇಡಿ ಅರೆಸ್ಟ್ ಮಾಡಿತ್ತು. ಇಡಿ ಅಥವಾ ಜಾರಿ ನಿರ್ದೇಶನಾಲಯ ತಮ್ಮನ್ನು ಬಂಧಿಸುವ ಸಂದರ್ಭದಲ್ಲಿ ಅನುಸರಿಸಿದ ಕಾರ್ಯ ವಿಧಾನ ಸರಿಯಲ್ಲ ಎಂದು ಮಂಜುನಾಥ್‌ಗೌಡ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.
ಜಾರಿ ನಿರ್ದೇಶನಾಲಯ ಬಂಧಿಸುವ ಸಂದರ್ಭದಲ್ಲಿ ಅನುಸರಿಸಿದ ಕಾರ್ಯವಿಧಾನವನ್ನು ಪ್ರಶ್ನಿಸಿ ಆರ್‌ಎಂಎಂ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನರವರ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಈ ವೇಳೆ ಅಂತಿಮವಾಗಿ, ಅರ್ಜಿದಾರರಿಗೆ ಬಂಧನಕ್ಕೆ ನೀಡಿರುವ ಪ್ರತಿ ಕಾರಣಗಳನ್ನು ಪರಿಶೀಲಿಸುವುದು ಹಾಗೂ ವಿಶ್ಲೇಷಣೆ ಮಾಡಲು ಹೈಕೋರ್ಟ್‌ಗೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.