ಬಾಗಲಕೋಟೆ: ನಗರದ ಖ್ಯಾತ ವೈದ್ಯ ದಂಪತಿಗಳಾದ ವೈಶಾಲಿ ಹಾಗೂ ಶೇಖರ ಮಾನೆ ಅವರ ಪುತ್ರ ಓಂಕಾರ(೨೫) ನಿಧನ ಹೊಂದಿದರು.
ಕಳೆದ ನಾಲ್ಕೈದು ವರ್ಷಗಳ ಹಿಂದೆ ಅವರು ಅಪಘಾತದಲ್ಲಿ ಗಾಯಗೊಂಡ ನಂತರ ದೀರ್ಘಕಾಲದ ಚಿಕಿತ್ಸೆಗೆ ಒಳಪಟ್ಟಿದ್ದರು. ಈಗ ಅವರು ಅಕಾಲಿಕ ನಿಧನಹೊಂದಿದ್ದಾರೆ.
ಡಾ.ವೈಶಾಲಿ ಮಾನೆ ಬಂಜೆತನ ನಿವಾರಣೆಯಲ್ಲಿ ಪ್ರಸಿದ್ಧರಾಗಿದ್ದು, ಡಾ.ಶೇಖರ ಅವರು ಚಿಕ್ಕಮಕ್ಕಳ ತಜ್ಞರಾಗಿದ್ದಾರೆ. ನೂರಾರು ಜನರಿಗೆ ಈ ವೈದ್ಯ ದಂಪತಿ ಬೆಳಕಾಗಿದ್ದಾರೆ.