ಚೆಂಡು ತರಲು ಹೋದ ಬಾಲಕನಿಗೆ ವಿದ್ಯುತ್ ತಗುಲಿ ತೀವ್ರ ಗಾಯ

ಯಾದಗಿರಿ: ಆಟ ಆಡುವಾಗ ಚೆಂಡು ಮಾಳಿಗೆ ಮೇಲೆ ಬಿದ್ದಾಗ ತರಲು ಹೋದ ಬಾಲಕನಿಗೆ ವಿದ್ಯುತ್ ತಂತಿ ತಗಲಿ ತೀವ್ರ ಸ್ವರೂಪದ ಗಾಯವಾಡ ಘಟನೆ ನಡೆದಿದೆ.
ಹುಣಸಗಿ ತಾಲೂಕಿನ ಶಾಕಾಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕುಮಾರ್ ಹನುಮಂತ್ ಕಿರುದಳ್ಳಿ (12) ವಿದ್ಯುತ್ ತಗಲಿ ಗಾಯಗೊಂಡ ಬಾಲಕ, ಕೂಡಲೇ ಬಾಲಕನ್ನು ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಮಾಡಿ ಕಲ್ಬುರ್ಗಿಗೆ ಕಳಿಸಲಾಗಿದೆ.
ಶಕಪುರ್ ಗ್ರಾಮಸ್ಥರು ಹಲವು ಭಾರಿ ವಿದ್ಯುತ್ ಕಂಬಗಳನ್ನ ಹಾಗೂ ಟಿ ಸಿ.ಸ್ಥಳಾಂತರ ಮಾಡಿ ಎಂದು ಕೆಇಬಿ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದಾರೆ ಸತ್ಯಾಗ್ರಹ ಕೂಡ ಮಾಡಿದ್ದಾರೆ ಆದರೂ ಕೂಡ ಬದಲಾವಣೆ ಮಾಡಿರಲಿಲ್ಲ ಈಗ ಈ ಅನಾಹುತ ಸಂಭವಿಸಿದೆ. ಇನ್ನು ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.