ಕೆಂಡದಂತಹ ಬಿಸಿಲ ನಡುವೆ ತಂಪೆರದ ಮಳೆ

ಯಾದಗಿರಿ: ಜಿಲ್ಲಾ ಕೇಂದ್ರದಲ್ಲಿ ಬುಧವಾರ ಸಂಜೆ 5.30ರ ಸುಮಾರಿಗೆ ಏಕಾಏಕಿ ಸುರಿದ ಮಳೆ ಜನರಿಗೆ ತಂಪು ನೀಡಿತು.
ಬಿರುಗಾಳಿ ಜತೆಗೆ ಜೋರಾದ ಮಳೆಯಿಂದಾಗಿ ನಗರದ ಕೆಲವಡೆ ಶೆಡ್‌ಗಳು ಮತ್ತು ಮೇಲೆ ಹಾಕಿದ ಪತ್ರಾಸ್‌ಗಳು ಹಾರಿ ಹೋದವು. ಕೆಲ ಗಿಡ, ಮರ ಮತ್ತು ಕೊಂಬೆಗಳು ನೆಲಕಚ್ಚಿದ ಘಟನೆಯೂ ನಡೆದಿದೆ. ಏಕಾಏಕಿ ಬೀಸಿದ ಗಾಳಿಯಿಂದಾಗಿ ಇಡಿ‌ ನಗರದಾದ್ಯಂತ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು. ಆದರೆ, ನಗರದಲ್ಲಿ ಯಾವುದೇ ಆಸ್ತಿ, ಪಾಸ್ತಿ ಮತ್ತು ಪ್ರಾಣ ಹಾನಿ ಸಂಭವಿಸಿಲ್ಲ.
ಬೆಳಗ್ಗೆಯಿಂದಲೇ ಬಿಸಿಲಿಗೆ ಜನರು ಬೇಸತ್ತಿದ್ದರು. ಸಂಜೆ 20 ನಿಮಿಷ ಧಾರಕಾರವಾಗಿ ಮಳೆ ಸುರಿದಿದ್ದು, ನಗರವನ್ನು ತಂಪು ಮಾಡಿತು.