ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಮಾಲೂರು ಕುಟುಂಬಕ್ಕೆ ಸಂಕಷ್ಟ

ಮಾಲೂರು: ಕಾಶ್ಮೀರದಲ್ಲಿ ಸಿಲುಕಿರುವ ಪಟ್ಟಣದ ವೈದ್ಯರ ಕುಟುಂಬ ಖಾಸಗಿ ಹೋಟೆಲ್‌ನಲ್ಲಿ ಕಾಲ ಕಳೆಯುತ್ತಿದೆ.
ಪಟ್ಟಣದ ನಿವಾಸಿಗಳಾದ ರಾಜೀವ್ ಹಾಗೂ ಪ್ರೇಮಲತಾ ವೈದ್ಯ ದಂಪತಿ ಸೇರಿ 13 ಮಂದಿ ಕಾಶ್ಮೀರದ ಪ್ರವಾಸಕ್ಕೆ ತೆರಳಿದ್ದರು. ಕಾಶ್ಮೀರದಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದಿರುವ ದಾಳಿ ಹಿನ್ನಲೆಯಲ್ಲಿ ಭಾನುವಾರ ರಿಟರ್ನ್ ಟಿಕೆಟ್ ದೊರೆಕಿದ್ದರೂ ವಾಪಸ್ ಬರಲು ಬೇರೆ ವ್ಯವಸ್ಥೆ ಇಲ್ಲದೆ, ಕಾಶ್ಮೀರದ ಹೋಟೆಲ್ ದೀವನ್‌ನಲ್ಲಿಯೇ 13 ಜನರು ಕಾಲ ಕಳೆಯುವ ಸ್ಥಿತಿ ಬಂದಿದೆ.