ಕಾಕಾ ಸಾಹೇಬ್ ಪಾಟೀಲ್ ನಿಧನಕ್ಕೆ ಸಿಎಂ ಸಂತಾಪ

ಬೆಂಗಳೂರು: ನೇರ ನಡೆ ನುಡಿ, ಜನಪರ ಕಾಳಜಿಯ ಮುತ್ಸದ್ದಿ ನಾಯಕ ಕಾಕಾ ಸಾಹೇಬ್ ಪಾಟೀಲ್ ಅಗಲಿಕೆಯಿಂದ ರಾಜಕೀಯ ರಂಗ ಮಾತ್ರವಲ್ಲ, ಇಡೀ ಸಮಾಜ ಬಡವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ನಿಪ್ಪಾಣಿ ಕ್ಷೇತ್ರದ ಕಾಂಗ್ರೆಸ್​ ಹಿರಿಯ ನಾಯಕ ಹಾಗೂ ಮಾಜಿ ಶಾಸಕ ಕಾಕಾ ಸಾಹೇಬ್ ಪಾಟೀಲ್ ನಿಧನ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಹಿರಿಯ ನಾಯಕರಾಗಿದ್ದ ಕಾಕಾಸಾಹೇಬ್ ಪಾಟೀಲ ಅವರ ನಿಧನ ದುಃಖವುಂಟುಮಾಡಿದೆ. ನೇರ ನಡೆ ನುಡಿ, ಜನಪರ ಕಾಳಜಿಯ ಮುತ್ಸದ್ದಿ ನಾಯಕನ ಅಗಲಿಕೆಯಿಂದ ರಾಜಕೀಯ ರಂಗ ಮಾತ್ರವಲ್ಲ, ಇಡೀ ಸಮಾಜ ಬಡವಾಗಿದೆ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.