ವಿಜಯಪುರ: ಜಾತಿ ಜನಗಣತಿ ವರದಿ ಅಧ್ಯಯನ ಮಾಡಿದ ನಂತರ ಈಗ ಎದುರಾಗಿರುವ ಸಂಶಯಗಳ ಬಗ್ಗೆ ಚರ್ಚೆ ನಡೆಸುವೆ ಎಂದು ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆಯಾಗಿದೆ ಎಂಬ ವಿಷಯವಾಗಿ ಪ್ರತಿಕ್ರಿಯೆ ನೀಡಿ, ಲಿಂಗಾಯತ ಕೆಲ ಸಮಾಜದವರು ಮೀಸಲಾತಿಗಾಗಿ ದಾಖಲಾತಿಗಳಲ್ಲಿ ಬೇರೆ ರೀತಿಯಲ್ಲಿ ನಮೂದಿಸಿದ್ದಾರೆ, ಇದು ಜಾತಿ ಗಣತಿಯಲ್ಲಿ ಲಿಂಗಾಯತರ ಸಮಸ್ಯೆ ಕಡಿಮೆ ಆಗಲು ಕಾರಣ, ಅನೇಕರು ಮೀಸಲಾತಿಗಾಗಿ ಹಿಂದೂ ರೆಡ್ಡಿ, ಹಿಂದೂ ಬಣಜಿಗ ರೀತಿಯಲ್ಲಿ ಬರೆಯಿಸಿದ್ದಾರೆ, ಇದರಿಂದ ಲಿಂಗಾಯತರ ಸಂಖ್ಯೆ ಕಡಿಮೆಯಾಗಿದೆ, ಎಲ್ಲರನ್ನೂ ಒಗ್ಗೂಡಿಸಿದರೆ ಲಿಂಗಾಯತರು ೧ ಕೋಟಿಗೂ ಅಧಿಕ ಆಗುತ್ತಾರೆ ಎಂದರು.
ಮೊದಲು ವರದಿಯನ್ನ ಅಧ್ಯಯನ ಮಾಡಿದ ನಂತರ ನಮ್ಮ ಸಂಶಯಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು. ವರದಿ ಅಧ್ಯಯನ ಬಳಿಕವೇ ಈ ಬಗ್ಗೆ ಪ್ರತಿಕ್ರಿಯೆ ನೀಡಬಹುದು ಎಂದರು.