ಬೀದರ್: ಎಟಿಎಂ ಸಿಬ್ಬಂದಿಗೆ ಶೂಟ್ ಮಾಡಿ ದರೋಡೆ ಮಾಡಿದ ಪ್ರಕರಣದ ಇಬ್ಬರು ದರೋಡೆಕೋರರ ಗುರುತು ಪತ್ತೆ ಹಚ್ಚುವಲ್ಲಿ ಬೀದರ್ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಜನವರಿ 16ರಂದು ದರೋಡೆಕೋರರು ಎಟಿಎಂ ಸಿಬ್ಬಂದಿ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದಾರೆ. ಒಂದು ತಿಂಗಳು ಕಳೆಯುತ್ತಾ ಬಂದರೂ ಕಿರಾತಕರು ಇನ್ನೂ ಪತ್ತೆಯಾಗಿಲ್ಲ. 30 ದಿನಗಳ ಬಳಿಕ ಆರೋಪಿಗಳ ಖಚಿತ ಮಾಹಿತಿಯನ್ನು ಬೀದರ್ ಪೊಲೀಸರು ರಿವೀಲ್ ಮಾಡಿದ್ದಾರೆ. ಇದೀಗ ಬೀದರ್ ಪೊಲೀಸರು ಆರೋಪಿಗಳ ಖಚಿತ ಮಾಹಿತಿಯೊಂದಿಗೆ ಸುಳಿವು ಕೊಟ್ಟವರಿಗೆ 5 ಲಕ್ಷ ರೂಪಾಯಿ ಬಹುಮಾನ ಪ್ರಕಟಿಸಿದ್ದಾರೆ. ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯ ಫತೇಪುರ ಫುಲ್‌ರಿಯಾ ನಿವಾಸಿ ಅಮನ್ ಕುಮಾರ್ ರಾಜಕಿಶೋರ್ ಸಿಂಗ್ ಹಾಗೂ ಅದೇ ಜಿಲ್ಲೆಯ ಮಹಿಸೋರ್ ನಿವಾಸಿ ಅಲೋಕ್ ಕುಮಾರ್ ಅಲಿಯಾಸ್ ಅಶುತೋಷ್ ಶತ್ರುಘ್ನ ಪ್ರಸಾದ್ ಸಿಂಗ್ ಕೃತ್ಯ ಎಸಗಿದವರು ಎಂದು ಗುರುತಿಸಿದ್ದಾರೆ. ಆರೋಪಿಗಳ ಸುಳಿವು ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನವನ್ನು ಕರ್ನಾಟಕ ಪೊಲೀಸ್ ಘೋಷಣೆ ಮಾಡಿದೆ.