ಹುಬ್ಬಳ್ಳಿ: ನಗರದ ಇಸ್ಕಾನ್ ಅಕ್ಷಯಪಾತ್ರ ಫೌಂಡೇಶನ್ ಬಡ ಮಕ್ಕಳ ಹಸಿವನ್ನು ತಣಿಸುತ್ತಿರುವುದು ಮಾತ್ರವಲ್ಲದೆ ಅವರ ಭವಿಷ್ಯಕ್ಕೆ ಶಕ್ತಿಯುತ ಬುನಾದಿ ಆಗಿದೆ ಎಂದು ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ನಿನ್ನೆ ಹುಬ್ಬಳ್ಳಿಯ ಇಸ್ಕಾನ್ ಅಕ್ಷಯಪಾತ್ರ ಫೌಂಡೇಶನ್‌ನ ಆಧುನಿಕ ಅಡುಗೆ ತಯಾರಿಕ ಘಟಕಕ್ಕೆ ಭೇಟಿ ನೀಡಿದ್ದು ಆ ಕುರಿರಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಇಸ್ಕಾನ್ ದೇಗುಲದ ಅಕ್ಷಯಪಾತ್ರೆ (ಅಕ್ಷಯಪಾತ್ರ) ಯೋಜನೆಯು ಲಕ್ಷಾಂತರ ಬಡ ಮಕ್ಕಳ ಹಸಿವನ್ನು ತಣಿಸುತ್ತಿರುವುದು ಮಾತ್ರವಲ್ಲದೆ ಅವರು ಶಾಲೆ ಬಿಡದೆ ನಿರಂತರವಾಗಿ ವಿದ್ಯಾಭ್ಯಾಸ ನಡೆಸುವಂತೆ ಪ್ರೇರೇಪಿಸುತ್ತಾ ಅವರ ಭವಿಷ್ಯಕ್ಕೆ ಶಕ್ತಿಯುತ ಬುನಾದಿ ಹಾಕುತ್ತಿರುವುದು ಶ್ಲಾಘನೀಯ. ಹುಬ್ಬಳ್ಳಿಯ ಇಸ್ಕಾನ್ ನ ಭಾಗವಾಗಿರುವ ಅಕ್ಷಯಪಾತ್ರ ಆಧುನಿಕ ಕಿಚನ್ ಗೆ ಈ ದಿನ ಭೇಟಿನೀಡಿ, ಆಹಾರವನ್ನು ಶುದ್ಧತೆ ಮತ್ತು ಸುಸಂಯೋಜಿತ ವಿಧಾನದಲ್ಲಿ ಸಿದ್ಧಪಡಿಸುತ್ತಿರುವ ಕ್ರಮವನ್ನು ವೀಕ್ಷಿಸಲಾಯಿತು. ಅಕ್ಷಯ ಪಾತ್ರ ಫೌಂಡೇಶನ್ ನ ಹುಬ್ಬಳಿಯ ಅಧ್ಯಕ್ಷರಾದ ಪೂಜ್ಯ ಶ್ರೀ ರಾಜೀವ್ ಲೋಚನ್ ದಾಸ್ ಅವರು ಎಲ್ಲವನ್ನೂ ವಿವರಿಸಿದರು. ಈ ಘಟಕವು ಸುಮಾರು 800 ಶಿಕ್ಷಣ ಸಂಸ್ಥೆಗಳ 1ಲಕ್ಷ 30 ಸಾವಿರಕ್ಕೂ ವಿದ್ಯಾರ್ಥಿಗಳಿಗೆ ಪ್ರತಿ ದಿನ ಉಚಿತ ಆಹಾರ ಪೂರೈಕೆ ಮಾಡುತ್ತಿರುವುದು ತಿಳಿದು ಸಂತಸವಾಯಿತು. ಇಂತಹ ಸೇವಾ ಕಾರ್ಯಗಳು ಸಮಾಜದಲ್ಲಿ ಪರಿಣಾಮಕಾರಿಯಾದ ಬದಲಾವಣೆಗಳನ್ನು ತರಲು ಸಾಕಷ್ಟು ನೆರವಾಗಲಿದೆ ಎಂದಿದ್ದಾರೆ