ಹೊಸಪೇಟೆ: ಜನಸಂಖ್ಯೆಯಲ್ಲಿ ಭಾರತ ಚೀನಾ ದೇಶವನ್ನು ಹಿಂದಿಕ್ಕಿದ್ದು, ದೇಶದ ಜನಸಂಖ್ಯೆ ೧೪೦ ಕೋಟಿ ತಲುಪಿದೆ. ಹೀಗಾಗಿ ಆರತಿಗೊಂದು, ಕೀರ್ತಿಗೊಂದು ಎರಡು ಮಕ್ಕಳಿಗೆ ಜನ್ಮ ನೀಡಿ ಸಾಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಜಯನಗರ ಜಿಲ್ಲೆಯಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾಮಿಯೊಬ್ಬರು ಹೆಚ್ಚು, ಹೆಚ್ಚು ಮಕ್ಕಳಿಗೆ ಜನ್ಮ ನೀಡಬೇಕು ಎಂದು ಸಲಹೆ ನೀಡಿದ್ದಾರೆ. ಈಗಾಗಲೇ ದೇಶದ ಜನಸಂಖ್ಯೆ ನಾಗಲೋಟದಲ್ಲಿ ಏರಿಕೆ ಆಗುತ್ತಿದೆ. ಸುಖ ಸಂಸಾರಕ್ಕೆ ಮಕ್ಕಳು ಇಬ್ಬರೇ ಇದ್ದರೆ ಸಾಕು ಎಂದು ನವವಧುವರರಿಗೆ ಸಲಹೆ ನೀಡಿದರು.