ಆಪರೇಷನ್ ಸಿಂದೂರ್‌ನಿಂದ ಪಾಕ್‌ಗೆ 9,629 ಕೋಟಿ ರೂ. ನಷ್ಟ

ನವದೆಹಲಿ: ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಂತರ ಭಾರತಕ್ಕೆ ಸೆಡ್ಡು ಹೊಡೆಯಲು ಮುಂದಾದ ಪಾಕಿಸ್ತಾನ ಮೇಲೆ ಭಾರತ ಎಲ್ಲಾ ದಿಕ್ಕಿನಿಂದಲೂ ದಾಳಿ ಮಾಡಿದ್ದರಿಂದ ಈ ವೈರಿ ದೇಶ ಒಟ್ಟಾರೆ ೧.೧೨೪೨೪ ಶತಕೋಟಿ ಡಾಲರ್ ನಷ್ಟ ಅನುಭವಿಸಿದೆ.
ಪಾಕಿಸ್ತಾನದ ನಾಲ್ಕು ಎಫ್-೧೬ ಸೂಪರ್‌ಸಾನಿಕ್ ಫೈಟರ್‌ಜೆಟ್ ವಿಮಾನಗಳನ್ನು ಭಾರತದ ಎಸ್‌ಎಎಂ ಕ್ಷಿಪಣಿಗಳು ಹೊಡೆದುರುಳಿಸಿವೆ. ಇದರಿಂದ ಸರ್ಗೋಧಾ ವಾಯುನೆಲೆಗೆ ಆಗಿರುವ ಹಾನಿಯನ್ನು ದುರಸ್ಥಿಪಡಿಸಲು ಕನಿಷ್ಠ ೧೦ ಕೋಟಿ ಡಾಲರ್‌ಗಳ ಅಗತ್ಯವಿದೆ. ಎಫ್-೧೬ ಪಾಕಿಸ್ತಾನ ವಾಯುಪಡೆಯ ಆಧಾರಸ್ತಂಭಗಳಲ್ಲೊಂದಾಗಿದೆ. ಇಂಥ ಪ್ರತಿಯೊಂದು ವಿಮಾನಕ್ಕೂ ೮೭.೩೮ ಮಿಲಿಯನ್ ಡಾಲರ್ ಬೆಲೆಯಿದೆ ಹೀಗಾಗಿ ಈ ಮಾದರಿಯ ನಾಲ್ಕು ಸಮರ ವಿಮಾನಗಳ ವೆಚ್ಚ ೩೪೯.೫೨ ಮಿಲಿಯನ್ ಡಾಲರ್‌ಗಳು ಆಗಿವೆ.
ಪಾಕಿಸ್ತಾನ ಹೊಂದಿರುವ ಸಿ-೧೩೦ ಯುದ್ಧ ವಿಮಾನ ಬೆಲೆ ೪ ಕೋಟಿ ಡಾಲರ್‌ಗಳಾಗಿವೆ. ಇದೇ ವೇಳೆ ಅದರ ಎಚ್-೯ ವಾಯುರಕ್ಷಣಾ ವ್ಯವಸ್ಥೆ ನಾಶವಾಗಿರುವುದರಿಂದ ೨೦ ಕೋಟಿ ಡಾಲರ್ ಹಾಗೂ ಎರಡು ಮೊಬೈಲ್ ಕಮಾಂಡ್ ಸೆಂಟರ್‌ಗಳು ಧ್ವಂಸವಾಗಿರುವುದರಿಂದ ೧ ಕೋಟಿ ಡಾಲರ್ ನಷ್ಟವಾಗಿದೆ. ಒಂದು ಮೊಬೈಲ್ ಕಮಾಂಡ್‌ಗೆ ೫೦ ಲಕ್ಷ ಡಾಲರ್ ತಗಲುತ್ತದೆ.