ಅವಳಿನಗರ ಮೇಯರ್ ಆಗಿ ರಾಮಣ್ಣ ಬಡಿಗೇರ, ಉಪ ಮೇಯರ್ ದುರ್ಗಮ್ಮ ಬೀಜವಾಡ ಆಯ್ಕೆ

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ರಾಮಣ್ಣ ಬಡಿಗೇರ ಹಾಗೂ ಉಪ ಮೇಯರ್ ಆಗಿ ದುರ್ಗಮ್ಮ ಬೀಜವಾಡ ಆಯ್ಕೆಯಾಗಿದ್ದಾರೆ.
ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟರಣ್ಣವರ ನೇತೃತ್ವದಲ್ಲಿ ಶನಿವಾರ ಕೈ ಎತ್ತುವ ಮೂಲಕ ಮತದಾನ ಪ್ರಕ್ರಿಯೆ ನೆರವೇರಿತು.
ಮೇಯರ್ ಆಗಿ ಆಯ್ಕೆಯಾದ ರಾಮಣ್ಣ ಬಡಿಗೇರ ಹಾಗೂ ಉಪ ಮೇಯರ್ ಆಗಿ ಆಯ್ಕೆಯಾದ ದುರ್ಗಮ್ಮ ಭಾರತದ ಜವಾಡ ಪರ ತಲಾ 47 ಮತಗಳು ಚಲಾವಣೆಯಾಗಿವೆ. ಕಾಂಗ್ರೆಸ್‌ನಿಂದ ಮೇಯರ್ ಸ್ಥಾನಕ್ಕೆ ಸ್ಪರ್ದಿಸಿದ್ದ ಇಮ್ರಾನ್ ಎಲಿಗಾರ ಹಾಗೂಈ ಉಪ ಮೇಯರ್ ಸ್ಥಾನಕ್ಕೆ ಸ್ಫರ್ಧಿಸಿದ್ದ ಮಂಗಳಾ ಹಿರೇಮನಿ ಅವರು ತಲಾ 36ಮತ ಪಡೆದು ಪರಾಭವಗೊಂಡು.
ಎಐಎಂಐಎಂ ಸದಸ್ಯ ಹುಸೇನ್ ಬಿ ನಲತ್ವಾಡ ಪರ 3ಮತ ಚಲಾವಣೆಯಾಗಿವೆ. ವಿ.ಪ. ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ವಿನಯ ಕುಲಕರ್ಣಿ, ಪಾಲಿಕೆ ಸದಸ್ಯರಾದ ನಿತಿನ್ ಇಂಡಿ, ಬಾಬಾಜಾನ್ ಕಾರಡಗಿ ಪತ್ನಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿ ಆಗಿರಲಿಲ್ಲ. ನೂತನ ಮೇಯರ್, ಉಪ ಮೇಯರ್ ಘೋಷಣೆ ಆಗುತ್ತಿದ್ದಂತೆ ರಾಮಣ್ಣ ಬಡಿಗೇರ ಅಭಿಮಾನಿಗಳು ಪಾಲಿಕೆ ಆವರಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.