ಪಿತ್ರಾರ್ಜಿತ ಆಸ್ತಿ ಹಂಚಿಕೆ, ಕಾಂಗ್ರೆಸ್‌ನವರಿಗೆ ಭಯ ಶುರುವಾಗಿದೆ

ಬೊಮ್ಮಾಯಿ
Advertisement

ಹಾವೇರಿ: ಪಿತ್ರಾರ್ಜಿತ ಆಸ್ತಿ ಹಂಚಿಕೆಯಲ್ಲಿ ಸರ್ಕಾರಕ್ಕೆ ಶೇ 55ರಷ್ಟು ತೆರಿಗೆ ಕಟ್ಟಬೇಕು ಎಂಬ ವಿಚಾರದಿಂದ ಮೊದಲು ಭಯ ಹುಟ್ಟಿದ್ದು ಡಿಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾನಗಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿರ್ತೋಡಾ ಹೇಳಿಕೆ ನಮಗೆ ಸಂಬಂಧ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ ಹೇಳಿದರು. ಯಾರಾರೂ ಬೇನಾಮಿ ಆಸ್ತಿ ಮಾಡಿದ್ದಾರೆ. ರಾಹುಲ್ ಗಾಂಧಿ ಹಿಡಿದು ಕಾಂಗ್ರೆಸ್ಸಿನವರೆ ಹೆಚ್ಚು ಬೇನಾಮಿ ಆಸ್ತಿ ಮಾಡಿದ್ದು, ಅವರಿಗೆ ನಡುಕ ಹುಟ್ಟಿದೆ. ಅವರ ಪಕ್ಷದಲ್ಲಿಯೇ ಎರಡು ಬಿನ್ನಮತ ಬಂದಿದೆ. ಸ್ಯಾಮ್ ಪಿರ್ತೋಡ್ ಹೇಳಿಗೆ ನಮಗೆ ಸಂಬಂಧ ಇಲ್ಲ ಅಂತಿದ್ದಾರೆ. ಸಿದ್ದರಾಮಯ್ಯ ಮೊದಲು ಅದಕ್ಕೆ ಉತ್ತರ ಕೊಡಲಿ‌ ಎಂದು ಬಸವರಾಜ ಬೊಮ್ಮಾಯಿ ಆಗ್ರಹಿದರು.
ಪಿತ್ರಾರ್ಜಿತ ಆಸ್ತಿ ಕಾಯ್ದೆ ತಂದರೆ ಅದಾನಿ ಅಂಬಾನಿ ಆಸ್ತಿ ಹೋಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಯಭೀತರಾಗಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದಾನಿ, ಅಂಬಾನಿ ಆಸ್ತಿಯನ್ನು ದಯವಿಟ್ಟು ಹಂಚಿಕೆ ಮಾಡಲಿ, ಕೇಂದ್ರದಲ್ಲಿ ಕಾಂಗ್ರೆಸ್ ನವರದ್ದು 10 ವರ್ಷ ಅಧಿಕಾರ ಇತ್ತು. ಅಗ ಯಾಕೆ ಮಾಡಿಲ್ಲ. ಯಾರದು ಬೇಕಾದರೂ ಮಾಡಲಿ ನಮಗೆನೂ ಆಗಬೇಕಿದೆ. ಕಾಂಗ್ರೆಸ್ ಭ್ರಮೆಯಲ್ಲಿ ಇರಲಿ. ಅವರ ಗ್ಯಾರಂಟಿ ಅಲೆ ಅವರನ್ನ ಏಲ್ಲಿಗೆ ತೆಗೆದುಕೊಂಡು ಹೋಗುತ್ತದೆ. ನೋಡಿ. ರಾಜ್ಯದಲ್ಲಿ 28ಕ್ಕೆ 28. ಸೀಟು ನಾವು ಗೆಲ್ಲುತ್ತೇವೆ. ಗೆದ್ದಮೇಲೆ ಡಿಕೆಶಿವಕುಮಾರ್, ಸಿಎಂ ಸಿದ್ದರಾಮಯ್ಯ ಅವರಿಬ್ಬರ ಪೈಪೋಟಿ ಏನಾಗುತ್ತದೆ ನೋಡಿ. ನಿನ್ನೆ ಮತ್ತೆ ಡಿ.ಕೆ. ಶಿವಕುಮಾರ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ್ದಾರೆ. ಅವರ ಕುರ್ಚಿ ಅಲೆಗಾಡುವುದು ಗ್ಯಾರಂಟಿ ಎಂದರು.
ಪ್ರಹ್ಲಾದ್ ಜೋಶಿ ಮತ್ತು ಬಸವರಾಜ್ ಬೊಮ್ಮಾಯಿಗೆ ಓಟ್ ಕೇಳುವ ನೈತಿಕತೆ ಇಲ್ಲಾ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕಳೆದ ಹತ್ತು ವರ್ಷದಲ್ಲಿ ಎನ್‌ಡಿಎ ಸರ್ಕಾರ ಮೂರು ಪಟ್ಟು ಹೆಚ್ಚು ಬರಪರಿಹಾರ ನೀಡಿದೆ. ಆ ನೈತಿಕತೆ ಮೇಲೆ ಮತ ಕೇಳುತ್ತಿದ್ದೇವೆ. ರಾಜ್ಯ ಸರ್ಕಾರ ಸಮಯಕ್ಕೆ ಸರಿಯಾಗಿ ಕೇಂದ್ರಕ್ಕೆ ಬರಪರಿಹಾರ ವರದಿ ಕಳಿಸಿಲ್ಲ. ಅವರಿಗೆ ನೈತಿಕತೆ ಇಲ್ಲ. ಉಗರಿನಲ್ಲಿ ತೆಗೆಯುದಕ್ಕೆ, ಕೊಡಲಿ ತೆಗೆದುಕೊಂಡು ನಿಂತಿದ್ದಾರೆ. ನಮ್ಮ ಕಾಲದಲ್ಲಿ ಪ್ರವಾಹ ಬಂದಾಗ ನಾವು ಕೇಂದ್ರವನ್ನು ನೋಡದೇ ಪರಿಹಾರ ನೀಡಿದ್ದೇವೆ. ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಎರಡುಪಟ್ಟು ಪರಿಹಾರ ನೀಡಿದ್ದೇವೆ. 17 ಲಕ್ಷ ಜನ ರೈತರಿಗೆ ಒಂದೇ ಒಂದು ತಿಂಗಳಲ್ಲಿ ಪರಿಹಾರ ನೀಡಿದ ವ್ಯಕ್ತಿ ಬಸವರಾಜ್ ಬೊಮ್ಮಾಯಿ. ಆ ನೈತಿಕತೆ‌ ನಮಗೆ ಇದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ‌