ವಿಭೂತಿಯಿಂದ ಸಕಲೈಶ್ವರ್ಯ

Annadanishwara Swami
Advertisement

ಭವಭೀತಿ ಕಳೆಯುವದು ವಿಭೂತಿ
ಸಕಲೈಶ್ವರ್ಯ ನೀಡುವುದು ವಿಭೂತಿ
ಶಿವಸಾಕ್ಷಾತ ಮೈ ಬೆಳಗುವದು ವಿಭೂತಿ
ಇಂತಪ್ಪ ವಿಭೂತಿ ಶಿವಶರಣರ
ದಿವ್ಯಾಭರಣವಯ್ಯಾ ಮೃಡಗಿರಿ ಅನ್ನದಾನೀಶ
ವಿಭೂತಿ ವೀರಶೈವರ ಅಷ್ಟಾವರಣದಲ್ಲಿಇ ಒಂದು ಮಹತ್ವದ ಆಭರಣ. ಆಕಳ ಗೋಮಯಕ್ಕೆ ಸಂಸ್ಕಾರ ನೀಡಿ ವಿಭೂತಿಯನ್ನು ತಯಾರಿಸುತ್ತಾರೆ. ಶುದ್ಧವಾದ ಶುಭ್ರಮವಾದ ವಿಭೂತಿಯ ಭವಭೀತಿಯನ್ನು ಕಳೆಯಬಲ್ಲದು. ಇಂಥ ವಿಭೂತಿಯನ್ನು ಹಣೆಯ ಮೇಲೆ ಧರಿಸಿದರೆ, ಅತ್ಯಂತ ಶೋಭಾದಾಯಕವಾಗುವುದು.
ಆಕಳು ಅನೇಕ ವನಸ್ಪತಿಗಳನ್ನು ತಿಂದು ತನ್ನ ಜಠರಾಗ್ನಿಯಲ್ಲಿ ಅದನ್ನು ಪಾಕಗೊಳಿಸಿರುತ್ತದೆ. ಅಂಥ ಸಗಣಿಯನ್ನು ಒಣಗಿಸಿ ಸುಟ್ಟು ಬೂದಿ ಮಾಡಿ ಮತ್ತು ಅದನ್ನು ನೀಡಿನಲ್ಲಿ ಸೋಸಿ ಪವಿತ್ರಗೊಳಿಸಿ ವಿಭೂತಿಯನ್ನು ತಯಾರಿಸುತ್ತಾರೆ. ಅದಲ್ಲಿ ಸುಣ್ಣದ ಅಂಶವಿರುವದರಿಂದ ಹಣೆಯ ಮೇಲಿನ ನರಮಂಡಲಕ್ಕ ಶಕ್ತಿಯನ್ನು ಈಯುವದೆಂದು ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ. ನೋಡಿ ಮಕ್ಕಳ ಮುಖ ತೊಳೆದು ಮೂರು ಬೆರಳು ಶುದ್ಧವಾದ ಭಸ್ಮ(ವಿಭೂತಿ)ವನ್ನು ಪ್ರತಿನಿತ್ಯ ಧರಿಸುವದರಿಂದ ಅವರ ಮುಖ ಅದೆಷ್ಟು ಆಕರ್ಷಕವೆಂಬುದನ್ನು
ಸ್ವಯಂ ಅನುಭವದಿಂದ ತಿಳಿದದುಕೊಳ್ಳಬಹುದು. ವಿಭೂತಿ ಧರಿಸುವದರಿಂದ ಅಂಥವನ ಮುಖ ದರ್ಶಿಸುವದರಿಂದ ಅವರನಿಗೆ ಐಶ್ವರ್ಯ ಸಂಪ್ರಾಪ್ತಿಯಾಗುವುದು. ಇದು ಅವನ ಮೈ ಬೆಳಗು, ಶಿವಶರಣರಿಗೆ ದಿವ್ಯಾಭರಣವೆನಿಸಿದೆ. ಇಷ್ಟೇ ಅಲ್ಲ; ವಿಭೂತಿ ಧಾರಣೆ ಮಾಡುವದರಿಂದ ಶಿವಭಕ್ತಿಯನ್ನು ಸದಾಕಾಲ ಜಾಗೃತಿಯಾಗಿಡುತ್ತದೆ. ಸಜ್ಜನಿಕೆಯನ್ನು ತಂದುಕೊಡುತ್ತದೆ. ಸಚ್ಚಾರಿತ್ರ್ಯವಂತನಾಗಿರುವಂತೆ ಪ್ರೇರೇಪಿಸುತ್ತದೆ. ಅಪರೋಕ್ಷ ಜ್ಞಾನವನ್ನು ಕೊಡುವ ಮತ್ತು ಮಹಾಂತನನ್ನಾಗಿಸುವ ಗುಣ ವಿಭೂತಿಯಲ್ಲಿದೆ. ಇನ್ನು ಭಗವಂತನಿಗೆ ವಿಭೂತಿ ಪುರುಷ ಅತ್ಯಂತ ಸಮೀಪನೂ ಆಗಿರುತ್ತಾನೆ. ಹೀಗಾಗಿ ವಿಭೂತಿ ನೊಸಲಿಗೆ ಧಾರಣ ಮಾಡುವದಷ್ಟೇ ಅಲ್ಲ; ಶಿವಸಾಧನೆಯಿಂದ ವಿಭೂತಿ ಪುರುಷನಾಗಲೂ ಕೂಡ ವಿಭೂತಿ ಪ್ರೇರೇಪಿಸುತ್ತದೆ.