ದಕ್ಷಿಣ ಕನ್ನಡ Archives - Samyukta Karnataka

ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕರ ಎದುರೇ ಕಾರ್ಯಕರ್ತರ ಜಟಾಪಟಿ
ಪುತ್ತೂರು: ಶಾಸಕ ಅಶೋಕ್ ರೈ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಬೆಂಬಲಿಗರ ನಡುವಿನ ಜಟಾಪಟಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪುತ್ತೂರಿನ ಪ್ರೆಸ್ ಕ್ಲಬ್ ಮುಂಭಾಗ ಇಂದು ಹೈಡ್ರಾಮಾ, ಗಲಾಟೆ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಅವರು ಪುತ್ತೂರು ಶಾಸಕ ಅಶೋಕ್ ರೈ ಅವರ ಆಡಳಿತ ವೈಫಲ್ಯಗಳನ್ನು ಎತ್ತಿಹಿಡಿದು ಆಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಆಡಿಯೋ ಭಾರಿ ವೈರಲ್ ಆಗಿ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

ಈ ಆಡಿಯೋ ಕುರಿತು ಸ್ಪಷ್ಟನೆ ಹಾಗೂ ಹೆಚ್ಚಿನ ವಿವರ ನೀಡಲು ಹಕೀಂ ಕೂರ್ನಡ್ಕ ಅವರು ಪುತ್ತೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ಹಕೀಂ ಪತ್ರಿಕಾಗೋಷ್ಠಿಗೆ ಆಗಮಿಸಿದ ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಅಶೋಕ್ ರೈ ಅವರ ಬೆಂಬಲಿಗರು ಶಾಸಕರ ಸಮ್ಮುಖದಲ್ಲೇ ಪ್ರೆಸ್ ಕ್ಲಬ್ ಮುಂಭಾಗ ಜಮಾಯಿಸಿ ಹಕೀಂ ವಿರುದ್ಧ ಕೆಂಡಾಮಂಡಲರಾದರು.

ಹಕೀಂ ಕೂರ್ನಡ್ಕರನ್ನು ಪ್ರೆಸ್ ಕ್ಲಬ್‌ನಿಂದ ಹೊರಗಡೆ ಕಳುಹಿಸುವಂತೆ ಏರುಧ್ವನಿಯಲ್ಲಿ ಕೂಗಾಡಿದ ಬೆಂಬಲಿಗರು ಅವರಿಗೆ ಮುತ್ತಿಗೆ ಹಾಕಿ ಘೇರಾವ್ ಹಾಕಿದರು. ಈ ವೇಳೆ ಹಕೀಂ ಅವರ ಇಬ್ಬರು ಬೆಂಬಲಿಗರ ಮೇಲೆಯೂ ಹಲ್ಲೆಗೆ ಯತ್ನಿಸಲಾಯಿತು.

ಸ್ಥಳದಲ್ಲೇ ಇದ್ದ ಪೊಲೀಸರು ಶಾಸಕರ ಬೆಂಬಲಿಗರನ್ನು ನಿಯಂತ್ರಿಸಲು ಹಾಗೂ ಹಕೀಂ ಕೂರ್ನಡ್ಕರನ್ನು ಸುರಕ್ಷಿತವಾಗಿ ಹೊರತರಲು ಹರಸಾಹಸ ಪಟ್ಟರು. ಅಂತಿಮವಾಗಿ ಪೊಲೀಸ್ ಭದ್ರತೆಯ ನಡುವೆ ಹಕೀಂ ಅವರನ್ನು ಪ್ರೆಸ್ ಕ್ಲಬ್‌ನಿಂದ ಹೊರತಂದು ಪೊಲೀಸ್ ವಾಹನದಲ್ಲೇ ಅವರ ಮನೆಗೆ ಕರೆದೊಯ್ಯಲಾಯಿತು.

ಬಳಿಕ ಪೊಲೀಸರು ಸ್ಥಳದಲ್ಲಿ ನೆರೆದಿದ್ದ ಅಶೋಕ್ ರೈ ಅವರ ಬೆಂಬಲಿಗರನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಪುತ್ತೂರು ಕಾಂಗ್ರೆಸ್‌ನೊಳಗಿನ ಈ ಕಾರ್ಯಕರ್ತ ಶಾಸಕ ಬೆಂಬಲಿಗರ ಬಹಿರಂಗ ಗಲಾಟೆ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಪಾದಯಾತ್ರೆ ಬಳ್ಳಾರಿ ತಲುಪುವಷ್ಟರಲ್ಲಿ ಇನ್ನೂ ಎರಡು ವಿಕೆಟ್‌ ಖಚಿತ

The post ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕರ ಎದುರೇ ಕಾರ್ಯಕರ್ತರ ಜಟಾಪಟಿ appeared first on Samyukta Karnataka.

ಬೆಳ್ತಂಗಡಿ: ಮನೆಯ ಅಂಗಳಕ್ಕೆ ಬಂದ ಚಿರತೆ ಬೋನಿಗೆ ಸೆರೆ
ಬೆಳ್ತಂಗಡಿ (ಮಂಗಳೂರು) : ಮನೆಯ ಅಂಗಳದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆಯೊಂದು ಸೆರೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಹನ್ಯಾಡಿ ಪಲ್ಕೆ ಪ್ರದೇಶದಲ್ಲಿ ಸೆಪ್ಟೆಂಬರ್ 1ರ ಬೆಳಗ್ಗೆ ನಡೆದಿದೆ. ಹನ್ಯಾಡಿ ಪಲ್ಕೆ ನಿವಾಸಿ ಬಾಲಕೃಷ್ಣ ನಾಯ್ಕ ಅವರ ಮನೆಯ ಅಂಗಳದಲ್ಲಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆಹಿಡಿಯಲು ಬೋನು ಇರಿಸಿದ್ದರು. ಬೆಳಗ್ಗೆ ಪರಿಶೀಲನೆ ನಡೆಸಿದಾಗ ಚಿರತೆ ಬೋನಿಗೆ ಸೆರೆಯಾಗಿರುವುದು ಕಂಡುಬಂದಿದೆ.

ಚಿರತೆ ಸೆರೆಯಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸೆರೆಯಾಗಿರುವ ಚಿರತೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸುತ್ತಿದೆ.

ಈ ಪ್ರದೇಶದಲ್ಲಿ ಚಿರತೆಗಳ ಓಡಾಟದಿಂದ ಸ್ಥಳೀಯರಲ್ಲಿ ಆತಂಕ ಮೂಡಿತ್ತು. ಕೆಲ ಸಮಯದ ಹಿಂದೆ ಇದೇ ಭಾಗದ ಸ್ಥಳೀಯ ನಿವಾಸಿ ಗುರಿಕಂಡ ಆನಂದ ಶೆಟ್ಟಿ ಅವರ ಮನೆಯ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೂ ಎರಡು ಚಿರತೆಗಳು ಸೆರೆಯಾಗಿದ್ದವು.

ಸತತವಾಗಿ ಚಿರತೆಗಳು ಬೋನಿಗೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಕುತೂಹಲದ ಜೊತೆಗೆ ಆತಂಕವೂ ಮುಂದುವರಿದಿದೆ. ಅರಣ್ಯ ಇಲಾಖೆ ಚಿರತೆಗಳ ಚಲನವಲನದ ಮೇಲೆ ನಿಗಾ ಇರಿಸಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.

The post ಬೆಳ್ತಂಗಡಿ: ಮನೆಯ ಅಂಗಳಕ್ಕೆ ಬಂದ ಚಿರತೆ ಬೋನಿಗೆ ಸೆರೆ appeared first on Samyukta Karnataka.

ಮಂಗಳೂರಿನ ರೈಲ್ವೆಗೆ ಹೊಸ ಆಡಳಿತ ವ್ಯವಸ್ಥೆ: ಬ್ರಿಜೇಶ್ ಚೌಟಾ ಹರ್ಷ
ಮಂಗಳೂರಿನ ರೈಲ್ವೆ ಆಡಳಿತಕ್ಕೆ ಮಹತ್ವದ ಬದಲಾವಣೆ; ಮೈಸೂರು ವಿಭಾಗದಡಿ ತರಲು ಕೇಂದ್ರದ ಒಪ್ಪಿಗೆ

ಮಂಗಳೂರು: ಮಂಗಳೂರಿನ ರೈಲ್ವೆ ಆಡಳಿತವನ್ನು ಒಂದೇ ವಲಯದಡಿ ತರಬೇಕೆಂಬ ಬಹುದಿನಗಳ ಬೇಡಿಕೆಗೆ ಇದೀಗ ಮಹತ್ವದ ಮುನ್ನಡೆ ದೊರೆತಿದೆ. ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆಯ ವ್ಯಾಪ್ತಿಯಲ್ಲಿ ವಿಭಜನೆಯಾಗಿರುವ ಮಂಗಳೂರಿನ ರೈಲ್ವೆ ಆಡಳಿತವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಅಡಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಈ ಬೆಳವಣಿಗೆಯನ್ನು ಹಂಚಿಕೊಂಡಿರುವ ಬ್ರಿಜೇಶ್ ಚೌಟಾ, ಮಂಗಳೂರಿನ ರೈಲ್ವೆಗಳನ್ನು ಒಂದೇ ಸೂರಿನಡಿ ತರುವ ಬಹುದಿನಗಳ ಬೇಡಿಕೆ ಈಡೇರುತ್ತಿರುವುದು ತೃಪ್ತಿ ತಂದಿದೆ ಎಂದು ಹೇಳಿದ್ದಾರೆ. 2024ರ ಜೂನ್‌ನಲ್ಲಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಈ ವಿಷಯವನ್ನು ಆದ್ಯತೆಯಾಗಿ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದಾಗಿ ಅವರು ತಿಳಿಸಿದ್ದಾರೆ.

ಅಂದಿನಿಂದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಹಲವು ಬಾರಿ ಚರ್ಚೆ ನಡೆಸಿ, ಸಂಸದೀಯ ಹಾಗೂ ಸಾಂಸ್ಥಿಕ ವೇದಿಕೆಗಳಲ್ಲಿ ಈ ಬೇಡಿಕೆಯನ್ನು ನಿರಂತರವಾಗಿ ಮುಂದಿಟ್ಟಿರುವುದಾಗಿ ಚೌಟಾ ಹೇಳಿದ್ದಾರೆ.

ಮಂಗಳೂರಿನ ರೈಲ್ವೆ ಆಡಳಿತದಲ್ಲಿ ಏನು ಬದಲಾವಣೆ? : ಪ್ರಸ್ತುತ ಮಂಗಳೂರು ಭಾಗದ ರೈಲ್ವೆ ವ್ಯವಸ್ಥೆ ವಿವಿಧ ಆಡಳಿತಾತ್ಮಕ ವ್ಯಾಪ್ತಿಗಳೊಂದಿಗೆ ಸಂಬಂಧ ಹೊಂದಿರುವುದರಿಂದ ಪ್ರಯಾಣಿಕರ ಸಮಸ್ಯೆಗಳು, ರೈಲು ಸೇವೆಗಳ ವಿಸ್ತರಣೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ನಿರ್ಧಾರಗಳಲ್ಲಿ ಸಮನ್ವಯದ ಸಮಸ್ಯೆಗಳು ಎದುರಾಗುತ್ತಿವೆ ಎಂಬುದು ಬಹುದಿನಗಳ ದೂರು.

ಈ ಹಿನ್ನೆಲೆಯಲ್ಲಿ ಮಂಗಳೂರಿನ ರೈಲ್ವೆ ಆಡಳಿತವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಅಡಿಯಲ್ಲಿ ತರಲು ಮುಂದಾಗಿರುವ ಕ್ರಮವು ಆಡಳಿತಾತ್ಮಕ ಅಡೆತಡೆಗಳನ್ನು ಕಡಿಮೆ ಮಾಡುವ ನಿರೀಕ್ಷೆ ಮೂಡಿಸಿದೆ. ಮಂಗಳೂರು-ಹಾಸನ-ಮೈಸೂರು ರೈಲು ಮಾರ್ಗದ ಹಲವು ಭಾಗಗಳು ಈಗಾಗಲೇ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಯಲ್ಲಿವೆ.

ಮಂಗಳೂರು ರೈಲ್ವೆ ಆಡಳಿತವನ್ನು ಮೈಸೂರು ವಿಭಾಗದೊಂದಿಗೆ ಸಂಯೋಜಿಸುವ ಬೇಡಿಕೆ ಹೊಸದಲ್ಲ. 2025ರ ಮಾರ್ಚ್‌ನಲ್ಲಿ ಸಂಸತ್ತಿನಲ್ಲಿಯೂ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ಸಚಿವರಿಗೆ ಪ್ರಶ್ನೆ ಕೇಳಿದ್ದರು. ಮಂಗಳೂರು ರೈಲ್ವೆ ಆಡಳಿತವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಸಾಧ್ಯತೆ, ಅದರ ಕಾರ್ಯಾಚರಣಾತ್ಮಕ ಪ್ರಯೋಜನಗಳು ಮತ್ತು ಪ್ರಯಾಣಿಕರ ಅನುಕೂಲತೆ ಕುರಿತು ಅವರು ಮಾಹಿತಿ ಕೋರಿದ್ದರು.

ಪ್ರಯಾಣಿಕರ ಸಮಸ್ಯೆಗಳಿಗೆ ವೇಗದ ಪರಿಹಾರದ ನಿರೀಕ್ಷೆ : ಮಂಗಳೂರು ರೈಲ್ವೆ ಆಡಳಿತವು ಒಂದೇ ವಿಭಾಗದಡಿ ಬಂದರೆ ಪ್ರಯಾಣಿಕರ ದೂರುಗಳು ಹಾಗೂ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ವೇಗವಾಗಿ ಪರಿಹರಿಸಲು ಸಾಧ್ಯವಾಗಲಿದೆ ಎಂದು ಚೌಟಾ ಹೇಳಿದ್ದಾರೆ.

ರೈಲುಗಳ ಹೆಚ್ಚಳ, ಹೊಸ ಸೇವೆಗಳ ಪ್ರಾರಂಭ, ನಿಲ್ದಾಣಗಳ ಅಭಿವೃದ್ಧಿ, ಪ್ರಯಾಣಿಕರ ಮೂಲಸೌಕರ್ಯ, ರೈಲು ಮಾರ್ಗಗಳ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಸಮನ್ವಯ ಸುಧಾರಿಸುವ ಸಾಧ್ಯತೆಯಿದೆ. ಇದರಿಂದ ಕರಾವಳಿ ಕರ್ನಾಟಕದ ರೈಲ್ವೆ ಮೂಲಸೌಕರ್ಯಕ್ಕೆ ಹೆಚ್ಚಿನ ಗಮನ ದೊರೆಯಲಿದೆ ಎಂಬ ನಿರೀಕ್ಷೆಯೂ ಇದೆ.

ಅಧಿಕೃತ ಅಧಿಸೂಚನೆಗೆ ನಿರೀಕ್ಷೆ : ಈ ಬೆಳವಣಿಗೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಹೊರಬರುವ ನಿರೀಕ್ಷೆಯಿದೆ ಎಂದು ಸಂಸದರು ತಿಳಿಸಿದ್ದಾರೆ. ಹೀಗಾಗಿ ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ, ಇದು ಮಹತ್ವದ ಆಡಳಿತಾತ್ಮಕ ನಿರ್ಧಾರದತ್ತ ಸಾಗುತ್ತಿರುವ ಬೆಳವಣಿಗೆಯಾಗಿದ್ದು, ಅಂತಿಮ ವ್ಯವಸ್ಥೆ ಮತ್ತು ಜಾರಿಗೆ ಸಂಬಂಧಿಸಿದ ವಿವರಗಳು ಅಧಿಕೃತ ಅಧಿಸೂಚನೆಯ ಬಳಿಕ ಸ್ಪಷ್ಟವಾಗಲಿವೆ.

ಈಗಾಗಲೇ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಮಂಗಳೂರು ಭಾಗದ ಹಲವು ರೈಲ್ವೆ ಕಾಮಗಾರಿಗಳು ಮತ್ತು ಕಾರ್ಯಾಚರಣೆಗಳೊಂದಿಗೆ ಸಂಬಂಧ ಹೊಂದಿದೆ. ಇತ್ತೀಚೆಗೆ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ವಿಭಾಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಹಾಗೂ ಮೂಲಸೌಕರ್ಯ ಪರಿಶೀಲನೆಯನ್ನೂ ನೈಋತ್ಯ ರೈಲ್ವೆ ಅಧಿಕಾರಿಗಳು ನಡೆಸಿದ್ದರು.

ಕರಾವಳಿ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಮಹತ್ವದ ಹೆಜ್ಜೆ : ಮಂಗಳೂರಿನ ರೈಲ್ವೆ ಆಡಳಿತವನ್ನು ಮೈಸೂರು ವಿಭಾಗದಡಿ ತರುವ ನಿರ್ಧಾರ ಜಾರಿಯಾದರೆ, ಕರಾವಳಿ ಕರ್ನಾಟಕದ ರೈಲ್ವೆ ಸಂಪರ್ಕ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಇದು ಮಹತ್ವದ ಹೆಜ್ಜೆಯಾಗಲಿದೆ. ಆಡಳಿತಾತ್ಮಕ ವ್ಯಾಪ್ತಿಯ ಗೊಂದಲ ಕಡಿಮೆಯಾಗುವುದರಿಂದ ರೈಲು ಸೇವೆಗಳು, ಪ್ರಯಾಣಿಕರ ಸೌಲಭ್ಯಗಳು ಹಾಗೂ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಹೆಚ್ಚಿನ ವೇಗ ನಿರೀಕ್ಷಿಸಬಹುದು.

ಈ ನಿರ್ಧಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಬ್ರಿಜೇಶ್ ಚೌಟಾ, ಮಂಗಳೂರಿನ ರೈಲ್ವೆ ಅಭಿವೃದ್ಧಿಯನ್ನು ಇನ್ನಷ್ಟು ವೇಗಗೊಳಿಸುವ ನಿಟ್ಟಿನಲ್ಲಿ ಮುಂದಿನ ಹಂತದ ಕಾರ್ಯಗಳಿಗೆ ಒತ್ತು ನೀಡುವುದಾಗಿ ತಿಳಿಸಿದ್ದಾರೆ.

ಸಕ್ಕರೆ ಬೆಲೆಯಲ್ಲಿ 4% ಇಳಿಕೆ: ಗ್ರಾಹಕರಿಗೆ ಸಿಹಿ ಸುದ್ದಿ, ಆದರೆ ಕಳೆದ ತಿಂಗಳಕ್ಕಿಂತ 27% ದುಬಾರಿ

ಶಿಕ್ಷಕರಿಗೆ ರಾಜ್ಯ ಸರ್ಕಾರದ ವಿಶೇಷ ಗೌರವ; ಶಿಕ್ಷಕರ ಹೆಸರಿನ ಮುಂದೆ ಇನ್ಮುಂದೆ ‘ ‘Tr. ಗೌರವಸೂಚಕ ಪದ ಬಳಕೆ

ಗುಣಮಟ್ಟದ ಶಿಕ್ಷಣದಿಂದ ವಿಕಸಿತ ಭಾರತ ಸಾಧ್ಯ: ರಾಷ್ಟ್ರಪತಿ ಮುರ್ಮು

ಜನರ ಮನೆಬಾಗಿಲಿಗೆ ಸರ್ಕಾರ: ಕೂಡ್ಲಿಗಿಯಿಂದ ‘ಪ್ರಜಾಸೇವಾ ಅಭಿಯಾನ’ಕ್ಕೆ ಡಿಕೆಶಿ ಚಾಲನೆ

ರಷ್ಯಾ-ಉಕ್ರೇನ್ ಯುದ್ಧದ ‘ಆಪರೇಷನ್ ಗಂಗಾ’ ಕಥೆಗೆ ಮೋಹನ್‌ಲಾಲ್ ಎಂಟ್ರಿ: ಹೊಸ ಸಿನಿಮಾ ಘೋಷಣೆ

The post ಮಂಗಳೂರಿನ ರೈಲ್ವೆಗೆ ಹೊಸ ಆಡಳಿತ ವ್ಯವಸ್ಥೆ: ಬ್ರಿಜೇಶ್ ಚೌಟಾ ಹರ್ಷ appeared first on Samyukta Karnataka.

ಹೂಡಿಕೆದಾರರಿಗೆ ವಂಚನೆ: ಶಿವಾನಂದ ನೀಲಣ್ಣವರ್‌ ಇಡಿ ವಶಕ್ಕೆ
ಮಂಗಳೂರು: ಶಿವಂ ಅಸೋಸಿಯೇಟ್ ಕಂಪನಿಯ ವಂಚನೆಯ ಪ್ರಕರಣಕ್ಕೆ ಸಂಬಂಧಿಸಿ ಸಂಸ್ಥೆಯ ಮಾಲಕ ಶಿವಾನಂದ ನೀಲಣ್ಣವರ್‌ನನ್ನು ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಪಡೆದುಕೊಂಡಿದ್ದು, ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ಆ. 24ರವರೆಗೆ ಅಂದರೆ 12 ದಿನಗಳ ಕಾಲ ಇಡಿ ವಶಕ್ಕೆ ಒಪ್ಪಿಸಿದೆ. ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ 2002ರ ಕಲಂ 19ರ ಅಡಿಯಲ್ಲಿ ಆ. 13ರಂದು ಬಂಧಿಸಲಾಗಿದೆ.

ಬೆಳಗಾವಿ ನಗರದ ಮಲಮಾರುತಿ ಪೊಲೀಸ್ ಠಾಣೆಯಲ್ಲಿ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ-2019 ಹಾಗೂ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ-2004ರ ಅಡಿಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧರಿಸಿ ಇ.ಡಿ. ತನಿಖೆ ಆರಂಭಿಸಿತ್ತು.

ಸಾರ್ವಜನಿಕರಿಗೆ ಅಸಾಮಾನ್ಯ ಪ್ರಮಾಣದ ಹಾಗೂ ಖಾತರಿಪಡಿಸಿದ ಆದಾಯದ ಭರವಸೆ ನೀಡಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಲಾಗಿತ್ತು ಎಂಬ ಆರೋಪ ಎಫ್‌ಐಆರ್‌ನಲ್ಲಿದೆ.

ರೂ. 2,110.97 ಕೋಟಿ ಸಂಗ್ರಹ: ತನಿಖೆಯಲ್ಲಿ ‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯು ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಛತ್ತೀಸ್‌ಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯವಸ್ಥಿತ ಜಾಲದ ಮೂಲಕ ಸಾರ್ವಜನಿಕರಿಂದ ರೂ. 2,110.97 ಕೋಟಿ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ ಎಂದು ಇ.ಡಿ. ತಿಳಿಸಿದೆ.

ವಿಕಾಸಸೌಧ ಆವರಣದಲ್ಲಿ ಎಸ್.ಎಂ. ಕೃಷ್ಣ ಪ್ರತಿಮೆ ಸ್ಥಾಪನೆಗೆ ಮನವಿ

The post ಹೂಡಿಕೆದಾರರಿಗೆ ವಂಚನೆ: ಶಿವಾನಂದ ನೀಲಣ್ಣವರ್‌ ಇಡಿ ವಶಕ್ಕೆ appeared first on Samyukta Karnataka.

ಮಂಗಳೂರು: ಮಕ್ಕಳ ಕುಂಚದಲ್ಲಿ ಕರಾವಳಿಯ ಕಥೆಗೆ ಬಣ್ಣದ ಸ್ಪರ್ಶ
ಮಂಗಳೂರಿನಲ್ಲಿ ‘ಫ್ರೀಡಂ ಪ್ಯಾಲೆಟ್ 2026’ ಅಂತಿಮ ಸುತ್ತು; 2,857 ಚಿತ್ರಗಳ ಪೈಕಿ 60 ಮಂದಿ ಫೈನಲ್‌ಗೆ – ‘ದಿ ಕೋಸ್ಟ್ ಇನ್ ದಿ ಸ್ಟೋರಿ ಆಫ್ ಇಂಡಿಯಾ’ – ಮಕ್ಕಳ ಕುಂಚದಲ್ಲಿ ಕರಾವಳಿಯ ಕಥೆ

ಮಂಗಳೂರು: ರೋಹನ್ ಕಾರ್ಪೊರೇಶನ್ ಆಯೋಜಿಸಿದ್ದ ‘ಫ್ರೀಡಂ ಪ್ಯಾಲೆಟ್ 2026’ ಚಿತ್ರಕಲಾ ಸ್ಪರ್ಧೆಯ ಅಂತಿಮ ಸುತ್ತು ಮಂಗಳೂರಿನ ಬೇಜೈಯಲ್ಲಿರುವ ರೋಹನ್ ಸಿಟಿಯಲ್ಲಿ ನಡೆಯಿತು. 16 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಆಯೋಜಿಸಿದ್ದ ಸ್ಪರ್ಧೆಯ ಮೊದಲ ಸುತ್ತಿಗೆ 2,857 ಚಿತ್ರಗಳು ಸಲ್ಲಿಕೆಯಾಗಿದ್ದು, ಈ ಪೈಕಿ 60 ಮಂದಿಯನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು.

‘ದಿ ಕೋಸ್ಟ್ ಇನ್ ದಿ ಸ್ಟೋರಿ ಆಫ್ ಇಂಡಿಯಾ’ ಎಂಬ ವಿಷಯದಡಿ ನಡೆದ ಅಂತಿಮ ಸುತ್ತಿನಲ್ಲಿ ಮಕ್ಕಳು ಭಾರತದ ಇತಿಹಾಸ ಮತ್ತು ಕಥನದಲ್ಲಿ ಕರಾವಳಿಯ ಪಾತ್ರ, ಸಂಸ್ಕೃತಿ, ಪರಂಪರೆ ಹಾಗೂ ವೈವಿಧ್ಯತೆಯನ್ನು ತಮ್ಮದೇ ಕಲ್ಪನೆಯ ಮೂಲಕ ಚಿತ್ರಿಸಿದರು.

ಪಿಕ್ಸ್ನಿಲ್ ಸ್ಟುಡಿಯೋದ ತೀರ್ಪುಗಾರರು ಸ್ಪರ್ಧಿಗಳ ಚಿತ್ರಗಳನ್ನು ಮೌಲ್ಯಮಾಪನ ಮಾಡಿದ್ದು, ವಿಷಯದ ನಿರೂಪಣೆ, ಸೃಜನಶೀಲತೆ ಹಾಗೂ ಬಣ್ಣಗಳ ಬಳಕೆಯನ್ನು ಪ್ರಮುಖ ಮಾನದಂಡಗಳಾಗಿ ಪರಿಗಣಿಸಿದರು.

ರೋಹನ್ ಕಾರ್ಪೊರೇಶನ್ ನಿರ್ದೇಶಕ ಡಿಯೋನ್ ಮೊಂತೆರೊ, ಜನರಲ್ ಮ್ಯಾನೇಜರ್ ಸುಮನಾ ಹಾಗೂ ಜ್ಯೂರಿ ಸದಸ್ಯರಾದ ಪೃಥ್ವಿರಾಜ್ ಮತ್ತು ಮೆಹಿಕಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಫ್ರೀಡಂ ಪ್ಯಾಲೆಟ್ 2026ಕ್ಕೆ ದೊರೆತ ಪ್ರತಿಕ್ರಿಯೆ ಹಾಗೂ ಮಕ್ಕಳ ಸೃಜನಶೀಲತೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಡಿಯೋನ್ ಮೊಂತೆರೊ, ಕರಾವಳಿಯ ವೈಶಿಷ್ಟ್ಯವನ್ನು ಮಕ್ಕಳದೇ ದೃಷ್ಟಿಕೋನದಲ್ಲಿ ಚಿತ್ರಿಸುವ ಅವಕಾಶ ಈ ವರ್ಷದ ವಿಷಯದಿಂದ ದೊರೆತಿದೆ ಎಂದು ಹೇಳಿದರು.

ಆಗಸ್ಟ್ 15ರಂದು ಮಂಗಳೂರಿನ ಪಂಪ್‌ವೆಲ್‌ನ ರೋಹನ್ ಸ್ಕ್ವೇರ್‌ನಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಲಿದೆ. ವಿಜೇತರಿಗೆ ಪ್ರಥಮ ₹25,000, ದ್ವಿತೀಯ ₹15,000 ಹಾಗೂ ತೃತೀಯ ₹10,000 ನಗದು ಬಹುಮಾನ ನೀಡಲಾಗುತ್ತದೆ.

ಭಾರತದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಿರುವ ಈ ಸ್ಪರ್ಧೆಯು ಮಕ್ಕಳಲ್ಲಿನ ಕಲಾ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಉತ್ತೇಜಿಸುವುದರ ಜೊತೆಗೆ, ಕರಾವಳಿಯ ಬದುಕು ಮತ್ತು ಸಂಸ್ಕೃತಿಯನ್ನು ಭಾರತದ ವಿಶಾಲ ಕಥೆಯೊಂದಿಗೆ ಮಕ್ಕಳ ದೃಷ್ಟಿಕೋನದಲ್ಲಿ ಕಟ್ಟಿಕೊಡುವ ವೇದಿಕೆಯಾಗಿದೆ.

ಸಕ್ಕರೆ ಬೆಲೆಯಲ್ಲಿ 4% ಇಳಿಕೆ: ಗ್ರಾಹಕರಿಗೆ ಸಿಹಿ ಸುದ್ದಿ, ಆದರೆ ಕಳೆದ ತಿಂಗಳಕ್ಕಿಂತ 27% ದುಬಾರಿ

ಶಿಕ್ಷಕರಿಗೆ ರಾಜ್ಯ ಸರ್ಕಾರದ ವಿಶೇಷ ಗೌರವ; ಶಿಕ್ಷಕರ ಹೆಸರಿನ ಮುಂದೆ ಇನ್ಮುಂದೆ ‘ ‘Tr. ಗೌರವಸೂಚಕ ಪದ ಬಳಕೆ

ಗುಣಮಟ್ಟದ ಶಿಕ್ಷಣದಿಂದ ವಿಕಸಿತ ಭಾರತ ಸಾಧ್ಯ: ರಾಷ್ಟ್ರಪತಿ ಮುರ್ಮು

ಜನರ ಮನೆಬಾಗಿಲಿಗೆ ಸರ್ಕಾರ: ಕೂಡ್ಲಿಗಿಯಿಂದ ‘ಪ್ರಜಾಸೇವಾ ಅಭಿಯಾನ’ಕ್ಕೆ ಡಿಕೆಶಿ ಚಾಲನೆ

ರಷ್ಯಾ-ಉಕ್ರೇನ್ ಯುದ್ಧದ ‘ಆಪರೇಷನ್ ಗಂಗಾ’ ಕಥೆಗೆ ಮೋಹನ್‌ಲಾಲ್ ಎಂಟ್ರಿ: ಹೊಸ ಸಿನಿಮಾ ಘೋಷಣೆ

The post ಮಂಗಳೂರು: ಮಕ್ಕಳ ಕುಂಚದಲ್ಲಿ ಕರಾವಳಿಯ ಕಥೆಗೆ ಬಣ್ಣದ ಸ್ಪರ್ಶ appeared first on Samyukta Karnataka.

ಪ್ರಚೋದನಾಕಾರಿ ಭಾಷಣ ಪ್ರಕರಣ: SDPI ಮುಖಂಡನಿಗೆ ಜೈಲು ಶಿಕ್ಷೆ
ಮಂಗಳೂರು: ಪ್ರಚೋದನಾಕಾರಿ ಭಾಷಣ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ SDPI ಮುಖಂಡನಿಗೆ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ಬೆಳ್ತಂಗಡಿ ನ್ಯಾಯಾಲಯ ತೀರ್ಪು ನೀಡಿದೆ.

2015ರ ಜುಲೈ 23ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಪಾಪ್ಯುಲ್ಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಬೆಳ್ತಂಗಡಿ ವಲಯದ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಹಮ್ಮದ್ ರಿಯಾಜ್ ಫರಂಗಿಪೇಟೆ ಅವರು ಪ್ರಚೋದನಾಕಾರಿ ಭಾಷಣ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಅಂದಿನ ಪೊಲೀಸ್ ಉಪನಿರೀಕ್ಷಕ ಹಾಗೂ ತನಿಖಾಧಿಕಾರಿ ರವಿ ಬಿ.ಎಸ್. ನಡೆಸಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಮಲಿಂಗಪ್ಪ ಅವರು ಭಾರತೀಯ ದಂಡ ಸಂಹಿತೆಯ ಕಲಂ 153(ಎ) ಅಡಿಯಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಆಶೀತಾ ಅವರು ವಾದ ಮಂಡಿಸಿದರು.

ನಾಗೇಂದ್ರಗೆ ಸಚಿವ ಸ್ಥಾನ, ಬಿಜೆಪಿ ಪ್ರತಿಭಟನೆ

The post ಪ್ರಚೋದನಾಕಾರಿ ಭಾಷಣ ಪ್ರಕರಣ: SDPI ಮುಖಂಡನಿಗೆ ಜೈಲು ಶಿಕ್ಷೆ appeared first on Samyukta Karnataka.

ಬೆಳ್ತಂಗಡಿ: ಭಾರಿ ಮಳೆಗೆ ತುಂಬಿ ಹರಿದ ನದಿಗಳು, ಜನಜೀವನ ಅಸ್ತವ್ಯಸ್ಥ
ಮಂಗಳೂರು: ಬೆಳ್ತಂಗಡಿ ತಾಲೂಕಿನಲ್ಲಿ ಇಡೀ ದಿನ ಸುರಿದ ಭಾರಿ ಮಳೆಯಿಂದ ಅಲ್ಲಲ್ಲಿ ಗುಡ್ಡ ಕುಸಿತ, ರಸ್ತೆ ಸಂಪರ್ಕ ಕಡಿತ, ಮನೆ, ಅಂಗಡಿಗಳಿಗೆ ನೀರು ನುಗ್ಗಿದ ಘಟನೆಗಳು, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅಲ್ಲಲ್ಲಿ ವಾಹನ ಸಂಚಾರಕ್ಕೆ ಅಡಚಣೆ, ತೋಟಗಳಿಗೆ ನೀರು ನುಗ್ಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ನೇತ್ರಾವತಿ, ಮೃತ್ಯುಂಜಯ ಹಾಗೂ ಇತರ ನದಿಗಳು ತುಂಬಿ ಹರಿದು ಮುಂಡಾಜೆ, ಕಾಯರ್ತೋಡಿ, ಕಡಂಬಳ್ಳಿ, ಆನಂಗಳ್ಳಿ, ಮುಂಡ್ರುಪಾಡಿ, ಅರೆಕಲ್ಲು, ಕುಡೆಂಚಿ, ಮೊಗ್ರು, ಮುಗೇರಡ್ಕ, ದಂಬೆತ್ತಿಮಾರು, ಬರೆಮೇಲು ಮೊದಲಾದ ಕಡೆ ನೂರಾರು ಕೃಷಿ ತೋಟಗಳು ಜಲಾವೃತಗೊಂಡವು.

ಕಿಲ್ಲೂರು-ಲಾಯಿಲ ರಸ್ತೆಗೆ ಸೋಮಾವತಿ ನದಿನೀರು ಪುತ್ರಬೈಲು ಸಮೀಪ ರಸ್ತೆಗೆ ನುಗ್ಗಿ ಸಂಚಾರ ಕೆಲಕಾಲ ಸ್ಥಗಿತಗೊಳಿಸಲಾಯಿತು. ಕುತ್ರೊಟ್ಟು-ಚಂದ್ಕೂರು ಸೇತುವೆ ಜಲಾವೃತಗೊಂಡು ವಾಹನ ಸಂಚಾರ ಸ್ಥಗಿತಗೊಂಡಿತು. ಉಜಿರೆ-ಗುರಿಪಳ್ಳ ರಸ್ತೆಯ ಅಂಬಡಬೆಟ್ಟು ಸಂಚಾರದ ನೂತನ ಸೇತುವೆ ಮುಳುಗುವ ಭೀತಿ ಎದುರಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಯಿತು.

ಮಧ್ಯಾಹ್ನ ವೇಳೆ ಧರ್ಮಸ್ಥಳ-ಉಜಿರೆ ಹೆದ್ದಾರಿಯ ಸ್ನಾನಘಟ್ಟ ಬಳಿ ಮಣ್ಣಸಂಕ ರಸ್ತೆಯಲ್ಲಿ ಐದು ಅಡಿಯಷ್ಟು ನೀರು ಹರಿದು ಸುಮಾರು ಒಂದು ತಾಸು ಕಾಲ ವಾಹನ ಸಂಚಾರ ವ್ಯತ್ಯಯ ಉಂಟಾಯಿತು. ಬೆಳ್ತಂಗಡಿ ರಸ್ತೆಯ ಉಜಿರೆ ಕೆಳಗಿನ ಪೆಟ್ರೋಲ್ ಬಂಕ್ ಬಳಿ ಚರಂಡಿ ನೀರು ರಸ್ತೆಗೆ ನುಗ್ಗಿ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು.

ನೆರಿಯ ಗ್ರಾಮದ ಗಂಡಿಬಾಗಿಲಿನ ಸಿಯೋನ್ ಆಶ್ರಮದ ತಡೆಗೋಡೆ ಕುಸಿದು ಲಕ್ಷಾಂತರ ರೂ. ಹಾನಿ ಉಂಟಾಗಿದೆ. ಧರ್ಮಸ್ಥಳ-ಕಲ್ಮಂಜ ರಸ್ತೆಯ ಗುಂಡಿ ಬಳಿ ಧರೆ ಕುಸಿದು ವಾಹನ ಸಂಚಾರಕ್ಕೆ ತೊಡಕುಂಟಾಗಿದೆ ಗುಡ್ಡ ಭಾಗದಿಂದ ನೀರು ಹರಿದು ಬರುತ್ತಿದ್ದು, ಇನ್ನಷ್ಟು ಕುಸಿಯವ ಸಾಧ್ಯತೆ ಇದೆ. ಮಳೆ ನೀರು ರಸ್ತೆಯಲ್ಲೇ ಹರಿದು ಅಲ್ಲಲ್ಲಿ ರಸ್ತೆಯೂ ಕುಸಿಯುವ ಭೀತಿಯಿದೆ.

ಲಾಯಿಲ ಗ್ರಾಮದ ಆದರ್ಶ ನಗರದಲ್ಲಿ ರತ್ನಾಕರ ಆಚಾರ್ಯ ನಿರ್ಮಿಸುತ್ತಿರುವ ನೂತನ ಮನೆಯ ಆವರಣ ಗೋಡೆ ಕುಸಿದು ಕೆಳಭಾಗದಲ್ಲಿರುವ ಉಮೇಶ್ ಆಚಾರ್ಯ ಎಂಬವರ ಮನೆಗೆ ಹಾನಿಯಾಗಿದೆ. ಆವರಣ ಗೋಡೆ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯೊಳಗೆ ಇದ್ದ ಮಹಿಳೆಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಮಿತ್ತಬಾಗಿಲು ಗ್ರಾಮದ ಕೊಪ್ಪದ ಗಂಡಿ, ಚಾರ್ಮಾಡಿ ಗ್ರಾಮದ ಅರಣಪಾದೆ ಕಿರು ಸೇತುವೆಗಳು ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ.

ಚಿಬಿದ್ರೆ ಗ್ರಾಮದ ಪೆರಿಯಡ್ಕ ಕುಡುಮಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಅಂಗಳಕ್ಕೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಮುಂಡಾಜೆಯ ಅಣ್ಣು ಕಜೆ, ಮಹೇಂದ್ರ ಪರಾಂಜಪೆ ಎಂಬವರ ಮನೆಯ ಹಿಂಭಾಗದ ಗುಡ್ಡ ಕುಸಿತ ಉಂಟಾಗಿದೆ. ಮುಂಡಾಜೆಯ ಸೋಮಂತಡ್ಕದ ಖಾಸಗಿ ಮೊಬೈಲ್ ಟವರ್‌ನ ವಿದ್ಯುತ್ ಪರಿವರ್ತಕದ ಸಮೀಪ ಗುಡ್ಡ ಕುಸಿತದಿಂದ ಅಪಾಯದ ಸ್ಥಿತಿ ಇದೆ. ಧರ್ಮಸ್ಥಳದ ಪೊಸಳಿಗೆಯಲ್ಲಿ ಕೃಷ್ಣಪ್ಪ ಎಂಬವರ ಮನೆಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದ್ದು ಮುಂಡಾಜೆ ಸೋಮಂತಡ್ಕ, ಬಲ್ಯಾರ್ ಕಾಪು, ಅಗರಿ ಮೊದಲಾದ ರಸ್ತೆಗಳಲ್ಲಿ ನೀರು ತುಂಬಿ ಹರಿದು ಕೆಲವು ಮನೆಗಳಿಗೆ ನೀರು ನುಗ್ಗಿದೆ. ಇನ್ನೂ ಕೆಲವು ಮನೆಗಳ ಅಂಗಳಗಳು ಜಲಾವೃತಗೊಂಡವು. ಗಣೇಶ ಶೆಟ್ಟಿ, ರವಿಚಂದ್ರ, ಸೇಸಪ್ಪ ಎಂಬವರ ಮನೆಗಳ ಒಳಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ಹಳಿಯ ಮೇಲೆ ಭಾರಿ ಭೂಕುಸಿತ: ರೈಲು ಸಂಚಾರ ಸಂಪೂರ್ಣ ಸ್ಥಗಿತ

The post ಬೆಳ್ತಂಗಡಿ: ಭಾರಿ ಮಳೆಗೆ ತುಂಬಿ ಹರಿದ ನದಿಗಳು, ಜನಜೀವನ ಅಸ್ತವ್ಯಸ್ಥ appeared first on Samyukta Karnataka.

ಹಳಿಯ ಮೇಲೆ ಭಾರಿ ಭೂಕುಸಿತ: ರೈಲು ಸಂಚಾರ ಸಂಪೂರ್ಣ ಸ್ಥಗಿತ
ಮಂಗಳೂರು: ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮೈಸೂರು ರೈಲ್ವೆ ವಿಭಾಗದ ಯಡಕುಮರಿ-ಶಿರಿಬಾಗಿಲು ರೈಲು ನಿಲ್ದಾಣಗಳ ನಡುವಿನ ಅರೆಬೆಟ್ಟದ ಸಮೀಪ ಆ. 2ರಂದು ರಾತ್ರಿ ಭಾರಿ ಭೂಕುಸಿತ ಸಂಭವಿಸಿದೆ.

ಈ ಪರಿಣಾಮ ರೈಲು ಹಳಿಯ ಮೇಲೆ ಅಪಾರ ಪ್ರಮಾಣದ ಮಣ್ಣು ಹಾಗೂ ಬೃಹತ್ ಬಂಡೆಗಳು ಕುಸಿದುಬಿದ್ದು, ಬೆಂಗಳೂರು-ಮಂಗಳೂರು ಹಾಗೂ ಕರಾವಳಿ ಭಾಗವನ್ನು ಸಂಪರ್ಕಿಸುವ ಪ್ರಮುಖ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ನೈಋತ್ಯ ರೈಲ್ವೆ 7 ಪ್ರಮುಖ ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಿದ್ದು, ಕೆಲ ರೈಲುಗಳನ್ನು ಮಧ್ಯಂತರ ನಿಲ್ದಾಣಗಳಲ್ಲೇ ಸ್ಥಗಿತಗೊಳಿಸಿದೆ. ಇದರಿಂದಾಗಿ ನೂರಾರು ಪ್ರಯಾಣಿಕರು ವಿವಿಧ ನಿಲ್ದಾಣಗಳಲ್ಲಿ ಸಿಲುಕಿ ತೀವ್ರ ಪರದಾಡುವಂತಾಗಿದೆ.

ಭಾಗಶಃ ರದ್ದಾದ ರೈಲುಗಳ ವಿವರ:
16585 ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್: ಹಾಸನದಲ್ಲೇ ಪ್ರಯಾಣ ಅಂತ್ಯ; ಹಾಸನ-ಮುರುಡೇಶ್ವರ ನಡುವೆ ಸಂಚಾರ ರದ್ದು.
16511 ಬೆಂಗಳೂರು-ಕೊಝಿಕೋಡ್ ಎಕ್ಸ್‌ಪ್ರೆಸ್: ಹಾಸನದಲ್ಲೇ ಸ್ಥಗಿತ; ಹಾಸನ-ಕೊಝಿಕೋಡ್ ನಡುವೆ ಸೇವೆ ರದ್ದು.
17377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್: ಹಾಸನದಲ್ಲೇ ಕೊನೆ; ಹಾಸನ-ಮಂಗಳೂರು ನಡುವೆ ಸಂಚಾರ ಇರುವುದಿಲ್ಲ.
16595 ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್: ಸಕಲೇಶಪುರದಲ್ಲೇ ಕೊನೆಗೊಳ್ಳಲಿದ್ದು, ಸಕಲೇಶಪುರ-ಕಾರವಾರ ನಡುವಿನ ಸೇವೆ ಸ್ಥಗಿತಗೊಳ್ಳಲಿದೆ.

ಹಿಂತಿರುಗುವ ರೈಲುಗಳ ಸಂಚಾರದಲ್ಲೂ ಬದಲಾವಣೆ
16586 ಮುರುಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್: ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲೇ ಪ್ರಯಾಣ ಅಂತ್ಯಗೊಳ್ಳಲಿದೆ.
61512 ಕೊಝಿಕೋಡ್-ಬೆಂಗಳೂರು ಎಕ್ಸ್‌ಪ್ರೆಸ್: ಕಬಕ ಪುತ್ತೂರಿನವರೆಗೆ ಮಾತ್ರ ಸಂಚಾರ ನಡೆಸಲಿದ್ದು, ಅಲ್ಲಿಂದ ಬೆಂಗಳೂರಿನವರೆಗಿನ ಸೇವೆ ರದ್ದಾಗಿದೆ.
17378 ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್‌ಪ್ರೆಸ್: ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲೇ ಸ್ಥಗಿತಗೊಳ್ಳಲಿದೆ.

ಕಾರ್ಯಾಚರಣೆಗೆ ಮಳೆ ಅಡ್ಡಿ: ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಹಳಿಯ ಮೇಲಿರುವ ಮಣ್ಣು ಹಾಗೂ ಬಂಡೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಅಡಚಣೆಯಾಗಿದೆ. ರೈಲ್ವೆ ಸಿಬ್ಬಂದಿ ಯಂತ್ರೋಪಕರಣಗಳ ನೆರವಿನಿಂದ ತೆರವು ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರಯಾಣಿಕರು ಹೊರಡುವ ಮುನ್ನ ರೈಲುಗಳ ಸಂಚಾರ ಸ್ಥಿತಿಯನ್ನು ಪರಿಶೀಲಿಸಿ ಪ್ರಯಾಣ ಬೆಳೆಸುವಂತೆ ನೈಋತ್ಯ ರೈಲ್ವೆ ಕೋರಿದೆ.

ಅಯೋಗ್ಯ-2 ಚಿತ್ರದ ‘ಮಿಲ್ಕಿ ಬ್ಯೂಟಿ’ ಹಾಡು ರಿಲೀಸ್

The post ಹಳಿಯ ಮೇಲೆ ಭಾರಿ ಭೂಕುಸಿತ: ರೈಲು ಸಂಚಾರ ಸಂಪೂರ್ಣ ಸ್ಥಗಿತ appeared first on Samyukta Karnataka.

ಮೀನುಗಾರ ಮುಖಂಡನ ಕೊಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಮಂಗಳೂರು: ಸುಮಾರು 12 ವರ್ಷಗಳ ಹಿಂದೆ ಕರಾವಳಿಯಲ್ಲಿ ಭಾರೀ ಸಂಚಲನ ಮೂಡಿಸಿದ್ದ ಮೀನುಗಾರ ಮುಖಂಡ ಗಂಗಾಧರ ಪಾಂಗಳ (55) ಅವರ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಜೀವಾವಧಿ ಶಿಕ್ಷೆಗೆ ಗುರಿಯಾದವರು ಸತೀಶ್ ಬೈಕಂಪಾಡಿ (58), ಹರೀಶ್ ಬೈಕಂಪಾಡಿ (60), ಭಾಸ್ಕರ್ ಬೈಕಂಪಾಡಿ (61) ಮತ್ತು ಪುಷ್ಪರಾಜ್ (47). ನಾಲ್ವರನ್ನು ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ವಿಧಿಗಳಡಿ ತಪ್ಪಿತಸ್ಥರೆಂದು ಘೋಷಿಸಿರುವ ನ್ಯಾಯಾಲಯ ಜೀವಾವಧಿ ಶಿಕ್ಷೆಯೊಂದಿಗೆ ದಂಡವನ್ನೂ ವಿಧಿಸಿದೆ.

ಪ್ರಕರಣದ ಹಿನ್ನೆಲೆ: ಗಂಗಾಧರ ಪಾಂಗಳ ಅವರು ಕರಾವಳಿಯ ಮೀನುಗಾರ ಸಮುದಾಯದ ಪ್ರಮುಖ ಮುಖಂಡರಾಗಿದ್ದರು. ಮೊಗವೀರ ಮಹಾಸಭೆಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು ಸಂಘದ ಆಡಳಿತ ಮತ್ತು ಹಣಕಾಸು ವ್ಯವಹಾರಗಳಲ್ಲಿ ನಡೆಯುತ್ತಿದ್ದ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ವ್ಯಕ್ತಿಗಳೊಂದಿಗೆ ವೈಮನಸ್ಸು ಉಂಟಾಗಿದ್ದು, ಇದೇ ಕೊಲೆಗೆ ಕಾರಣವಾಯಿತು ಎಂದು ತನಿಖೆಯಲ್ಲಿ ಬಹಿರಂಗವಾಗಿತ್ತು.

2014ರ ಮೇ ತಿಂಗಳಲ್ಲಿ ಬೈಕಂಪಾಡಿ ಸಮೀಪದ ಮೀನಕಳಿಯ ರಸ್ತೆಯಲ್ಲಿ ಗಂಗಾಧರ ಪಾಂಗಳ ಅವರು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಆರೋಪಿಗಳು ಬೊಲೆರೋ ವಾಹನವನ್ನು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದರು. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಅಪಘಾತವೆಂದು ದಾಖಲಾಗಿದ್ದ ಪ್ರಕರಣ: ಘಟನೆ ನಡೆದಾಗ ಇದನ್ನು ರಸ್ತೆ ಅಪಘಾತ ಎಂದು ಪರಿಗಣಿಸಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಮೃತರ ಕುಟುಂಬಸ್ಥರು ಮತ್ತು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಮರುತನಿಖೆ ಕೈಗೊಂಡರು. ತನಿಖೆಯ ವೇಳೆ ಇದು ಪೂರ್ವನಿಯೋಜಿತ ಸಂಚು ರೂಪಿಸಿ ನಡೆಸಿದ ಕೊಲೆ ಎಂಬುದು ಸಾಕ್ಷ್ಯಾಧಾರಗಳ ಮೂಲಕ ಬೆಳಕಿಗೆ ಬಂದಿತು.

ಆರೋಪಿಗಳು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದು, ಘಟನೆಗೆ ಬಳಸಿದ ವಾಹನದ ಬಗ್ಗೆ ಸುಳಿವು ಸಿಗದಂತೆ ಮಾಡಲು ಪ್ರಯತ್ನಿಸಿದ್ದರು ಎಂಬ ಅಂಶವೂ ತನಿಖೆಯಲ್ಲಿ ಬಹಿರಂಗಗೊಂಡಿತ್ತು.

ನ್ಯಾಯಾಲಯದ ತೀರ್ಪು: ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ಸಾಕ್ಷ್ಯಾಧಾರಗಳು, ಸಾಕ್ಷಿಗಳ ಹೇಳಿಕೆಗಳು ಹಾಗೂ ವಾದ-ಪ್ರತಿವಾದಗಳನ್ನು ಪರಿಶೀಲಿಸಿ ನಾಲ್ವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದರು.

ನ್ಯಾಯಾಲಯ ನಾಲ್ವರಿಗೆ ಜೀವಾವಧಿ ಶಿಕ್ಷೆ, ದಂಡ ಹಾಗೂ ಸಾಕ್ಷ್ಯನಾಶದ ಆರೋಪದಲ್ಲಿಯೂ ಪ್ರತ್ಯೇಕ ಶಿಕ್ಷೆ ವಿಧಿಸಿದೆ. ಎಲ್ಲಾ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ಆದೇಶಿಸಲಾಗಿದೆ. ಇದೇ ವೇಳೆ ವಿಧಿಸಿರುವ ದಂಡದ ಮೊತ್ತದಲ್ಲಿ ₹50,000 ಅನ್ನು ಮೃತ ಗಂಗಾಧರ ಪಾಂಗಳ ಅವರ ಪುತ್ರಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಮಹತ್ವದ ತೀರ್ಪು: ಕರಾವಳಿಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಈ ಪ್ರಕರಣದಲ್ಲಿ ಸುಮಾರು 12 ವರ್ಷಗಳ ಬಳಿಕ ನ್ಯಾಯಾಲಯ ಅಂತಿಮ ತೀರ್ಪು ನೀಡಿರುವುದು ಗಮನಾರ್ಹವಾಗಿದೆ. ಆರಂಭದಲ್ಲಿ ಅಪಘಾತವೆಂದು ಕಂಡುಬಂದ ಪ್ರಕರಣವನ್ನು ಪೊಲೀಸರು ವೈಜ್ಞಾನಿಕ ತನಿಖೆಯ ಮೂಲಕ ಕೊಲೆ ಪ್ರಕರಣವಾಗಿ ಭೇದಿಸಿ ಆರೋಪಿಗಳ ವಿರುದ್ಧ ಸಾಕ್ಷ್ಯ ಸಂಗ್ರಹಿಸಿದ್ದರಿಂದ, ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಮಗನನ್ನು ಮಂತ್ರಿ ಮಾಡುವಾಗ ರಾಜಕೀಯ ಕ್ಷೇತ್ರ ಸರಿ ಇತ್ತಾ..?

The post ಮೀನುಗಾರ ಮುಖಂಡನ ಕೊಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ appeared first on Samyukta Karnataka.

ಆಂಬ್ಯುಲೆನ್ಸ್‌ನಲ್ಲೇ ಡ್ರಗ್ಸ್ ದಂಧೆ
ಮಂಗಳೂರು: ಬೆಳ್ತಂಗಡಿಯ ಜಲೀಲ್ ಮಾಲಿಕತ್ವದ ಆಂಬ್ಯುಲೆನ್ಸ್‌ನಲ್ಲೇ ದಂಧೆ ಮಾಡುತ್ತಿದ್ದ ವಿಚಾರ ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದ್ದು, ಆರೋಪಿ ಪರಾರಿಯಾಗಿದ್ದಾನೆ.

ಜಲೀಲ್ ಬಾಬಾ ತನ್ನ ಆಂಬ್ಯುಲೆನ್ಸ್‌ಅನ್ನೇ ಡ್ರಗ್ ಪೂರೈಕೆಯ ಅಡ್ಡೆ ಮಾಡಿಕೊಂಡಿದ್ದು, ಜು. 25ರಂದು ಮಂಗಳೂರಿನಲ್ಲಿ ಅಣ್ಣಪ್ಪ ಸ್ವಾಮಿ ಆಲಿಯಾಸ್ ಮನು ಎಂಬಾತನನ್ನು ಎಂಡಿಎಂಎ ಸಹಿತ ಬಂಧಿಸಲಾಗಿತ್ತು. ಈ ವೇಳೆ ಪೊಲೀಸರಿಗೆ ಬಾಗಲಕೋಟೆಯ ಡ್ರಗ್ ಲಿಂಕ್ ಬಗ್ಗೆ ಮಾಹಿತಿ ದೊರೆತಿತ್ತು.

ಹೀಗಾಗಿ ಜು. 15ರಂದು ಬಾಗಲಕೋಟೆಯ ಲಾಡ್ಜ್ ಮೇಲೆ ದಾಳಿ ನಡೆಸಿದ್ದ ಮಂಗಳೂರು ಸಿಸಿಬಿ ಪೊಲೀಸರು, ಅಲ್ಲಿ ಮೂವರನ್ನು ಬಂಧಿಸಿ ಐದು ಕೋಟಿ ರೂ. ಮೌಲ್ಯದ ಐದು ಕೆಜಿ ಡ್ರಗ್ಸ್ ವಶ ಪಡಿಸಿಕೊಂಡಿದ್ದರು.

ಈ ವೇಳೆ ಬೆಳ್ತಂಗಡಿಯ ಮಹಮ್ಮದ್ ಅಲ್ಫಾಜ್, ಮಹಮ್ಮದ್ ಮುಸ್ತಾಫಾ ಬಂಧಿತರಾಗಿದ್ದಾರೆ. ಬಂಧಿತ ಆರೋಪಿಗಳು ಜಲೀಲ್ ಬಾಬಾಗೆ ಡ್ರಗ್ಸ್ ಒದಗಿಸುತ್ತಿದ್ದ ಮಾಹಿತಿ ತನಿಖೆ ವೇಳೆ ಲಭ್ಯವಾಗಿದ್ದು, ಸದ್ಯ ಮೊಬೈಲ್ ಆಫ್ ಮಾಡಿಕೊಂಡು ಜಲೀಲ್ ಬಾಬಾ ನಾಪತ್ತೆ ಆಗಿದ್ದಾನೆ.

ಭಾರತದ ಇತಿಹಾಸ ಕಂಡ ರಾಜೀನಾಮೆ ಪ್ರಸಂಗಗಳು

The post ಆಂಬ್ಯುಲೆನ್ಸ್‌ನಲ್ಲೇ ಡ್ರಗ್ಸ್ ದಂಧೆ appeared first on Samyukta Karnataka.