ಶೇ. ೧೦೦ ಮತದಾನದ ದಾಖಲೆ

Advertisement

ಮಂಗಳೂರು: ಮತ ಹಾಕಿ ಎಂದು ಜಾಗೃತಿ ಮೂಡಿಸಿ ಮತದಾರರನ್ನು ಮತಗಟ್ಟೆಗೆ ಕರೆತರಲು ನೂರಾರು ಕಸರತ್ತು ಮಾಡಿದರೂ ನಿರೀಕ್ಷಿತ ಪ್ರಮಾಣದಲ್ಲಿ ಮತದಾನವಾಗದ ಇಂದಿನ ದಿನಗಳಲ್ಲಿ ಚಾರ್ಮಾಡಿಘಾಟಿಯ ತಪ್ಪಲಿನಲ್ಲಿರುವ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆ ಮತಗಟ್ಟೆಯಲ್ಲಿ ಶೇ. ೧೦೦ರಷ್ಟು ಮತದಾನವಾಗಿದೆ.
ಈ ಮತಗಟ್ಟೆಯಲ್ಲಿರುವ ಒಟ್ಟು ಮತದಾರರ ಸಂಖ್ಯೆ ೧೧೧. ಸಂಜೆ ೪ರ ವೇಳೆಗೆ ೧೧೧ ಮಂದಿಯೂ ತಮ್ಮ ಮತದಾನದ ಹಕ್ಕು ಚಲಾಯಿಸಿ ಕರ್ತವ್ಯ ಮೆರೆದಿದ್ದಾರೆ. ಕಳೆದ ವಿಧಾನಸಭೆಯಲ್ಲಿ ಈ ಮತಗಟ್ಟೆಯಲ್ಲಿ ಶೇ. ೯೯ರಷ್ಟು ಮತದಾನವಾಗಿತ್ತು. ಒಬ್ಬರು ಮತ ಚಲಾಯಿಸಿರಲಿಲ್ಲ.