ಎತ್ತರದ ಪ್ರದೇಶದ ಕನಮಡಿ ಕೆರೆಗೆ ಕೃಷ್ಣೆಯ ನೀರು

ಅಸಾಧ್ಯವೆಂದವರ ಮುಂದೆಯೇ ಸಾಧ್ಯವಾಗಿಸಿದ ಹೆಮ್ಮೆ: ಸಚಿವ ಎಂ. ಬಿ. ಪಾಟೀಲ್‌

ವಿಜಯಪುರ: ಜಲ, ವೃಕ್ಷ ಮತ್ತು ಶಿಕ್ಷಣ – ಈ ಮೂರು ಕ್ಷೇತ್ರಗಳಲ್ಲೂ ಸಮಾನ ಪ್ರಾಮುಖ್ಯತೆ ನೀಡಿ, ಬಬಲೇಶ್ವರ ಮತ ಕ್ಷೇತ್ರವನ್ನು ಅಭಿವೃದ್ಧಿಯ ಪಥದತ್ತ ನಿರಂತರವಾಗಿ ಮುನ್ನಡೆಸುತ್ತಿದ್ದೆನೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
ಅಸಾಧ್ಯವೆಂದವರ ಮುಂದೆಯೇ ಸಾಧ್ಯವಾಗಿಸಿದ ಹೆಮ್ಮೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಕನಮಡಿ ಕೆರೆಗೆ ಕೃಷ್ಣೆಯ ನೀರು ತುಂಬಿಸಿರುವ ಮನಮೋಹಕ ದೃಶ್ಯಗಳನ್ನು ಹಂಚಿಕೋಂಡು ಪೋಸ್ಟ್‌ ಮಾಡಿದ್ದಾರೆ, #ಬಬಲೇಶ್ವರ ಕ್ಷೇತ್ರದ #ಕನಮಡಿ ಕೆರೆಗೆ #ಕೃಷ್ಣಾ ನದಿಯಿಂದ ನೀರು ಹರಿಸಿ ತುಂಬಿಸಿರುವ ಮನಮೋಹಕ ದೃಶ್ಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತದೆ. ‘ಕನಮಡಿ’ವಿಜಯಪುರ ಜಿಲ್ಲೆಯ ಅತೀ ಎತ್ತರದ ಪ್ರದೇಶದಲ್ಲಿದೆ. ಇಲ್ಲಿಗೆ ಕೃಷ್ಣಾ ನದಿ ನೀರನ್ನು ಹರಿಸುತ್ತೇನೆ ಎಂದಾಗ ನಮಗೆ ಮೂರ್ಖರು, ಅಸಾಧ್ಯವೆಂದಿದ್ದರು. ಚಲಬಿಡದೆ ಮುಂದುವರೆದ ಪರಿಣಾಮ ಒಂದಲ್ಲ ಹಲವು ಬಾರಿ ಕೆರೆಗೆ ನೀರು ತುಂಬಿಸಿದ್ದೆನೆ! ನಮ್ಮನ್ನು ಗೇಲಿ ಮಾಡಿದ್ದ ಆ ಜನರೇ ಆಶ್ಚರ್ಯಚಕಿತರಾಗಿದ್ದು ಈಗ ಇತಿಹಾಸ ಎಂದಿದ್ದಾರೆ.