ಹೊಸ ಕಿಚ್ಚು: ವರ್ಷಾಂತ್ಯಕ್ಕೆ ಸು’ದೀಪ’ ದರ್ಶನ

ಬೆಂಗಳೂರು: ನಟ ಸುದೀಪ್‌ ನಟನೆಯ ಮ್ಯಾಕ್ಸ್ ಯಶಸ್ಸಿನ ನಂತರ ಚಿತ್ರ ನಿರ್ದೇಶನ ಮಾಡಿದ್ದ ತಮಿಳಿನ ವಿಜಯ್ ಕಾರ್ತಿಕೇಯ ಜೋಡಿ ಮತ್ತೆ ಒಂದಾಗಿದ್ದು. ಮತ್ತೊಂದು ಚಿತ್ರಕ್ಕೆ ಅಣಿಯಾಗಿದ್ದಾರೆ ಆದರೆ ಇದು ಮ್ಯಾಕ್ಸ್ 2 ಅಲ್ಲ ಇದು ಬೇರೆ ಸಿನಿಮಾ ಎಂದಿದ್ದಾರೆ.

ಸುದೀಪ್ ಅವರು ಈಗಾಗಲೇ ‘ಬಿಲ್ಲ ರಂಗ ಬಾಷ’ ಚಿತ್ರದ ಶೂಟ್​ನಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಅವರು ಬಿಗ್ ಬಾಸ್ ಕೂಡ ನಿರೂಪಣೆ ಮಾಡಲಿದ್ದಾರೆ. ಇವುಗಳ ಮಧ್ಯೆ ಅವರು ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದು, ಜುಲೈ 7ರಿಂದ ಸಿನಿಮಾದ ಶೂಟ್ ತಮಿಳಿನಾಡಿನಲ್ಲಿ ಆರಂಭ ಆಗಲಿದ್ದು. ಈ ಸಿನಿಮಾನ ಡಿಸೆಂಬರ್ 25ಕ್ಕೆ ಪ್ರೇಕ್ಷಕರ ಎದುರು ಇಡುವ ಆಲೋಚನೆಯಲ್ಲಿ ಅವರಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಕೆ 47’ ಎನ್ನುವ ಶೀರ್ಷಿಕೆ ಇಡಲಾಗಿದೆ.