ದಾಂಡೇಲಿ: ಜೋಯಡಾ ತಾಲೂಕಿನ ರಾಮನಗರದಿಂದ ಗೋವಾ ಸಂಪರ್ಕಿಸುವ ರಸ್ತೆಯ ಅನು ಮೋಡ ಘಾಟ್ ಬಳಿ ಭೂ ಕುಸಿತ ಸಂಭವಿಸಿದ್ದು ರಾಷ್ಟ್ರೀಯ ಹೆದ್ದಾರಿಯ ಅರ್ಧ ಭಾಗ ಭೂಕುಸಿತ ಸಂಭವಿಸಿದ್ದು ವಾಹನ ಸಂಚಾರ ಕಷ್ಟಕರವಾಗಿದೆ. ರಾಮನಗರದಿಂದ ಗೋವಾಕ್ಕೆ ಸಂಚರಿಸುವ ವಾಹನ ಸವಾರರು ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಮನವಿ ಮಾಡಿದ್ದಾರೆ.