Home ಸಿನಿ ಮಿಲ್ಸ್ 17 ವರ್ಷಗಳ ನಂತರ ಹೈವಾನ ತಂಡ ಸೇರಿದ ಅಕ್ಷಯ, ಸೈಫ್

17 ವರ್ಷಗಳ ನಂತರ ಹೈವಾನ ತಂಡ ಸೇರಿದ ಅಕ್ಷಯ, ಸೈಫ್

0

ನಟ ಅಕ್ಷಯ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ ಜಾಲಿ ಎಲ್​ಎಲ್​ಬಿ ಚಿತ್ರ ಬಿಡುಗಡೆ ಹಂತದಲ್ಲಿ ಇದೆ. ಈ ಚಿತ್ರ ಬಿಡುಗಡೆಗೂ ಮುನ್ನವೇ ನಟ ಅಕ್ಷಯ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ. ‘ಭೂಲ್ ಭುಲೈಯಾ’ ಖ್ಯಾತಿಯ ನಿರ್ದೇಶಕ ಪ್ರಿಯದರ್ಶನ್ ಅವರೊಂದಿಗೆ ‘ಹೈವಾನ್’ ಎಂಬ ಸಾಹಸಮಯ ಚಿತ್ರ ಮಾಡಲಿದ್ದಾರೆ.

17 ವರ್ಷ ಬಳಿಕ ಒಂದಾದ ಜೋಡಿ: ‘ಹೈವಾನ್’ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಜೋತೆ 17 ವರ್ಷಗಳ ಬಳಿಕ ನಟ ಸೈಫ್ ಅಲಿ ಖಾನ್ ಜೊತೆ ಚಿತ್ರ ಮಾಡಲಿದ್ದಾರೆ. ಈ ಜೋಡಿಯು 2008 ರ ತಶನ್ ಚಿತ್ರದಲ್ಲಿ ಕೊನೆಯ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿತ್ತು. ನಂತರ 17 ವರ್ಷಗಳ ನಂತರ ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ನಡುವಿನ ಮೊದಲ ಸಹಯೋಗ ಇದಾಗಿದೆ. ಇದಕ್ಕೂ ಮೊದಲು, ಅವರು ಮೈ ಖಿಲಾಡಿ ತು ಅನಾರಿ (1994), ಯೇ ದಿಲ್ಲಗಿ (1994), ತು ಚೋರ್ ಮೈ ಸಿಪಾಹಿ (1996), ಮತ್ತು ಕೀಮತ್ (1998) ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.

ಹೈವಾನ್ ಚಿತ್ರವು 2016 ರಲ್ಲಿ ಮೋಹನ್ ಲಾಲ್ ನಟಿಸಿದ ಮಲಯಾಳಂ ಚಿತ್ರ ಒಪ್ಪಂನ ಹಿಂದಿ ರಿಮೇಕ್ ಆಗಿದೆ. ಚಿತ್ರ ನಿರ್ಮಾಪಕ ಪ್ರಿಯದರ್ಶನ್ ಜುಲೈನಲ್ಲಿ ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ಸಮಯದಲ್ಲಿ ಸೈಫ್ ಅಲಿ ಖಾನ್ ಮತ್ತು ಅಕ್ಷಯ್ ಕುಮಾರ್ ಜೊತೆಗಿನ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಚಿತ್ರವನ್ನು ಘೋಷಿಸಿದ್ದರು.

ಅಕ್ಷಯ್ ಕುಮಾರ್ ಅವರ ಮುಂಬರುವ ಚಲನಚಿತ್ರಗಳು: ನಟ ಅಕ್ಷಯ್ ಬಹು ನಿರೀಕ್ಷಿತ ಚಿತ್ರ ಜಾಲಿ ಎಲ್​ಎಲ್​ಬಿ3 ಇದೇ ಸೆಪ್ಟೆಂಬರ್ 19 ರಂದು ಬಿಡುಗಡೆಯಾಗಲಿದೆ. ಸುಭಾಷ್ ಕಪೂರ್ ನಿರ್ದೇಶನದ ಚಿತ್ರ ಜಾಲಿ ಎಲ್ಎಲ್‌ಬಿ ಸರಣಿಯ ಮೂರನೇ ಚಿತ್ರ ಇದಾಗಿದೆ. ‘ವೆಲ್ಕಮ್ ಟು ದಿ ಜಂಗಲ್’ ಮತ್ತು ‘ಹೇರಾ ಫೇರಿ 3’ ಪ್ರಿಯದರ್ಶನ್ ಅವರ ಭೂತ್ ಬಾಂಗ್ಲಾ ಜೊತೆಗೆ ಅಕ್ಷಯ್ ಕುಮಾರ್ ಅವರ ಮುಂಬರುವ ಚಿತ್ರಗಳಾಗಿವೆ

KVN ಪ್ರೊಡಕ್ಷನಲ್ಲಿ ಹೈವಾನ್‌: ಹೈವಾನ್ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ಮತ್ತು ಥೆಸ್ಪಿಯನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಈ ಚಿತ್ರವು 2026 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version