Home ಸಿನಿ ಮಿಲ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಾರ್ನಿವಲ್ ಮೆರುಗು

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಾರ್ನಿವಲ್ ಮೆರುಗು

0

ಪಣಜಿ: ಪ್ರತಿ ವರ್ಷ ಗೋವಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ಪ್ರತಿವರ್ಷ ಇಲ್ಲಿನ ಸ್ಟೇಡಿಯಂ ಒಳಗೆ ನಡೆಯುತ್ತಿದ್ದ ಉದ್ಘಾಟನಾ ಸಮಾರಂಭವನ್ನು ಕಾರ್ನಿವಲ್ ರೀತಿಯಲ್ಲಿ ರೋಮಾಂಚಕ ಮೆರವಣಿಗೆ ಹಾಗೂ ಕಲಾ ಪ್ರದರ್ಶನದೊಂದಿಗೆ ಕೇಂದ್ರ ವಾರ್ತಾ ಮತ್ತು ಪ್ರಸರಣ ಮಂತ್ರಿ ಎಲ್. ಮುರುಗನ್ ಉದ್ಘಾಟಿಸಿದರು.

ಪಣಜಿ ಇಎಸ್‌ಜಿ ಎದುರು ಬಯಲು ವೇದಿಕೆಯಲ್ಲಿ 56ನೇ ಚಲನಚಿತ್ರೋತ್ಸವ ಸಮಾರಂಭದಲ್ಲಿ ಮಾತನಾಡಿದರು. ರಾಜ್ಯಪಾಲ ಅಶೋಕ ಗಜಪತಿರಾಜು ಚಲನಚಿತ್ರೋತ್ಸವ ಉದ್ಘಾಟಿಸಿದರು.

ದಕ್ಷಿಣ ಕೋರಿಯಾ ಸಂಸದೆ ಸುಶ್ರೀ ಜೆಯಿವ್ಯಾನ್ ಕಿಮ್ ಸುಶ್ರಾವ್ಯವಾಗಿ ವಂದೇ ಮಾತರಂ ಗೀತೆ ಹಾಡಿದರು. 2004ರ ಮೊದಲು ವಿವಿಧ ರಾಜ್ಯಗಳಲ್ಲಿ ಆಯೋಜಿಸಲಾಗುತ್ತಿದ್ದ ಚಲನಚಿತ್ರೋತ್ಸವವನ್ನು ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗೋವಾಕ್ಕೆ ಕರೆತಂದರು. ಅವರ ಅವಧಿಯಲ್ಲಿಯೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗೋವಾ ಖಾಯಂ ಸ್ಥಳವನ್ನಾಗಿ ಮಾಡಿದರು ಎಂದು ಎಲ್. ಮುರುಗನ್ ಹೇಳಿದರು.

ಮುಖ್ಯಮಂತ್ರಿ ಸಾವಂತ್ ಮಾತನಾಡಿ, ಮೊದಲ ಬಾರಿಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವು ಕಾರ್ನಿವಲ್ ರೀತಿಯಲ್ಲಿ ಗೋವಾದ ಸಂಸ್ಕೃತಿಯ ಮೂಲಕ ಉದ್ಘಾಟನೆಗೊಳ್ಳುತ್ತಿದೆ. ಈ ಮೂಲಕ ಸ್ಥಳೀಯ ಸಂಸ್ಕೃತಿಯನ್ನು ಹೈಲೆಟ್ ಮಾಡಲಾಗುತ್ತಿದೆ. ಗೋವಾ ರಾಜ್ಯವು ಗ್ಲೋಬಲ್ ಫಿಲ್ಮ್‌ ಡೆಸ್ಟಿನೇಶನ್ ಆಗಿದೆ. ವಿಶ್ವದ ಸಿನೆಮಾ ಕಲಾವಿದರು ಒಗ್ಗೂಡುವ ಬೃಹತ್ ವೇದಿಕೆ ಇದಾಗಿದೆ ಎಂದರು. ಕೇಂದ್ರ ಸಚಿವ ಶ್ರೀಪಾದ ನಾಯಕ, ನಿರ್ದೇಶಕ ಶೆಖರ್ ಕಪೂರ್, ಬಾಲಿವುಡ್ ನಟ ಅನುಪಮ್ ಖೇರ್, ರಾಜ್ಯಸಭಾ ಸದಸ್ಯ ಸದಾನಂದ ತಾನಾವಡೆ ಸೇರಿದಂತೆ ಚಲನಚಿತ್ರ ಕ್ಷೇತ್ರದ ಕಲಾವಿದರು ಪಾಲ್ಗೊಂಡಿದ್ದರು.

ಚಲನಚಿತ್ರ ಕ್ಷೇತ್ರದಲ್ಲಿ 50 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಎನ್. ಬಾಲಕೃಷ್ಣನ್‌ರನ್ನು ಗೌರವಿಸಲಾಯಿತು. ಎಂಟರ್‌ಟೈನ್ಮೆಂಟ್ ಸೊಸೈಟಿ ಆಫ್ ಗೋವಾ ಕಾರ್ಯಾಲಯದ ಬಳಿಯಿಂದ ಕಲಾ ಅಕಾಡೆಮಿಯವರೆಗೆ ಪೆರೇಡ್ ನಡೆಯಿತು. ಈ ಪೆರೇಡ್‌ನಲ್ಲಿ ವಿವಿಧ ರಾಜ್ಯಗಳ ಚಿತ್ರರಥಗಳು ಹಾಗೂ ಭಾರತೀಯ ಸಂಸ್ಕೃತಿಯ ಪ್ರದರ್ಶನ ನಡೆಯಿತು. ಈ ಪೆರೇಡ್‌ನಲ್ಲಿ ಒಟ್ಟು 34 ಸ್ತಬ್ಧಚಿತ್ರಗಳು ಭಾಗವಹಿಸಿದ್ದವು.

NO COMMENTS

LEAVE A REPLY

Please enter your comment!
Please enter your name here

Exit mobile version