Home ಸಿನಿ ಮಿಲ್ಸ್ ದೀಪಿಕಾ ದಾಸ್ VS ಯಶ್ ತಾಯಿ ಪುಷ್ಪಾ: ದೀಪಿಕಾ ಖಡಕ್ ಪ್ರತಿಕ್ರಿಯೆ

ದೀಪಿಕಾ ದಾಸ್ VS ಯಶ್ ತಾಯಿ ಪುಷ್ಪಾ: ದೀಪಿಕಾ ಖಡಕ್ ಪ್ರತಿಕ್ರಿಯೆ

0

ದೀಪಿಕಾ ದಾಸ್ ಮತ್ತು ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ನಡುವೆ ಜಟಾಪಟಿ ನಡೆಯುತ್ತಿದೆ. ಯಶ್ ತಾಯಿ ಪುಷ್ಪಾ ದೀಪಿಕಾ ದಾಸ್‌ಗೆ ದೊಡ್ಡಮ್ಮ ಆಗಬೇಕು. ಆದರೆ ಈಗ ಅವರು ಪುಷ್ಪಾ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಖಡಕ್ ಪೋಸ್ಟ್ ಹಾಕಿದ್ದಾರೆ.

ದೀಪಿಕಾ ದಾಸ್‌ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘ಹೊಸ ಕಲಾವಿದರನ್ನ ಬೆಳಿಸೋ ಜನರು ಕಲಾವಿದರಿಗೆ ಬೆಲೆಕೊಡೋದ್ದನ್ನು ಕಲಿತಿರಬೇಕು. ಇಲ್ಲಿವರೆಗೂ ಯಾರ ಹೆಸರನ್ನು ಹೇಳಿಕೊಂಡು ಬಂದಿಲ್ಲ ಮುಂದೇನು ಬರಲ್ಲ..ಕೆಲವರಿಗೆ ಬೆಲೆಕೊಟ್ಟ ಮಾತ್ರಕ್ಕೆ ಯಾರನ್ನು ಕಂಡು ಭಯ ಯಾರಿಗೂ ಇಲ್ಲ..ಅದು ಅಮ್ಮ ಆದರೂ ಸರಿ ದೊಡ್ಡಮ್ಮ ಆದರೂ ಸರಿ ಅಥವಾ ಪುಷ್ಪಮ್ಮ ಆದರೂಸರಿ..ವಿಥ್ ಡ್ಯೂ ರೆಸ್ಪೆಕ್‌ಟು ಸ್ಟಾರ್ ಆಫ್ ಅವರ್ ಇಂಡಸ್ಟ್ರಿ’ ಎಂದು ಹೇಳಿದ್ದಾರೆ.

‘ನಾನು ಯಾವ ದೊಡ್ಡ ನಟಿ ಅಲ್ಲದಿದ್ದರು ಏನು ಸಾಧನೆ ಮಾಡದಿದ್ದರೂ..ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ’ ಎಂದು ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

ಯಶ್ ತಾಯಿ ಪುಷ್ಪಾ ದೀಪಿಕಾಗೆ ದೊಡ್ಡಮ್ಮ ಆಗಬೇಕು. ಆದರೆ, ದೀಪಿಕಾ ಕುಟುಂಬದ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು ಕಡಿಮೆ. ಆದರೆ ಯಶ್ ತಾಯಿ ಪುಷ್ಪಾ ‘ಕೊತ್ತಲವಾಡಿ’ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಯೂಟ್ಯೂಬ್ ಚಾಲನ್‌ಗಳಿಗೆ ಸಂದರ್ಶನ ನೀಡುವಾಗ ದೀಪಿಕಾ ಕುರಿತು ಮಾತನಾಡಿದ್ದರು.

ಪುಷ್ಪಾ ದೀಪಿಕಾ ಬಗ್ಗೆ ಲಘುವಾಗಿಯೇ ಮಾತನಾಡಿದ್ದು ಈ ವಿಡಿಯೋಗಳು ವೈರಲ್ ಆಗಿವೆ. ಇದನ್ನು ನೋಡಿದ ದೀಪಿಕಾ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಯಶ್ ತಾಯಿ ಪುಷ್ಪಾ ಅವರ ಹೆಸರನ್ನು ಹೇಳಿಯೇ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಸಂದರ್ಶನದಲ್ಲಿ ಯಶ್ ತಾಯಿ ಪುಷ್ಪಾಗೆ ನಿಮ್ಮ ಚಿತ್ರದಲ್ಲಿ ದೀಪಿಕಾ ದಾಸ್ ಅವರಿಗೆ ಅವಕಾಶ ಕೊಡುತ್ತೀರಾ? ಎಂದು ಪ್ರಶ್ನೆ ಮಾಡಲಾಗಿತ್ತು. ಆಗ ಅವರು ಇಂತಹ ಪ್ರಶ್ನೆಗಳನ್ನು ಯಾಕೆ ಕೇಳುತ್ತೀರಿ?. ದೀಪಿಕಾ ದಾಸ್‌ಗೂ ನಮಗೂ ಆಗಲ್ಲ. ಅವಳು ಯಾವ ದೊಡ್ಡ ಹೀರೊಯಿನ್ನು, ಆಯ್ಕೆ ಮಾಡಿಕೊಳ್ಳಲು, ಯಾವ ಸಾಧನೆ ಮಾಡಿದ್ದಾಳೆ ಎಂದು ಕರೆದು ಅವಕಾಶ ಕೊಡುವುದು? ಎಂದು ಉತ್ತರಿಸಿದ್ದರು.

“ಸಂಬಂಧ ಆದರೂ ಅವರನ್ನು ದೂರದಲ್ಲೇ ಇಟ್ಟಿದ್ದೀವಿ. ಅವರ ಬಗ್ಗೆ ಯಾಕೆ ಕೇಳ್ತೀರಾ? ನನ್ನ ಮಗ ಬೈಯಲ್ವಾ? ಇನ್ನು ಬಹಳ ಹೀರೊಯಿನ್ ಇದ್ದಾರೆ, ಅವರ ಬಗ್ಗೆ ಕೇಳಿ” ಎಂದು ಯಶ್ ತಾಯಿ ಹೇಳಿಕೆ ಕೊಟ್ಟಿದ್ದರು. ಈಗ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೀಪಿಕಾ ಗರಂ ಆಗಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version