ನವ ದೆಹಲಿ: ಸೆಮಿಕಾನ್ ಇಂಡಿಯಾ 2025 ರ ನಾಲ್ಕನೇ ಆವೃತ್ತಿ ದೆಹಲಿಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2 ರಂದು ನವ ದೆಹಲಿಯ ಯಶೋಭೂಮಿ (ಭಾರತ ಅಂತರರಾಷ್ಟ್ರೀಯ ಸಮಾವೇಶ ಮತ್ತು ಎಕ್ಸ್‌ಪೋ ಸೆಂಟರ್) ನಲ್ಲಿ ಸೆಮಿಕಾನ್ ಇಂಡಿಯಾ 2025 ರ ನಾಲ್ಕನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ.
ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಕಾರ್ಯದರ್ಶಿ ಎಸ್. ಕೃಷ್ಣನ್ ಮೂರು ದಿನಗಳ ಈ ಕಾರ್ಯಕ್ರಮಗಳ ಸರಣಿಯಲ್ಲಿ ಮೈಕ್ರೋ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿ ಕಂಡಕ್ಟರ್ ಮೌಲ್ಯ ಸರಪಳಿಯಲ್ಲಿ ದೇಶದ ಬೆಳೆಯುತ್ತಿರುವ ಸಾಮರ್ಥ್ಯಗಳು ಮತ್ತು ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ನಾಲ್ಕು ಅಂತಾರಾಷ್ಟ್ರೀಯ ವೇದಿಕೆ: ಈ ಕಾರ್ಯಕ್ರಮವು ಜಾಗತಿಕ ಸೆಮಿಕಂಡಕ್ಟರ್ ನಾಯಕರು, ಉದ್ಯಮ ತಜ್ಞರು, ಶಿಕ್ಷಣ ತಜ್ಞರು, ಸರ್ಕಾರಿ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳನ್ನು ಒಟ್ಟು ಗೂಡಿಸುತ್ತದೆ, ಇದು ಜಾಗತಿಕ ಸೆಮಿಕಂಡಕ್ಟರ್ ಉದ್ಯಮದಲ್ಲಿ ಪ್ರಮುಖ ಶಕ್ತಿಯಾಗುವ ಭಾರತದ ದೃಷ್ಟಿಕೋನವನ್ನು ಹೊಂದಿದೆ. ಈ ಪ್ರದರ್ಶನದಲ್ಲಿ ಮೊದಲ ಬಾರಿಗೆ ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಮಲೇಷ್ಯಾದ ನಾಲ್ಕು ಅಂತಾರಾಷ್ಟ್ರೀಯ ವೇದಿಕೆಗಳನ್ನು ಒಳಗೊಂಡಿದೆ.
ದೇಶದ 9 ರಾಜ್ಯಗಳು ಭಾಗಿ: ಈ ಭಾರಿಯ ಸೆಮಿಕಾನ್ ಇಂಡಿಯಾ 2025 ರ ನಾಲ್ಕನೇ ಆವೃತ್ತಿಯಲ್ಲಿ ಆರು ದೇಶ-ನಿರ್ದಿಷ್ಟ ದುಂಡು ಮೇಜುಗಳು ಇರಲಿದೆ. ಕಳೆದ ವರ್ಷ, ಆರು ರಾಜ್ಯಗಳು ಭಾಗವಹಿಸಿದ್ದವು, ಈ ಭಾರಿಯ ಸೆಮಿಕಾನ್‌ಲ್ಲಿ ಒಂಬತ್ತು ರಾಜ್ಯಗಳು ಭಾಗವಹಿಸಲಿವೆ. 18 ದೇಶಗಳು ಮತ್ತು ಪ್ರದೇಶಗಳಿಂದ 350 ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದು, ದೇಶದ 9 ರಾಜ್ಯಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. 15,000 ಕ್ಕೂ ಹೆಚ್ಚು ಸಂದರ್ಶಕರ ನಿರೀಕ್ಷೆಯೊಂದಿಗೆ, ಇದು ಅರೆವಾಹಕ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳಿಗೆ ದಕ್ಷಿಣ ಏಷ್ಯಾದ ಅತಿದೊಡ್ಡ ವೇದಿಕೆಯಾಗಲಿದೆ.
ಸೆಮಿಕಾನ್ ಇಂಡಿಯಾ ಕುರಿತಂತೆ: ಭಾರತ ಸೆಮಿಕಂಡಕ್ಟರ್ ಮಿಷನ್ (ISM), ಸೆಮಿಕಾನ್ ಇಂಡಿಯಾ ಕಾರ್ಯಕ್ರಮದ ಅನುಷ್ಠಾನ ಸಂಸ್ಥೆಯಾಗಿದೆ. ISM ಜಾಗತಿಕವಾಗಿ ಸ್ಪರ್ಧಾತ್ಮಕ ಅರೆವಾಹಕ ಮತ್ತು ಪ್ರದರ್ಶನ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಪ್ರಸ್ತಾವನೆಗಳನ್ನು ಸುಗಮಗೊಳಿಸುತ್ತದೆ, ಪ್ರೋತ್ಸಾಹಕಗಳನ್ನು ನಿರ್ವಹಿಸುತ್ತದೆ ಮತ್ತು ಪಾಲುದಾರರೊಂದಿಗೆ ಸಂಘಟಿಸುತ್ತದೆ, ಭಾರತದ ಆರ್ಥಿಕ ಮತ್ತು ತಾಂತ್ರಿಕ ಭದ್ರತೆಯನ್ನು ಖಚಿತಪಡಿಸುತ್ತದೆ. ದೇಶೀಯ ನಾವೀನ್ಯತೆಯನ್ನು ಬೆಂಬಲಿಸುವುದು ಮತ್ತು ಉತ್ತೇಜಿಸುವುದು, ನಾವೀನ್ಯತೆಗೆ ಪ್ರೋತ್ಸಾಹ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ಮಾಹಿತಿ ತಂತ್ರಜ್ಞಾನದ ಕಾರ್ಯದರ್ಶಿ ಎಸ್. ಕೃಷ್ಣನ್ ತಿಳಿಸಿದರು.
“ಮೇಡ್ ಇನ್ ಇಂಡಿಯಾ” ಚಿಪ್: ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯ ವೇದಿಕೆಯಿಂದ ಪ್ರಧಾನ ಮಂತ್ರಿಗಳು ಸೆಮಿಕಂಡಕ್ಟರ್ ಇಂಡಿಯಾ ಮಿಷನ್ (ಐಎಸ್‌ಎಂ) ಅಡಿಯಲ್ಲಿ ಸಾಧಿಸಿದ ಪ್ರಗತಿಯ ಕುರಿತಂತೆ ಜಗತ್ತಿಗೆ ಸಾಧನೆಯನ್ನು ಸಾರಿದ್ದಾರೆ. ಸೆಮಿ ಕಾರ್ಯಾಚರಣೆಯ ವಿವಿಧ ಹಂತಗಳಲ್ಲಿ ಅನುಮೋದನೆ ಪಡೆದ ಮುಂಬರುವ 10 ಯೋಜನೆಗಳು ಮತ್ತು ಈ ವರ್ಷದ ಅಂತ್ಯದ ವೇಳೆಗೆ ಮೊದಲ “ಮೇಡ್ ಇನ್ ಇಂಡಿಯಾ” ಚಿಪ್ ತಯಾರಿಕೆ ಕುರಿತಂತೆ ಹೇಳಲಾಗಿದೆ. ವಿಶ್ವದರ್ಜೆಯ ಸೆಮಿಕಂಡಕ್ಟರ್ ಉದ್ಯಮವನ್ನು ನಿರ್ಮಿಸುವ ಕಡೆಗೆ ದೇಶದ ಪ್ರಬಲ ಇಚ್ಛಾಶಕ್ತಿಯನ್ನು ಇದು ಪ್ರತಿನಿಧಿಸುತ್ತದೆ. ಚಿಪ್ ವಿನ್ಯಾಸ , ಸ್ಟಾರ್ಟ್ ಅಪ್ ಫೆವಿಲಿಯನ್ ಅನ್ನು ಇದು ಒಳಗೊಂಡಿದೆ.