DK ತಮ್ಮನ್ನು ತಾವು ಕೋಚ್ ಎಂದುಕೊಂಡಿದ್ದಾರೆ

ಮೈಸೂರು: ತವರೂರಿಗೆ ಆಗಮಿಸುತ್ತಿರುವ ಆರ್​ಸಿಬಿ ತಂಡವನ್ನು ಆತ್ಮಿಯವಾಗಿ ಬರಮಾಡಿಕೊಂಡವರು ಉಪಮುಖ್ಯಮಂತ್ರಿ ಡಿ. ಕೆ. ಶಿವಮಕುಮಾರ ಅವರು ರಾಜ್ಯದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿ, ಸಂಭ್ರಮದಲ್ಲಿ ಭಾಗವಹಿಸಿ ಎಂದು ಕರೆ ನೀಡಿದ್ದು ನೀವೆ ಅಲ್ಲವೇ ಎಂದು ಸಿದ್ದರಾಮಯ್ಯನವರನ್ನ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿ ಉಪಮುಖ್ಯಮಂತ್ರಿಯವರು ಆರ್‌ಸಿಬಿ ತಂಡವನ್ನು ಏರ್​ಪೋರ್ಟ್​ಗೆ ಹೋಗಿ ಸ್ವಾಗತಿಸುತ್ತಾರೆ. ಅವರೇ ಟೀಮ್​ಗೆ ಕೋಚಿಂಗ್​ ನೀಡಿದಂತೆ ವರ್ತಿಸುತ್ತಿದ್ದಾರೆ. ಟೀಮ್​ನ ಬರಮಾಡಿಕೊಂಡು, ಗೆದ್ದ ಕಪ್​ಗೆ ಮುತ್ತಿಡುತ್ತಾರೆ. ಸಂಭ್ರಮಾಚಾರಣೆ ಮಾಡುವುದಕ್ಕೆ ಯಾವುದೇ ತಯಾರು ಮಾಡಿಕೊಂಡಿಲ್ಲಾ ಅಂತಾ ಬೆಂಗಳೂರು ನಗರ ಪೊಲೀಸ್​ ಆಯುಕ್ತ ದಯಾನಂದ್​ ಅವರು ಬರವಣಿಗೆಯಲ್ಲಿ ನೀಡಿಲ್ಲ ಎಂದು ನೀವು ಅವರನ್ನು ಸಸ್ಪೆಂಡ್​ ಮಾಡುತ್ತಿದ್ದೀರಿ. ಮಾಜಿಸ್ಟ್ರಿಯಲ್​ ತನಿಖೆ ಅಂತಾ ಆತುರದ ನಿರ್ಧಾರ, ನಿಮಗೆ ಬುದ್ದಿಯಿರಲಿಲ್ಲವೇ ಸಿದ್ದರಾಮಯ್ಯನವರೆ? ಸಾಧನೆ ಮಾಡಿದವರ ಜೊತೆ ನಿಂತು ಕ್ರೆಡಿಟ್ ತೆಗೆದುಕೊಳ್ಳುವ ಚಟ ನಿಮಗೆ ಬಂದಿದೆ, ಕರೆ ಕೊಟ್ಟಿದ್ದು ನೀವು, ಆದರೆ ಗೂಬೆ ಕೂರಿಸುವುದು ಮತ್ತೊಬ್ಬರ ಮೇಲೆಯೇ. ನಾಚಿಕೆ ಮಾನ ಮರ್ಯಾದೆ ಇಲ್ಲದೆ ವರ್ತಿಸುತ್ತಿರುವುದು ನಿಜಕ್ಕೂ ದುರಂತ , ಒಂದೇ ಒಂದು ಕ್ಷಣವೂ ಕಾಯದೇ ಕೂಡಲೇ ಡಿಸಿಎಂ ಡಿಕೆ ಶಿವಕುಮಾರ್​ ರಾಜೀನಾಮೆ ನೀಡಬೇಕು. ನೈತಿಕ ಹೊಣೆಯನ್ನು ಸಿಎಂ ಸಿದ್ದರಾಮಯ್ಯ ಹೊರಬೇಕು. ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ನಡೆಯುತ್ತಿರುವಾಗಲೇ, ಜನರ ಸಾವಿನ ಸುದ್ದಿ ಹರಡಿತ್ತು. ಆದರೂ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಂಭ್ರಮಕ್ಕೆ ಉಪಮುಖ್ಯಮಂತ್ರಿ ತೆರಳಿ ಸಂಭ್ರಮಿಸುತ್ತಾರೆ. ಇದು ಅಕ್ಷಮ್ಯ ಅಪರಾಧವಲ್ಲವೇ? ಉಪಮುಖ್ಯಮಂತ್ರಿ ಸ್ಥಾನದಿಂದ ಡಿಕೆ ಶಿವಕುಮಾರ್ ಅವರನ್ನು ತೆಗೆದುಹಾಕಿ ವಿಚಾರಣೆಗೆ ಒಳಪಡಿಸುತ್ತೀರಾ? ಯಾವ ನೈತಿಕ ಹೊಣೆ ಹೊರುತ್ತಿರಾ ಸಿದ್ದರಾಮಯ್ಯನವರೇ? ತರಾತುರಿಯಲ್ಲಿ ಮಾಜಿಸ್ಟ್ರಿಯಲ್​ ತನಿಖೆ ನಿಮಗೆ ಬುದ್ದಿಯಿರಲಿಲ್ಲವೇ ಸಿದ್ದರಾಮಯ್ಯನವರೇ? ನ್ಯಾಯಾಲಯ ಪ್ರಕರಣ ತೆಗೆದುಕೊಳ್ಳುತ್ತಿದ್ದಂತೆ ನೀವು ಅಧಿಕಾರಿಗಳ ಮೇಲೆ ಕ್ರಮ ಅಂತಾ ಸಸ್ಪೆಂಡ್​ ಮಾಡುತ್ತೀರಾ. ಆರ್​ಸಿಬಿ ತಂಡ ಸಂಭ್ರಮಕ್ಕೆ ಮುಂದಾಗಿರಲಿಲ್ಲ. ಆದರೆ ನೀವು, ನಿಮ್ಮ ಸರ್ಕಾರವೇ ಒತ್ತಡ ಹಾಕಿದೆ. ಅಷ್ಟಕ್ಕೂ ಆರ್​ಸಿಬಿ ತಂಡಕ್ಕೆ ವಿಮಾನವನ್ನು ಕೊಟ್ಟು ಕಳುಹಿಸಿದವರು ಯಾರು? ಸರ್ಕಾರದಲ್ಲಿರುವ ಜನ ವಿಮಾನ ಬುಕ್​ ಮಾಡಿರುವ ಕುರಿತು ತನಿಖೆಯಾಗಬೇಕು. ತನಿಖೆ ಮಾಡಲು ಒಂದು ವಿಧಾನವಿದೆ, ಯಾವ ವಿಧಾನವನ್ನೂ ನೀವು ಪಾಲಿಸದೆ, ಹೈಕೋರ್ಟ್​​ ಅನ್ನು ಸಂಪರ್ಕಿಸದೇ ನೀವೇ ಒಬ್ಬ ನ್ಯಾಯಾಧೀಶರನ್ನು ತನಿಖೆ ಮಾಡಲು ನೇಮಿಸಿದ್ದೀರಿ. ದಾದಾಗಿರಿ ಮಾಡುವ ಡಿಸಿಎಂ ಶಿವಕುಮಾರ್​ ಕೂಡಲೇ ರಾಜಿನಾಮೆಯನ್ನು ನೀಡಬೇಕು. ನಿಮ್ಮ ತಪ್ಪನ್ನು ಮುಚ್ಚಿಹಾಕುವ ಬದಲು ನೀವು ನೈತಿಕ ಹೊಣೆ ಹೊರಬೇಕು. ಎಂದರು.